ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಟ್ಟಿ ಗಣಿ: ವರಮಾನ ಹೆಚ್ಚಳ

Last Updated 10 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಹಟ್ಟಿ ಚಿನ್ನದ ಗಣಿ: ಚಿನ್ನದ ಬೆಲೆ ದಿನದಿಂದ ದಿನಕ್ಕೆ ಗಗನಕ್ಕೇರುತ್ತಿದ್ದು ಚಿನ್ನದ ಗಣಿ ಆಡಳಿತ ಗುರಿ ಮೀರಿ ವರಮಾನ ಗಳಿಸುವ ನಿರೀಕ್ಷೆಯಲ್ಲಿದೆ.

ಷೇರು ಮಾರುಕಟ್ಟೆಯಲ್ಲಿ ಸೂಚ್ಯಂಕ ಕುಸಿತ ಕಂಡ ಹಿನ್ನೆಲೆಯಲ್ಲಿ ಹೂಡಿಕೆದಾರರು ಚಿನ್ನ ಖರೀದಿಯಲ್ಲಿ ತೊಡಗ್ದ್ದಿದು ಚಿನ್ನದ ಬೆಲೆ ಏರುತ್ತಿದೆ. ಜೊತೆಯಲ್ಲಿ ಬೆಳ್ಳಿಯ ಬೆಲೆಯೂ ಹೆಚ್ಚಾಗಲಿದೆ ಎಂದು ಹೇಳಲಾಗುತ್ತಿದೆ.

ಏರುತ್ತಿರುವ ಚಿನ್ನದ ಬೆಲೆಯಿಂದ ದೇಶದಲ್ಲಿ ಅತಿ ಹೆಚ್ಚು ಚಿನ್ನ ಉತ್ಪಾದಿಸುವ ಹಟ್ಟಿ ಗಣಿ ಕಂಪೆನಿಗೆ ಹೆಚ್ಚು ಲಾಭವಾಗಲಿದೆ. ಈ ಗಣಿಗಳಲ್ಲಿ ಬರಿ ಚಿನ್ನವಲ್ಲ, ಚಿನ್ನದ ಜೊತೆಯಲ್ಲಿ ಬೆಳ್ಳಿಯನ್ನು ಉಪ ಪದಾರ್ಥವಾಗಿ ಉತ್ಪಾದಿಸಲಾಗುತ್ತಿದೆ. ಕಂಪೆನಿಯು ಉತ್ಪಾದಿಸುವ ಚಿನ್ನವು ಶೇ. 8ರಷ್ಟು ಬೆಳ್ಳಿ ಮಿಶ್ರಿತವಾಗಿರುತ್ತದೆ. ಈ ಬೆಳ್ಳಿಯಿಂದ ಕಂಪೆನಿಗೆ ಇನ್ನೂ ಹೆಚ್ಚು ವರಮಾನ ಹರಿದು ಬರಲಿದೆ ಎಂದು ಮೂಲಗಳು ತಿಳಿಸಿವೆ. 2008-09ರಲ್ಲಿ 2.4 ಟನ್ ಚಿನ್ನ ಉತ್ಪಾದಿಸಲಾಗಿತ್ತು. ಕಂಪೆನಿಗೆ ತೆರಿಗೆ ನಂತರ ್ಙ 93 ಕೋಟಿ   ಲಾಭ ಲಭಿಸಿತ್ತು. 2009-10ರಲ್ಲಿ 2 ಟನ್ ಚಿನ್ನ ಉತ್ಪಾದಿಸಿ ್ಙ 90 ಕೋಟಿ ನಿವ್ವಳ ಲಾಭ ಬಂದಿದೆ. 2010-11ರಲ್ಲಿ 2.2 ಟನ್ ಚಿನ್ನ ಮಾರಾಟ ಮಾಡಿ ್ಙ102 ಕೋಟಿ  ಲಾಭಗಳಿಸಿದೆ.

2011, ಏಪ್ರಿಲ್‌ನಲ್ಲಿ 252 ಕೆ.ಜಿ., ಮೇನಲ್ಲಿ 219 ಕೆಜಿ, ಜೂನ್‌ನಲ್ಲಿ 218ಹಾಗೂ ಜುಲೈನಲ್ಲಿ 220 ಕೆ.ಜಿ. ಚಿನ್ನ ಉತ್ಪಾದಿಸಿದೆ. ಗಣಿ ಆಡಳಿತವು 10 ಗ್ರಾಂ ಚಿನ್ನ ಉತ್ಪಾದಿಸಲು ್ಙ  9 ರಿಂದ 10 ಸಾವಿರ  ಖರ್ಚು ಮಾಡುತ್ತಿದೆ. ಈಗ ಗಣಿಯಲ್ಲಿ ದಿನಕ್ಕೆ 6ರಿಂದ 7 ಕೆ.ಜಿ. ಚಿನ್ನದ ಉತ್ಪಾದಿಸಲಾಗುತ್ತಿದೆ. ಬೆಲೆ ಏರಿಕೆಯಿಂದ ಗಣಿ ಹೆಚ್ಚಿನ ವರಮಾನದ ನಿರೀಕ್ಷೆಯಲ್ಲಿದೆ.  

ಬೆಲೆ ಏರಿಕೆಯು ಗಣಿ ಕಾರ್ಮಿಕರ್ಲ್ಲಲಿಯೂ ಸಂತಸ ತಂದಿದೆ. ಪ್ರಸ್ತುತ ಸಾಲಿನಲ್ಲಿ ಕಾರ್ಮಿಕರ ಹೊಸ ವೇತನ ಒಪ್ಪಂದ ನಡೆಯಲ್ದ್ದಿದು ಉತ್ತಮ ವೇತನದ ನಿರೀಕ್ಷೆಯಲ್ಲಿದ್ದಾರೆ.  ಆಗ   ಸ್ಟ್ 12ರಂದು ಹೊಸ ವೇತನಕ್ಕೆ ಗಣಿ ಕಾರ್ಮಿಕ ಸಂಘ ಬೇಡಿಕೆ ಪತ್ರ ನೀಡಲಿದೆ.  ಕಾರ್ಮಿಕರಿಗೆ ಶೇ. 30ರಷ್ಟು ವೇತನ ಹೆಚ್ಚಿಸುವಂತೆ ಬೇಡಿಕೆ ಮಂಡಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT