ಗುರುವಾರ, 18 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದ ಬೆನ್ನು ಹತ್ತಬೇಡಿ: ಕಾಯ್ಕಿಣಿ ಸಲಹೆ

Last Updated 7 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಯಲಹಂಕ: ಯುವಜನತೆ ಕೇವಲ ಹಣದ ಹಿಂದೆ ಓಡದೆ ಕಲೆ ಮತ್ತು ಸಾಹಿತ್ಯದ ಕಡೆಗೆ ಹೆಚ್ಚಿನ ಒಲವನ್ನು ತೋರಬೇಕು ಎಂದು ಕವಿ ಡಾ.ಜಯಂತ ಕಾಯ್ಕಿಣಿ ಹೇಳಿದರು.

ಇಲ್ಲಿನ ಶೇಷಾದ್ರಿಪುರ ಪ್ರಥಮದರ್ಜೆ ಕಾಲೇಜಿನಲ್ಲಿ  ಶನಿವಾರ ಆಯೋಜಿಸಿದ್ದ `ಕಲೆ ಮತ್ತು ಸಾಂಸ್ಕೃತಿಕ ಪ್ರೇರಣೆಗಳು' ಕುರಿತ ವಿಚಾರಸಂಕಿರಣ ಉದ್ಘಾಟಿಸಿ ಮಾತನಾಡಿದ ಅವರು, ಪ್ರತಿಯೊಬ್ಬರ ಬದುಕಿನಲ್ಲಿ ಸಂಬಂಧದ ಸವಿಯನ್ನು ಹೆಚ್ಚಿಸುವುದರಲ್ಲಿ ಕಲೆ ಮತ್ತು ಸಾಹಿತ್ಯದ ಪಾತ್ರ ದೊಡ್ಡದು ಎಂದರು.

ಕಲೆ ಎನ್ನುವುದು ಎಲ್ಲೋ ಇರದೆ, ನಮ್ಮಳಗಿನ ಅನುಭವದ ಆಳದಲ್ಲಿಯೆ ಅಡಕವಾಗಿರುತ್ತದೆ. ಅದನ್ನು ಹೊರತೆಗೆಯುವ ಸೂಕ್ಷ್ಮತೆಯಿರಬೇಕಷ್ಟೆ. ಮಗುವಿನ ಮುಗ್ಧತೆ ಮತ್ತು ತಾಯಿಯ ಕರುಣೆಯ ಕಣ್ಣಿನಲ್ಲಿ ಜಗತ್ತನ್ನು ನೋಡಿದಾಗ ಎಲ್ಲವೂ ಸುಂದರವಾಗಿ ಕಾಣುತ್ತದೆ ಎಂದರು.

ಭಾಷಾ ಸಂಗಮ ಮತ್ತು ಕನ್ನಡ ವಿಭಾಗ, ಸ್ಫೂರ್ತಿ ಸಾಂಸ್ಕೃತಿಕ ವೇದಿಕೆ ಹಾಗೂ ಬೆಳ್ಳಿಸಾಕ್ಷಿ ಸಿನಿಮಾಕ್ಲಬ್ ಆಶ್ರಯದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT