ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಜ್ ಯಾತ್ರೆ: 5 ಭಾರತೀಯರ ಸಾವು

Last Updated 12 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ಜೆಡ್ಡಾ (ಐಎಎನ್‌ಎಸ್): ವಾರ್ಷಿಕ ಹಜ್ ಯಾತ್ರೆ ಕೈಗೊಂಡಿರುವ ಐವರು ಭಾರತೀಯ ಯಾತ್ರಿಕರು ಸೌದಿ ಅರೇಬಿಯಾದಲ್ಲಿ ಮೃತ ಪಟ್ಟಿದ್ದಾರೆ.

ಈ ಪೈಕಿ ನಾಲ್ವರು ಭಾರತೀಯ ಹಜ್ ಸಮಿತಿಯಿಂದ ಬಂದಿದ್ದು ಮತ್ತೊಬ್ಬರು ಖಾಸಗಿ ಪ್ರವಾಸ ನಡೆಸುವ ಸಂಸ್ಥೆಯಿಂದ ಬಂದವರು ಎಂದು ಭಾರತೀಯ ದೂತಾವಾಸ ಕಚೇರಿ ಮಂಗಳವಾರ ಸಂಜೆ ತಿಳಿಸಿದೆ.

ವಾರ್ಷಿಕ ಹಜ್ ಯಾತ್ರೆಗೆ ಭಾರತದಿಂದ ಇಲ್ಲಿಗೆ ಒಟ್ಟು 42,929 ಮಂದಿ ಬಂದಿದ್ದಾರೆ. ಇವರಲ್ಲಿ 7,852 ಮಂದಿ ಮೆಕ್ಕಾದಲ್ಲಿ ಇದ್ದು 35,073 ಮಂದಿ ಮದೀನಾದಲ್ಲಿ ಇದ್ದಾರೆ.

ಮುಸ್ಲಿಮರ ಪವಿತ್ರ ನಗರವಾದ ಮೆಕ್ಕಾಗೆ ಜೀವಿತಾವಧಿಯಲ್ಲಿ ಒಮ್ಮೆ ಹಜ್ ಯಾತ್ರೆ ಕೈಗೊಳ್ಳುವುದು ಇಸ್ಲಾಂನಲ್ಲಿ ಅನಿವಾರ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT