ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ 14 ತಿಂಗಳ ಗರಿಷ್ಠ

Last Updated 16 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಹಣ್ಣು ಮತ್ತು ತರಕಾರಿ ಬೆಲೆ ಏರಿಕೆಯಿಂದಾಗಿ, ಪ್ರಮುಖವಾಗಿ ಈರುಳ್ಳಿ ಮತ್ತು ಆಲೂ­ಗಡ್ಡೆ ತುಟ್ಟಿಯಾದ್ದರಿಂದ ಸಗಟು ಬೆಲೆ ಸೂಚ್ಯಂಕ  ಆಧರಿಸಿದ ಹಣದುಬ್ಬರ ದರ (ಡಬ್ಲ್ಯುಪಿಐ) ನವೆಂಬರ್‌ನಲ್ಲಿ 14 ತಿಂಗಳ ಗರಿಷ್ಠ ಮಟ್ಟವಾದ ಶೇ 7.52ಕ್ಕೆ ಜಿಗಿದಿದೆ.

2012ರ ಸೆಪ್ಟೆಂಬರ್‌ನಲ್ಲಿ ಶೇ 8.1ರಷ್ಟು ‘ಡಬ್ಲ್ಯುಪಿಐ’ ದಾಖಲಾ­ಗಿತ್ತು. ನಂತರ ದಾಖಲಾಗಿರುವ ಗರಿಷ್ಠ ಮಟ್ಟ ಇದಾಗಿದೆ.

ಹಣದುಬ್ಬರ ಏರಿಕೆಯು ಭಾರತೀಯ ರಿಸರ್ವ್ ಬ್ಯಾಂಕ್‌ (ಆರ್‌ಬಿಐ) ಡಿ.18­ರಂದು ಪ್ರಕಟಿಸಲಿರುವ ಮಧ್ಯಂತರ ತ್ರೈಮಾಸಿಕ ಹಣಕಾಸು ನೀತಿಯ ಮೇಲೆ  ಪ್ರತಿಕೂಲ ಪರಿಣಾಮ ಬೀರಲಿದೆ. ಇದರಿಂದ ಬಡ್ಡಿ ದರ ಕಡಿತ ಸಾಧ್ಯತೆ ಕ್ಷೀಣಿಸಿದೆ  ಎಂದು ಮಾರುಕಟ್ಟೆ ತಜ್ಞರು ವಿಶ್ಲೇಷಿ­ಸಿದ್ದಾರೆ.

ನವೆಂಬರ್‌ನಲ್ಲಿ ತರಕಾರಿ ಬೆಲೆ ಶೇ 95.25ರಷ್ಟು ಏರಿಕೆ ಕಂಡಿದೆ.  ಗೋಧಿ, ಹಾಲು, ಬೇಳೆಕಾಳನ್ನು ಒಳಗೊಂಡ ಇತರೆ ಆಹಾರ ಪದಾರ್ಧಗಳ ಧಾರಣೆ ಶೇ 19.93ರಷ್ಟು ಹೆಚ್ಚಿದೆ. ಆಲೂಗಡ್ಡೆ ಶೇ 26ರಷ್ಟು ತುಟ್ಟಿಯಾದರೆ, ಈರುಳ್ಳಿ ಮತ್ತೆ ಗಗನಮುಖಿಯಾಗಿದ್ದು ಶೇ 190ರಷ್ಟು ಏರಿಕೆ ಕಂಡಿದೆ. ಹಾಲಿನ ಬೆಲೆ  ಶೇ 6.25ರಷ್ಟು  ಹೆಚ್ಚಿದೆ.  ಇಂಧನ ಮತ್ತು ವಿದ್ಯುತ್‌ ವಲಯದ ಹಣದು­ಬ್ಬರ ನವೆಂಬರ್‌ನಲ್ಲಿ ಶೇ 11ರಷ್ಟು ಹೆಚ್ಚಿದೆ. ತಯಾರಿಕಾ ಸರಕುಗಳ ಬೆಲೆ ಶೇ 2.64ರಷ್ಟು ಏರಿಕೆಯಾಗಿದೆ.

ಅಕ್ಟೋಬರ್‌ನಲ್ಲಿ ಶೇ 7ರಷ್ಟು ‘ಡಬ್ಲ್ಯುಪಿಐ’ ದಾಖಲಾಗಿತ್ತು. ಅದಕ್ಕೂ ಮುನ್ನ ಇದು ಶೇ 7.05ರಷ್ಟಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT