ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಕುಸಿತ

Last Updated 14 ಜನವರಿ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸತತ ಎರಡನೇ ವಾರವೂ ಆಹಾರ ಹಣದುಬ್ಬರ ಕುಸಿತ ದಾಖಲಿಸಿದ್ದು, ಡಿಸೆಂಬರ್ 31ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಶೇ (-) 2.90ರಷ್ಟಕ್ಕೆ ಇಳಿಕೆಯಾಗಿದೆ. ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಆಹಾರ ಬೆಲೆ ಏರಿಕೆಯು ಹಿಂದಿನ ವಾರದಲ್ಲಿ ಶೇ 3.36ರಷ್ಟು ಋಣಾತ್ಮಕ ದಿಕ್ಕಿನಲ್ಲಿ ಚಲಿಸಿತ್ತು. 2010ರ ಇದೇ ಅವಧಿಯಲ್ಲಿ  ಶೇ 19ರಷ್ಟಿತ್ತು.

ಈರುಳ್ಳಿ ಬೆಲೆ ಶೇ 75,  ಆಲೂಗಡ್ಡೆ ಶೇ 32, ಗೋಧಿ ಶೇ 3.35 ರಷ್ಟು ಕಡಿಮೆಯಾಗಿದೆ. ಒಟ್ಟಾರೆ ತರಕಾರಿ ಬೆಲೆಗಳು ಶೇ 49ರಷ್ಟು ಅಗ್ಗವಾಗಿವೆ.ನವೆಂಬರ್ ತಿಂಗಳಿನಿಂದೀಚೆಗೆ ಆಹಾರ ಪದಾರ್ಥಗಳ ಬೆಲೆಗಳು ಗಮನಾರ್ಹವಾಗಿ ಕುಸಿಯುತ್ತಿದ್ದು,  ಎರಡಂಕಿ ಮಟ್ಟದಿಂದ ಈಗ  ಋಣಾತ್ಮಕ ದಿಕ್ಕಿನಲ್ಲಿ ಚಲಿಸುತ್ತಿವೆ.

ಆಹಾರ ಹಣದುಬ್ಬರ ಕುಸಿತವು, ಬಡ್ಡಿ ದರಗಳನ್ನು ಇಳಿಸಲು ಭಾರತೀಯ ರಿಸರ್ವ್ ಬ್ಯಾಂಕ್‌ಗೆ ಇನ್ನಷ್ಟು ಉತ್ತೇಜನ ನೀಡುವ ಸಾಧ್ಯತೆ ಇದೆ.ಇತರ ಕೆಲ ಆಹಾರ ಪದಾರ್ಥಗಳು ವಾರ್ಷಿಕ ನೆಲೆಯಲ್ಲಿ ಇನ್ನಷ್ಟು ತುಟ್ಟಿಯಾಗಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT