ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕಿಯ ಲೋಕ

Last Updated 2 ಫೆಬ್ರುವರಿ 2013, 19:59 IST
ಅಕ್ಷರ ಗಾತ್ರ

1. ಪ್ರಾಣಿ ಸಾಮ್ರಾಜ್ಯದಲ್ಲಿ ಹಕ್ಕಿಗಳಿಗಷ್ಟೇ ಸೀಮಿತವಾದ ಅತ್ಯಂತ ವಿಶಿಷ್ಟ ಗುಣ ಯಾವುದು?

ಅ. ಹಾರಾಟ ಶಕ್ತಿ
ಬ. ಮೊಟ್ಟೆ ಇಡುವ ಸಂತಾನ ಕ್ರಮ
ಕ. ಪುಕ್ಕ-ಗರಿಗಳ ಅಸ್ತಿತ್ವ
ಡ. ಕೊಕ್ಕಿನಿಂದ ಕೂಡಿದ ಶಿರ

2. ಹಕ್ಕಿಗಳಲ್ಲಿ ಸಮೀಪ ಹತ್ತು ಸಾವಿರ ಪ್ರಭೇದಗಳಿವೆ. ಅಷ್ಟೂ ಪ್ರಭೇದಗಳ ಪುಕ್ಕ-ಗರಿಗಳ ವರ್ಣವಿನ್ಯಾಸ ಭಿನ್ನ ಭಿನ್ನ (ಚಿತ್ರ 1, 2). ಈ ಭಿನ್ನ ವಿಭಿನ್ನ ವೇಷಗಳಿಂದ ಹಕ್ಕಿಗಳಿಗೆ ಏನೇನು ಪ್ರಯೋಜನ?

ಅ. ಸ್ವಪ್ರಭೇದ ಪತ್ತೆ
ಬ. ಹೆಣ್ಣು-ಗಂಡು ಅಂತರ ಪತ್ತೆ
ಕ. ಹೆಣ್ಣನ್ನು ಆಕರ್ಷಿಸಲು ನೆರವು
ಡ. ಶತ್ರುಗಳಿಂದ ರಕ್ಷಣೆ
ಇ. ಆಹಾರ ಗಳಿಕೆಗೆ ನೆರವು

3. ಬೃಹತ್-ಕೊಕ್ಕಿನ ಪ್ರಸಿದ್ಧ ಪಕ್ಷಿಯೊಂದು ಚಿತ್ರ-3 ರಲ್ಲಿದೆ. ಸಂಗಾತಿಯನ್ನು ಆಕರ್ಷಿಸಲು ಒಲಿಸಿಕೊಳ್ಳಲು ಗಂಡು ಹಕ್ಕಿಯೊಂದು ನಿರ್ಮಿಸುತ್ತಿರುವ ಸಸ್ಯ ಮಂಟಪ ಚಿತ್ರ-4 ರಲ್ಲಿದೆ. ಈ ಎರಡೂ ಹಕ್ಕಿಗಳನ್ನು ಗುರುತಿಸಬಲ್ಲಿರಾ?

4. ಸುಪ್ರಸಿದ್ಧ ಪಕ್ಷಿ `ಗೂಬೆ' ಚಿತ್ರ-5 ರಲ್ಲಿದೆ. ಗೂಬೆಯ ವಿಶಿಷ್ಟ ಲಕ್ಷಣ ಈ ಕೆಳಗಿನ ಪಟ್ಟಿಯಲ್ಲಿ ಯಾವುದು?

ಅ. ಶ್ರೇಷ್ಠ ಬೇಟೆ ಸಾಮರ್ಥ್ಯ
ಬ. ನಿಶಾಚರ ಜೀವನ ಕ್ರಮ
ಕ. ಗೂಡು ಕಟ್ಟದೆ ಮರಿಸಾಕುವ ಕ್ರಮ
ಡ. ಬರೀ ಮಾಂಸ ಸೇವಿಸುವ ಆಹಾರ ಕ್ರಮ

5. ಸಂಪೂರ್ಣ ಬಿಳಿ ಬಣ್ಣದ ಹಕ್ಕಿಯೊಂದು ಚಿತ್ರ-5 ರಲ್ಲಿದೆ. ಹೀಗೆಯೇ ಸಂಪೂರ್ಣ ಶ್ವೇತವರ್ಣದ ಹಕ್ಕಿಗಳನ್ನು ಕೆಳಗಿನ ಯಾವ ಗುಂಪುಗಳಲ್ಲಿ ಕಾಣಬಹುದು?

ಅ. ಹಂಸ ಬ. ಝೇಂಕಾರದ ಹಕ್ಕಿ
ಕ. ಕೊಕ್ಕರೆ ಡ. ಗಿಣಿ
ಇ. ಮಿಂಚುಳ್ಳಿ

6. ಇಡೀ ಖಗವರ್ಗದಲ್ಲೇ ಅತ್ಯಂತ ಹೆಚ್ಚಿನ ರೆಕ್ಕೆ ವಿಸ್ತಾರದ ವಿಶ್ವದಾಖಲೆಯ ಪಕ್ಷಿ ಚಿತ್ರ-7 ರಲ್ಲಿದೆ. ಈ ಹಕ್ಕಿಯ ಹೆಸರೇನು?

ಅ. ಕಾಂಡೋರ್ ಬ. ಗನೆಟ್
ಕ. ಆಲ್‌ಬಟ್ರಾಸ್ ಡ. ಗಿಡುಗ

7. ಬಲಿಷ್ಠ ಬೇಟೆಗಾರ ಹಕ್ಕಿಯೊಂದು ಚಿತ್ರ-8 ರಲ್ಲಿದೆ. ಈ ಸುಪ್ರಸಿದ್ಧ ಹಕ್ಕಿ ಯಾವುದು?

ಅ. ಬಾಲ್ಡ್ ಈಗಲ್ ಬ. ಈಜಿಪ್ಷಿಯನ್ ವಲ್ಚರ್
ಕ. ಆಸ್ಪ್ರೇ ಡ. ಕೈಟ್

8. ಹಾಡುಗಾರ ಹಕ್ಕಿಯೊಂದು ಚಿತ್ರ-9 ರಲ್ಲಿದೆ. ಈ ಕೆಳಗಿನ ಪಟ್ಟಿಯಲ್ಲಿ ಯಾವುದು ಹಾಡುಗಾರ ಅಲ್ಲ?

ಅ. ಹೆಜ್ಜಾರ್ಲೆ ಬ. ಕೋಗಿಲೆ
ಕ. ಗೀಜಗ ಡ. ಆರಿಯೋಲ್

9. ಬೇಟೆಗಾರನ ಕೈಗೆ ಸಿಕ್ಕಿರುವ ಹಕ್ಕಿ ಗುಂಪೊಂದು ಚಿತ್ರ-10 ರಲ್ಲಿದೆ. ಇಂಥ ಕಳ್ಳಬೇಟೆಯೇ ಅಲ್ಲದೆ ಇನ್ನೂ ಯಾವ ಕಾರಣಗಳಿಂದ ಹಕ್ಕಿಗಳು ನಾಶಗೊಳ್ಳುತ್ತಿವೆ?

ಅ. ಆವಾಸ ನಾಶ  ಬ. ಕೀಟನಾಶಕಗಳ ಭಾರೀ ಬಳಕೆ
ಕ. ಮನುಷ್ಯರ ವಿಕೃತ ಜಿಹ್ವಾ ಚಾಪಲ್ಯ
ಡ. ಸಾಕು ಹಕ್ಕಿ ದಂಧೆ
ಇ. ಪರಿಸರ ಮಾಲಿನ್ಯ

10. ಚಿತ್ರ-11 ಅನ್ನು ಎಚ್ಚರಿಕೆಯಿಂದ ಗಮನಿಸಿ. ಈ ಪಕ್ಷಿಸಂಬಂಧೀ ದೃಶ್ಯ ಏನೆಂಬುದನ್ನು ಗುರುತಿಸಿ.

11. ಪೆಂಗ್ವಿನ್ ಹಕ್ಕಿಗಳ ಒಂದು ಪ್ರಭೇದ ಚಿತ್ರ-12 ರಲ್ಲಿದೆ. ಪೆಂಗ್ವಿನ್‌ಗಳಲ್ಲೆಲ್ಲ ಅತ್ಯಂತ ದೊಡ್ಡ ಗಾತ್ರದ ಪೆಂಗ್ವಿನ್ ಪ್ರಭೇದ ಯಾವುದು?

ಅ. ಕಿಂಗ್ ಪೆಂಗ್ವಿನ್ ಬ. ಎಂಪರರ್ ಪೆಂಗ್ವಿನ್
ಕ. ರಾಯಲ್ ಪೆಂಗ್ವಿನ್ ಡ. ಜೆಂಟೂ ಪೆಂಗ್ವಿನ್

12. ಭೂ ಪರಿಸರದಲ್ಲಿ ಪಕ್ಷಿಗಳ ಪಾತ್ರ- ಈ ಪಟ್ಟಿಯಲ್ಲಿ ಏನೇನು?


ಅ. ಪರಾಗ ಸ್ಪರ್ಶ ಬ. ಬೀಜ ಪ್ರಸಾರ
ಕ. ಕೀಟಗಳ ಸಂಖ್ಯಾ ನಿಯಂತ್ರಣ
ಡ. ಮಾಲಿನ್ಯ ನಿಯಂತ್ರಣ

ಉತ್ತರಗಳು

1. ಕ-ಪುಕ್ಕ-ಗರಿ ಅಸ್ತಿತ್ವ
2. `ಇ' ಬಿಟ್ಟು ಇನ್ನೆಲ್ಲ
3. ಚಿತ್ರ-3; ಹಾರ್ನ್‌ಬಿಲ್; ಚಿತ್ರ-4; ಕುಂಜಪಕ್ಷಿ
4. ಬ-ನಿಶಾಚರ ಜೀವನ ಕ್ರಮ
5. ಅ ಮತ್ತು ಕ
6. ಕ-ಆಲ್‌ಬಟ್ರಾಸ್
7. ಬ-ಈಜಿಪ್ಷಿಯನ್ ವಲ್ಚರ್
8. ಅ-ಹೆಜ್ಜಾರ್ಲೆ
9. ಎಲ್ಲವೂ
10. ವೃಕ್ಷ ರಂಬೆಯಂತೆಯೇ ಮಾರುವೇಷ    ಧರಿಸಿರುವ ಹಕ್ಕಿ
11. ಬ-ಎಂಪರರ್ ಪೆಂಗ್ವಿನ್
12. ಎಲ್ಲವೂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT