ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಗಲು ದರೋಡೆ ತಪ್ಪಿಸಿ

Last Updated 15 ಏಪ್ರಿಲ್ 2013, 19:59 IST
ಅಕ್ಷರ ಗಾತ್ರ

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ (ಕಿಯೋನಿಕ್ಸ್) ಸಂಸ್ಥೆಯು ಕರ್ನಾಟಕ ಸರ್ಕಾರದಿಂದ ಮಾನ್ಯತೆ ಪಡೆದ ಸಂಸ್ಥೆ. ನಿರುದ್ಯೋಗಿ ಯುವಕ/ ಯುವತಿಯರಿಗೆ ಉದ್ಯೋಗ ಕಲ್ಪಿಸುವ ಉದ್ದೇಶದಿಂದ ನೋಂದಣಿ ಮಾಡಿಕೊಳ್ಳಲು ರೂ.250 ರಿಂದ ರೂ. 1000 ತನಕ ಮೊತ್ತದ ಡಿ. ಡಿ. ಯನ್ನು ಕಿಯೋನಿಕ್ಸ್‌ನವರೇ ಮುದ್ರಿಸಿರುವ ಅರ್ಜಿಯಲ್ಲಿ ಭರ್ತಿ ಮಾಡಿ ಪಡೆಯುತ್ತಿದ್ದು, ಯಾವುದೇ ರೀತಿಯ ಸ್ವೀಕೃತಿಯ ರಶೀದಿ ನೀಡುತ್ತಿಲ್ಲ. ದುರಾದೃಷ್ಟದ ಸಂಗತಿಯೆಂದರೆ ಇವರಿಂದ ಈ ತನಕ ಯಾವುದೇ ಸಂದರ್ಶನ ಕರೆಗಳೂ ಬಂದಿಲ್ಲ.

ಮತ್ತು ಕೆಲವೇ ಕೆಲವು ಮಂದಿಗೆ ಬೇರೆ ಯಾವುದೋ ಗುತ್ತಿಗೆದಾರರ ಮೂಲಕ ಉದ್ಯೋಗವನ್ನು ಕೊಡಿಸಿ ಅವರಿಂದ ಸೇವಾ ಶುಲ್ಕವನ್ನು ಉದ್ಯೋಗ ನೀಡಿದ ಪ್ರತಿ ಒಬ್ಬರಿಂದ ಅವರ ವೇತನದಲ್ಲಿ ರೂ.1000-2000 ತನಕ ಪಡೆಯುತ್ತಿದ್ದಾರೆ. ಇಷ್ಟೇ ಅಲ್ಲ ಪ್ರತಿ ವರ್ಷ ನಿರುದ್ಯೋಗಿಗಳಿಗೆ ಉದ್ಯೋಗ ಕೊಡಿಸದೇ ಇದ್ದರೂ ನವೀಕರಣ ಹೆಸರಿನಲ್ಲಿ ಪ್ರತಿ ವರ್ಷ ಮತ್ತೆ ಅಷ್ಟೇ ಮೊತ್ತವನ್ನು ಪುನಃ ಪಾವತಿಸಬೇಕಾಗುತ್ತದೆ.

ಈ ಕಿಯೋನಿಕ್ಸ್ ಸಂಸ್ಥೆ ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾಗಿದ್ದುಕೊಂಡು ಈ ರೀತಿಯಲ್ಲಿ ನಿರುದ್ಯೋಗ ಯುವಕ/ ಯುವತಿಯರಿಂದ ಉದ್ಯೋಗ ನೀಡುವ ಆಸೆ ತೋರಿಸಿ ಹಗಲು ದರೋಡೆ ಮಾಡುವ ಸಂಸ್ಥೆಯಾಗಿದೆ ಎಂಬ ಭಾವನೆ ಅಭ್ಯರ್ಥಿಗಳಲ್ಲಿ ಮೂಡುತ್ತಿದೆ.

ಸಂಸ್ಥೆಯ ಹಿರಿಯ ಅಧಿಕಾರಿಗಳು ಈಗಾಗಲೇ ನೋಂದಣಿ ಮಾಡಿಸಿರುವ ನಿರುದ್ಯೋಗಿ ಯುವಕ/ ಯುವತಿಯರಿಗೆ ಸೂಕ್ತ ಉದ್ಯೋಗ ಕೊಡಿಸಿ ಹಗಲು ದರೋಡೆಯನ್ನು ತಪ್ಪಿಸುತ್ತೇವೆ ಎಂಬ ಭರವಸೆಯನ್ನು ನೀಡುವರೇ?

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT