ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ದುರಂತ: ಕಂಪೆನಿ ವಿರುದ್ಧ ದೂರು

Last Updated 25 ಜನವರಿ 2012, 19:30 IST
ಅಕ್ಷರ ಗಾತ್ರ

ರೋಮ್ (ಪಿಟಿಐ): `ಕೋಸ್ಟಾ ಕಾನ್‌ಕಾರ್ಡಿಯಾ~ ಹಡಗನ್ನು ಕಿನಾರೆಗೆ ಸಮೀಪ ತರುವಂತೆ ಹಡಗು ಕಂಪೆನಿಯ ವ್ಯವಸ್ಥಾಪಕರು ತಮ್ಮ ಮೇಲೆ ಒತ್ತಡ ತಂದಿದ್ದರು ಎಂದು ಈ ಹಡಗಿನ ಕ್ಯಾಪ್ಟನ್ ಪ್ರಾನ್ಸ್‌ಸ್ಕೊ ಶೆಟ್ಟಿನೊ ತನ್ನ ಸ್ನೇಹಿತರೊಬ್ಬರ ಬಳಿ ಹೇಳಿಕೊಂಡಿದ್ದಾರೆ ಎಂದು ಇಟಲಿಯ ಮಾಧ್ಯಮ ವರದಿ ಮಾಡಿದೆ.

`ಹಡಗು ಕಂಪೆನಿಯವರು ಆದೇ ಮಾರ್ಗದಲ್ಲಿ  ಬರುವಂತೆ ಒತ್ತಡ ತಂದರು. ಆದರೆ, ತಮ್ಮ ಬಳಿಯಿದ್ದ ಉಪಕರಣಗಳಿಂದ ಆ ಮಾರ್ಗದಲ್ಲಿ ಬಂಡೆಗಳಿದ್ದದ್ದು ಗೋಚರಿಸಲಿಲ್ಲ. ಹಾಗಾಗಿ ನಾವು ಅದೇ ಮಾರ್ಗದಲ್ಲಿ ಹಡಗನ್ನು ನುಗ್ಗಿಸಿದೆವು~ ಎಂದು ಶೆಟ್ಟಿನೊ ಹೇಳಿದ್ದಾರೆ.

ಈ ಹಡಗು ಜ. 13ರಂದು ದುರಂತಕ್ಕೀಡಾದ ಕಾರಣ 16 ಮಂದಿ ಸಾವನ್ನಪ್ಪಿದ್ದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT