ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜಾರೆ ಹೋರಾಟಕ್ಕೆ ವಿದ್ಯಾರ್ಥಿಗಳ ಬೆಂಬಲ

Last Updated 19 ಆಗಸ್ಟ್ 2011, 19:30 IST
ಅಕ್ಷರ ಗಾತ್ರ

ಕೋಲಾರ: ಜನ ಲೋಕಪಾಲ್ ಮಸೂದೆ ಜಾರಿಗೆ ಆಗ್ರಹಿಸಿ ಗಾಂಧಿವಾದಿ ಅಣ್ಣಾ ಹಜಾರೆ ನಡೆಸುತ್ತಿರುವ ಹೋರಾಟಕ್ಕೆ ಬೆಂಬಲ ಸೂಚಿಸಿ ನಗರದಲ್ಲಿ ಶುಕ್ರವಾರ ಬೈರೇಗೌಡ ಎಂಜಿನಿಯರಿಂಗ್ ಕಾಲೇಜಿನ ವಿದ್ಯಾರ್ಥಿಗಳು ಮೆರವಣಿಗೆ ನಡೆಸಿ ಮಾನವ ಸರಪಳಿ ರಚಿಸಿದರು.

ಶ್ವೇತವಸ್ತ್ರ ಧರಿಸಿ `ಲೋಕಪಾಲ್ ವಿ ನೀಡ್, ಸೋ ವಿ ಲೀಡ್~ ಎಂಬ ಹೇಳಿಕೆಯುಳ್ಳ ಬೃಹತ್ ಬ್ಯಾನರ್ ಹಿಡಿದು ಮೆರವಣಿಗೆ ಆರಂಭಿಸಿದ ವಿದ್ಯಾರ್ಥಿಗಳು, ಗಾಂಧೀವನದ ಬಳಿ ಮಾನವ ಸರಪಳಿ ರಚಿಸಿದರು. ದೇಶದಲ್ಲಿ ವ್ಯಾಪಕವಾಗಿ ಬೇರುಬಿಟ್ಟಿರುವ ಭ್ರಷ್ಟಾಚಾರವನ್ನು ಬುಡಮಟ್ಟದಿಂದ ತೊಲಗಿಸಲು ಲೋಕಪಾಲ್ ಮಸೂದೆ ಜಾರಿಗೆ ಬರಲೇಬೇಕು. ಈ ನಿಟ್ಟಿನಲ್ಲಿ ಹಜಾರೆ ಹೋರಾಟಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಬೇಕು ಎಂದು ಆಗ್ರಹಿಸಿದರು. ಭ್ರಷ್ಟಾಚಾರದ ವಿರುದ್ಧ ರೂಪಕವೊಂದನ್ನು ಪ್ರದರ್ಶಿಸಿದರು.

ಮೆರವಣಿಗೆಯಲ್ಲಿ ಭಾಗವಹಿಸಿದ್ದ ವಾಹನವೊಂದಕ್ಕೆ `ಭಾರತೀಯರು ನಾವೆಲ್ಲ ಒಂದೇ, ಭ್ರಷ್ಟಾಚಾರ ತೊಲಗಿಸಲು ನಡೆಯೋಣ ಮುಂದೆ~ ಎಂಬ ಘೋಷಣೆಯುಳ್ಳ ಬ್ಯಾನರ್ ಅಳವಡಿಸಲಾಗಿತ್ತು. ಸಂಸ್ಥೆಯ ಪ್ರಮುಖರಾದ ವಿ.ಕೃಷ್ಣಾರೆಡ್ಡಿ, ಡಾ.ಪ್ರಭಾಕರ್, ಮಾರ್ಕಂಡಾನಂದ, ಸುವರ್ಣಾರೆಡ್ಡಿ, ಡಾ.ಕೆ.ಜಿ.ಮೋಹನ್ ಇತರರು ಭಾಗವಹಿಸಿದ್ದರು.

 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT