ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಕ್ಕುಸ್ವಾಮ್ಯ-ಡಿಎಲ್‌ಎಫ್ ಯತ್ನ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: ಕಟ್ಟಡ, ಆವರಣ ಮತ್ತು ನಿವಾಸಿಗಳಿಗೆ ಅಪಾಯ, ಹಾನಿಯ ಸಂಭವವಿದ್ದಲ್ಲಿ ಕೈಗೊಳ್ಳಲೇಬೇಕಾದ ಸುರಕ್ಷತೆ, ಮುಂಜಾಗ್ರತೆ ಕ್ರಮಗಳಿಗೆ ಸಂಬಂಧಿಸಿ ರಿಯಲ್ ಎಸ್ಟೇಟ್ ಸಂಸ್ಥೆ `ಡಿಎಲ್‌ಎಫ್~, ಹಕ್ಕುಸ್ವಾಮ್ಯಕ್ಕೆ 5 ಅರ್ಜಿ ಸಲ್ಲಿಸಿದೆ.

`ಬದಲಾಗುತ್ತಿರುವ ಕಾಲಮಾನದಲ್ಲಿ ಆಧುನಿಕ ರಿಯಲ್ ಎಸ್ಟೇಟ್‌ನ ಅಭಿವೃದ್ಧಿಯ ಪ್ರಮುಖ ಲಕ್ಷಣ ಎಂದರೆ ಮೂಲಸೌಕರ್ಯ ವಿಚಾರದಲ್ಲಿ ವಸತಿ ಸಂಕೀರ್ಣಗಳು ಸ್ವಾವಲಂಬಿಯಾಗಿರುವುದು ಮತ್ತು ಬೆಂಕಿ ಅವಘಡ ಮತ್ತಿತರ ಸಂಭಾವ್ಯ ಅನಾಹುತ ಎದುರಿಸಲು ಪೂರ್ಣ ಸಜ್ಜಾಗಿರುವುದೇ ಆಗಿದೆ.

ಹಾಗಾಗಿಯೇ ನಮ್ಮ ವಸತಿ ನಿರ್ಮಾಣಗಳಲ್ಲಿ ಫೈರ್‌ಸ್ಟಾಪ್ ಕೇಬಲ್ ಬ್ಯಾರಿಯರ್, ಅಗ್ನಿ ಉತ್ತೇಜಕ ದ್ರಾವಣ ನಿಯಂತ್ರಣ ಸೇರಿದಂತೆ ಅವಘಡ ತಡೆಗೆ ಹೊಸ ತಂತ್ರಗಳನ್ನು ಅಳವಡಿಸಿಕೊಳ್ಳಲಾಗಿದೆ.ಜತೆಗೆ ಇವುಗಳ ಹಕ್ಕುಸ್ವಾಮ್ಯಕ್ಕೂ ಯತ್ನಿಸಲಾಗಿದೆ~ ಎಂದು `ಡಿಎಲ್   ಎಫ್~ ವ್ಯವಸ್ಥಾಪಕ ನಿರ್ದೇಶಕ ರಮೇಶ್ ಸಂಕ ಪ್ರಕಟಣೆಯಲ್ಲಿ  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT