ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಕಾಸು ನಿಯಂತ್ರಣ ರಂಗರಾಜನ್‌ ವಿರೋಧ

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ನವದೆಹಲಿ(ಪಿಟಿಐ): ಹಣಕಾಸು ಮಾರುಕಟ್ಟೆ ಮೇಲೆ ಮಿತಿ ಮೀರಿದ ನಿಯಂತ್ರಣ ವಿಧಿಸುವ ಕ್ರಮಕ್ಕೆ ಪ್ರಧಾನಿ ಆರ್ಥಿಕ ಸಲಹಾ ಸಮಿತಿ (ಪಿಎಂಇಎಸಿ) ಅಧ್ಯಕ್ಷ ಸಿ.ರಂಗರಾಜನ್‌  ವಿರೋಧ ವ್ಯಕ್ತಪಡಿಸಿದ್ದಾರೆ.

‘ಆರ್ಥಿಕ ಸ್ಥಿರತೆಗೆ ಹಣಕಾಸು ನಿಯಂತ್ರಣ ವ್ಯವಸ್ಥೆ ಇರಬೇಕು. ಆದರೆ, ಎಲ್ಲೆ ಮೀರಿದ ನಿಯಂ-­ತ್ರಣದಿಂದ  ಹೊಸ ಹಣ­ಕಾಸು ಆವಿಷ್ಕಾರಗಳನ್ನು  ತಡೆಹಿ­ಡಿ­ದಂತಾಗುತ್ತದೆ’ ಎಂದು ಅವರು ಸೋಮವಾರ ಇಲ್ಲಿ ಭಾರತೀಯ ವಾಣಿ­ಜ್ಯೋದ್ಯಮ ಮಹಾಸಂಘ (ಅಸೋ­ಚಾಂ) ಆಯೋಜಿಸಿದ್ದ ‘ಬ್ಯಾಂಕಿಂಗ್‌ ಸಮ್ಮೇಳನ’ದಲ್ಲಿ ಅಭಿಪ್ರಾ­ಯ­ಪಟ್ಟರು.

‘ಹಣಕಾಸು ಮಾರುಕಟ್ಟೆ ಆವಿಷ್ಕಾರ ಗಳು ಮತ್ತು ಹಣ­ಕಾಸು ನಿಯಂತ್ರಣ ವ್ಯವಸ್ಥೆ ಒಂದಕ್ಕೊಂದು ಪೂರಕವಾಗಿ, ಸಮ­ತೋಲ­ನದಿಂದ ಕಾರ್ಯ­ನಿರ್ವಹಿ­ಸಬೇಕು. ಇದರಿಂದ ಆರ್ಥಿಕ ಸ್ಥಿರತೆ ಮತ್ತು ಪ್ರಗತಿ ಸಾಧ್ಯವಾಗುತ್ತದೆ. ಈ ಹಿನ್ನೆಲೆಯಲ್ಲಿ ನೀತಿ ನಿರೂಪಕರು ಸದ್ಯದ ಅಂತರರಾಷ್ಟ್ರೀಯ ಬಿಕ್ಕಟ್ಟಿನಿಂದ ಹೊಸ ಪಾಠಗಳನ್ನು ಕಲಿಯಬಹುದು’ ಎಂದು ಅವರು ಹೇಳಿದರು.

ಬ್ಯಾಂಕಿಂಗ್‌ ವ್ಯವಸ್ಥೆ ಮೇಲೆ ‘ಆರ್‌ಬಿಐ’ ನಿಯಂತ್ರಣ ಹೇರುವುದ ರಿಂದ ಸ್ಪರ್ಧಾ­ತ್ಮಕತೆ ಹೆಚ್ಚುತ್ತದೆ, ಗ್ರಾಹ ಕರಿಗೆ ಕಡಿಮೆ ದರದಲ್ಲಿ ಸೇವೆಗಳು ಲಭಿ­ಸುತ್ತವೆ. ಬ್ಯಾಂಕುಗಳು ಸಹ ಸಂಪತ್ತು ನಿರ್ವ­ಹಣೆಗೆ ಹೆಚ್ಚಿನ ಗಮನ ಹರಿಸ ಬೇಕು’ ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT