ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸ್ವಾಸ್ಥ್ಯ ವಿಮೆ: ರಾಜ್ಯ ಸಾಧನೆಗೆ ಖರ್ಗೆ ಅತೃಪ್ತಿ

Last Updated 19 ಫೆಬ್ರುವರಿ 2011, 16:15 IST
ಅಕ್ಷರ ಗಾತ್ರ

ಮೈಸೂರು: ರಾಜ್ಯವು ರಾಷ್ಟ್ರೀಯ ಸ್ವಾಸ್ಥ್ಯ ವಿಮಾ ಯೋಜನೆಯನ್ನು ಸಮರ್ಥವಾಗಿ ಜಾರಿಗೊಳಿಸುವಲ್ಲಿ  ವಿಫಲವಾಗಿದೆ’ ಎಂದು ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮಲ್ಲಿಕಾರ್ಜುನ ಖರ್ಗೆ ಶನಿವಾರ ಬೇಸರ  ವ್ಯಕ್ತ ಪಡಿಸಿದರು. ನಗರದ ಇಎಸ್‌ಐ ಆಸ್ಪತ್ರೆಯ ಆಧುನೀಕರಣಕ್ಕೆ ಶಂಕುಸ್ಥಾಪನೆಯನ್ನು ನೆರವೇರಿಸಿ ಅವರು    ಮಾತನಾಡಿದರು.

  ‘ಅಸಂಘಟಿತ ಕೂಲಿ ಕಾರ್ಮಿಕರು, ಕೃಷಿ ಕಾರ್ಮಿಕರು,    ಉದ್ಯೋಗ ಖಾತ್ರಿ ಯೋಜನೆ  ಫಲಾನುಭವಿಗಳು, ಬಡತನ  ರೇಖೆ ಕೆಳಗೆ ಇರುವ ಕುಟುಂಬಗಳ ಹಿತವನ್ನು ಕಾಯಲು ಕೇಂದ್ರ  ಸರ್ಕಾರ ರಾಷ್ಟ್ರೀಯ ಸ್ವಾಸ್ಥ್ಯ     ವಿಮಾ  ಯೋಜನೆಯನ್ನು   ರೂಪಿಸಿದೆ. ಆದರೆ ಕರ್ನಾಟಕ ಇಲ್ಲಿವರೆಗೆ ನಾಲ್ಕು ಜಿಲ್ಲೆಗಳಲ್ಲಿ ಕೇವಲ 1.61 ಲಕ್ಷ ಕುಟುಂಬಗಳಿಗೆ   ಮಾತ್ರ ಸ್ಮಾರ್ಟ್ ಕಾರ್ಡ್‌ಗಳನ್ನು ನೀಡಿದೆ. ಆದರೆ ಉಳಿದ 25 ಜಿಲ್ಲೆಯಲ್ಲಿ ಯಾವಾಗ ಜಾರಿಗೊಳಿಸುವುದು’ ಎಂದು ಪ್ರಶ್ನಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT