ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಡಗು ರಕ್ಷಣೆ: ಚೀನಿಯರಲ್ಲಿ ಆತಂಕ

Last Updated 3 ಜನವರಿ 2014, 19:30 IST
ಅಕ್ಷರ ಗಾತ್ರ

ಸಿಡ್ನಿ (ಎಎಫ್‌ಪಿ):  ಅಂಟಾರ್ಕ್ಟಿಕಾ ಹಿಮ ಸಾಗರದ ಮಧ್ಯೆ ಸಿಲುಕಿದ್ದ ಎಂ.ವಿ ಅಕಾಡೆಮಿಕ್‌ ಶೋಕಾಲ್‌ಸ್ಕಿಯ್‌ ಹಡಗಿ­ನಲ್ಲಿದ್ದ 52 ಪ್ರಯಾಣಿಕರನ್ನು ಸುರಕ್ಷಿತ­ವಾಗಿ ಸ್ಥಳಾಂತರಿಸಿದ್ದಕ್ಕೆ ಆಸ್ಟ್ರೇಲಿ­ಯಾದ ಅಧಿ­ಕಾರಿಗಳು ನಿಟ್ಟುಸಿರು ಬಿಟ್ಟಿದ್ದಾರೆ. ಆದರೆ, ತಮ್ಮ ದೇಶದ ಹಡಗು ಹಿಮ­ದಲ್ಲಿ ಸಿಕ್ಕಿಕೊಂಡಿ­ರುವುದಕ್ಕೆ ಚೀನಿ ಅಧಿಕಾರಿಗಳ ಆತಂಕ ಹೆಚ್ಚಿಸಿದೆ.

ರಷ್ಯಾದ ಎಂ.ವಿ ಅಕಾಡೆಮಿಕ್‌ ಶೋಕಾ­ಲ್‌ಸ್ಕಿಯ್‌ ಹಡಗಿನಲ್ಲಿ ವಿಜ್ಞಾನಿ­ಗಳು ಶೋಧ ಯಾತ್ರೆ ಕೈಗೊಂಡಿದ್ದರು. ಆದರೆ, ಡಿಸೆಂಬರ್‌ 24ರಂದು ಅಂಟಾ­ರ್ಕ್ಟಿಕಾ ಹಿಮಸಾಗರದಲ್ಲಿ ಆವರಿಸಿ­ಕೊಂಡಿದ್ದ ಭಾರಿ ಹಿಮದಲ್ಲಿ ಹಡುಗು ಸಿಲುಕಿಕೊಂಡಿತ್ತು.

ಎಂಟು ದಿನಗಳ ಬಳಿಕ ಗುರುವಾರ ಚೀನಾದ ಹಡಗಿನ ಮೂಲಕ  ಹೆಲಿಕಾಪ್ಟರ್‌ಗಳು ಕಾರ್ಯಾಚರಣೆ ನಡೆಸಿ ಪ್ರಯಾಣಿಕರನ್ನು ಆಸ್ಟ್ರೇಲಿಯಾದ ‘ಅರೊರಾ ಆಸ್ಟ್ರಾಲಿಸ್‌’ ಹಡಗಿಗೆ ಸುರ­ಕ್ಷಿತವಾಗಿ ಕೊಂಡೊಯ್ಯಲಾಗಿತ್ತು.  ಆದರೆ, ಇದೀಗ ಚೀನಾದ ಹಡಗು ಹಿಮದಲ್ಲಿ ಸಿಲುಕಿಕೊಂಡಿದ್ದು, ಹಲವು ದಿನಗಳವರೆಗೆ ಹಡಗು ಪ್ರಯಾಣ ಬೆಳೆಸಲು ಸಾಧ್ಯವಾಗುವುದಿಲ್ಲ’ ಎಂದು ಅಧಿಕಾರಿಗಳು  ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT