ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಗಳನ್ನು ಸಮರ್ಪಕವಾಗಿ ನಿಭಾಯಿಸಿ

Last Updated 10 ಅಕ್ಟೋಬರ್ 2011, 5:30 IST
ಅಕ್ಷರ ಗಾತ್ರ

ಯಲ್ಲಾಪುರ: ಬೈಬಲ್‌ನಲ್ಲಿರುವ  ಮುಗ್ದತೆಯನ್ನು ಪಾಲಿಸುತ್ತಿರುವ ಯುವಕರ ಕುರಿತು ಹೆಮ್ಮಯಾಗುತ್ತಿದೆ, ಆದರೆ ಕೇವಲ ಮುಗ್ದತೆಯೇ ಜೀವನ ವಾಗದಿರಲಿ . ಯುವಕ, ಯುವತಿ ಮಂಡಳಗಳ ಮೂಲಕ ನಿಮ್ಮ ಹಕ್ಕುಗಳನ್ನು ಸಮರ್ಪಕವಾಗಿ ನಿಭಾಯಿಸಿ ಎಂದು ಚಲನಚಿತ್ರ ನಿರ್ಮಾಪಕ , ಜೆ.ಡಿ.ಎಸ್. ಮುಖಂಡ ಡಿ. ಅನಿಲಕುಮಾರ ಹೇಳಿದರು.

ಪಟ್ಟಣದ ಹೋಲಿ ರೋಜರಿ ಚರ್ಚಿನ ಆವಾರದಲ್ಲಿ ಶುಕ್ರವಾರ ರಾತ್ರಿ ಕೆನರಾ ಯುವಕ ಹಾಗೂ ಯುವತಿ ಮಂಡಳಗಳು ಜಂಟಿಯಾಗಿ ಆಯೋಜಿಸಿದ್ದ ರಸಮಂಜರಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು.

ಅಧ್ಯಕ್ಷತೆ ವಹಿಸಿದ್ದ ಫಾದರ್ ಡಿವಿಡ್ ಪಿಂಟೀ ಕೇವಲ ನಮ್ಮಂದಿಗೆ ಮಾತ್ರ ಬೆರೆಯುವ ಸಂಘ ಸಂಸ್ಥೆಗಳಿದ್ದವು , ಈ ಸಮಘಟನೆ ಸಮಾಜದೊಂದಿಗೆ ಬೆರೆ ಯುವಂತಾಗಲಿ ಎಂದು ಹಾರೈಸಿದರು.

ವೇದಿಕೆಯಲ್ಲಿ ಪ.ಪಂ. ಅಧ್ಯಕ್ಷ ಪಿ.ಟಿ.ಮರಾಠೆ, ಸಾಮಾಜಿ ಕಾರ್ಯಕರ್ತ ಪಿ.ಜಿ.ಭಟ್ಟ ವಡ್ರಮನೆ , ಸಹಾಯಕ ಫಾದರ್ ರೋಸನ್ ಫರ್ನಾಂಡಿಸ ಉಪಸ್ಥಿತರಿದ್ದರು.

  ಅಂತೋನಿ ಸ್ವಾಗತಿಸಿದರು , ವಿಲ್ಸನ್ ನಿರೂಪಿಸಿದರು. ಸಭಾ ಕಾರ್ಯಕ್ರಮದ ನಂತರದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT