ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಂಪಿ ಉತ್ಸವ ಉಳ್ಳವರಿಗೆ ಸೀಮಿತ?

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಹೊಸಪೇಟೆ: ಹಂಪಿ ಉತ್ಸವದ ಎರಡು ಪ್ರಮುಖ ವೇದಿಕೆಯ ಕಾರ್ಯಕ್ರಮಗಳ ವೀಕ್ಷಣೆಗೆ ಜಿಲ್ಲಾಡಳಿತ ಪ್ಲಾಟಿನಂ ಮತ್ತು ಗೋಲ್ಡ್‌ ಕಾರ್ಡ್‌ ವಿತರಿಸುವ ಮೂಲಕ ರೂ. 18 ಲಕ್ಷ ಸಂಗ್ರಹಿಸುವ ಗುರಿ ಹೊಂದಿದೆ.

ಪ್ರಮುಖ ವೇದಿಕೆಯಲ್ಲಿ  ನಡೆ­ಯುವ ರಾಷ್ಟ್ರೀಯ ,ಅಂತರ­ರಾಷ್ಟ್ರೀಯ ಮಟ್ಟದ ಕಲಾವಿದರ ಕಾರ್ಯ­ಕ್ರಮಗಳ ವೀಕ್ಷಣೆಗೆ ಪ್ಲಾಟಿನಂ ಕಾರ್ಡ್‌ಗೆ  ರೂ. 3000 ಮತ್ತು ಗೋಲ್ಡ್‌ ಕಾರ್ಡ್‌ ದರ ರೂ. 2,000 ನಿಗದಿ­ಪಡಿಸಿದ್ದು ತಲಾ 3000 ಕಾರ್ಡ್‌­ಗಳನ್ನು ವಿತರಿಸಲಾಗು­ತ್ತದೆ. ಇನ್ನೊಂದು ವೇದಿಕೆಯಲ್ಲಿ ನಡೆಯುವ ಕಾರ್ಯ­ಕ್ರಮಗಳ ವೀಕ್ಷಣೆಗೆ ಪ್ಲಾಟಿನಂ ಕಾರ್ಡ್‌ಗೆ ರೂ. 2000 ಮತ್ತು ಗೋಲ್ಡ್‌ ಕಾರ್ಡ್‌ ದರ ರೂ. 1,000 ನಿಗದಿಪಡಿ­ಸಿದ್ದು ತಲಾ 1000 ಕಾರ್ಡ್‌ಗಳನ್ನು ವಿತರಿಸಲಾಗುತ್ತದೆ  ಎಂದು  ಜಿಲ್ಲಾ­ಧಿ­ಕಾರಿ ಎ.ಎ.ಬಿಸ್ವಾಸ್‌ ‘ಪ್ರಜಾವಾಣಿ’ಗೆ ತಿಳಿಸಿದರು.

ಪ್ರಮುಖ ವೇದಿಕೆಗಳ ಕಾರ್ಯಕ್ರಮ­ ವೀಕ್ಷಣೆಗೆ ಹೆಚ್ಚು ಶುಲ್ಕ ವಿಧಿಸುವ ಮೂಲಕ ಹಂಪಿ ಉತ್ಸವ ಉಳ್ಳವರಿಗೆ ಸೀಮಿತವಾಗಲಿದೆ ಎಂಬ ಆರೋಪ ಕೇಳಿಬಂದಿದೆ. ಆದರೆ ಇದನ್ನು ಒಪ್ಪದ ಜಿಲ್ಲಾಧಿಕಾರಿಯವರು, ‘ಪ್ಲಾಟಿನಂ ಹಾಗೂ ಗೋಲ್ಡ್‌ ಕಾರ್ಡ್‌ ಮೂಲಕ ಆಸನ ಕಾಯ್ದಿರಿಸುವುದರಿಂದ ಸಾಮಾನ್ಯ ಜನರಿಗೆ ತೊಂದ­ರೆಯೂ ಆಗುವುದಿಲ್ಲ. ಅವರಿಗೂ ಸ್ಥಳಾವಕಾಶ ಮಾಡಿಕೊಡ­ಲಾಗುವುದು’ ಎನ್ನುತ್ತಾರೆ.

ವಿಶೇಷ ಆಹ್ವಾನಿ­ತರಿಗೆ ಸುಮಾರು 2,500 ಪಾಸ್‌­ಗಳನ್ನು ವಿತರಿಸ­ಲಾಗಿದೆ. ಪ್ಲಾಟಿನಂ ಮತ್ತು ಗೋಲ್ಡ್‌ ಕಾರ್ಡ್‌ ವಿತರಿಸುವ ಮೂಲಕ ಹೆಚ್ಚಿನ ಆಸನಗಳು ಈ ವರ್ಗಕ್ಕೆ ಮೀಸಲಾಗು­ವುದರಿಂದ ಉತ್ಸವಕ್ಕೆ ಪ್ರೇಕ್ಷಕರ ಕೊರತೆ ಕಾಡಬಹುದು ಎಂಬ ಆತಂಕವೂ ಇದೆ.

‘ಹಂಪಿ ಉತ್ಸವ ಜನರ ಉತ್ಸವವಾ­ಗುವ ಉದ್ದೇಶದಿಂದ ಆರಂಭಿಸಲಾ­ಗಿತ್ತು. ಆದರೆ, ಉತ್ಸವದ ಅಂಗವಾಗಿ ಪ್ರತಿಯೊಂದರಲ್ಲೂ ಶುಲ್ಕ ವಿಧಿಸುವ ಮೂಲಕ ಉತ್ಸವದ ಕೆಲ ಕಾರ್ಯಕ್ರಮ­ಗಳು ಹಾಗೂ ಸ್ಪರ್ಧೆಗಳು ಸಾಮಾನ್ಯ ಜನರಿಗೆ ನಿಲುಕದಂತಾ­­­­­­­ಗಿವೆ. ಹಣದ ಕೊರತೆ ಇದ್ದರೆ ಉತ್ಸವವನ್ನು ಈ ವರ್ಷವೂ ರದ್ದು ಮಾಡಲಿ. ಆದರೆ, ಅನುದಾನದ ಕೊರತೆ ನೆಪವೊಡ್ಡಿ ಈ ರೀತಿ ಜನರ ಜೇಬಿಗೆ ಕತ್ತರಿ ಹಾಕುವ ಕೆಲಸಕ್ಕೆ ಜಿಲ್ಲಾಡಳಿತ ಮುಂದಾಗ­ಬಾರದು’ ಎಂದು ಕಮಲಾಪುರದ ವಿಜಯನಗರ ಸ್ಮಾರಕ, ಸಂಸ್ಕೃತಿ ಸಂರಕ್ಷಣಾ ಸೇನೆ ಜಿಲ್ಲಾ ಸಂಚಾಲಕ ವಿಶ್ವನಾಥ ಮಾಳಗಿ ಅವರು ಅಭಿಪ್ರಾಯಪಟ್ಟರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT