ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ: ಪ್ರಣವ್ ಸಲಹೆ

Last Updated 5 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ಕೋಲ್ಕತ್ತ (ಪಿಟಿಐ): ಆಹಾರ ಪೂರೈಕೆ ಸರಪಣಿಯಲ್ಲಿನ ಲೋಪಗಳನ್ನು ಬಗೆಹರಿಸಿದರೆ, ಹಣದುಬ್ಬರವನ್ನು ಗಣನೀಯವಾಗಿ ತಗ್ಗಿಸಬಹುದು ಎಂದು ಕೇಂದ್ರ ಹಣಕಾಸು ಸಚಿವ ಪ್ರಣವ್ ಮುಖರ್ಜಿ ಅಭಿಪ್ರಾಯಪಟ್ಟಿದ್ದಾರೆ.

ಸೆಪ್ಟಂಬರ್ 20ಕ್ಕೆ ಕೊನೆಗೊಂಡ ವಾರಾಂತ್ಯದಲ್ಲಿ ಆಹಾರ ಹಣದುಬ್ಬರ ದರವು ಎರಡಂಕಿ ತಲುಪಿದ್ದು, ಶೇ 10.5ರಷ್ಟಾಗಿದೆ.  ಹಣದುಬ್ಬರ ತಗ್ಗಿಸಲು ಸರ್ಕಾರ ತುರ್ತಾಗಿ, ಕೆಲವು ಅಗತ್ಯ ವಸ್ತುಗಳ ಪೂರೈಕೆ ಹೆಚ್ಚಿಸಲಿದೆ ಎಂದು ಅವರು  ಹೇಳಿದ್ದಾರೆ.

ಹಣದುಬ್ಬರ ದರ ಎರಡಂಕಿ ತಲುಪಿರುವುದಕ್ಕೆ ಋತುಮಾನದ ಕಾರಣ ಕೂಡ ಮುಖ್ಯವಾದದ್ದು. ಇದನ್ನು ಹೊರತುಪಡಿಸಿದರೆ, ಪೂರೈಕೆ ಸರಪಣಿಯಲ್ಲಿ ಹಲವು ಲೋಪಗಳಿವೆ. ಇದನ್ನು ನಿವಾರಿಸಲಾಗುವುದು ಎಂದರು. ಮುಂಬರುವ ವಾರಗಳಲ್ಲಿ ಹಣದುಬ್ಬರ ದರ ಇಳಿಯುವ ವಿಶ್ವಾಸವಿದೆ.

ಭಾರತೀಯ ರಿಸರ್ವ್ ಬ್ಯಾಂಕ್ ಸೆಪ್ಟೆಂಬರ್ 16ರಂದು ವಿತ್ತೀಯ ಪರಾಮರ್ಷೆ ಪ್ರಕಟಿಸಲಿದ್ದು, ಇದು ಕೂಡ ಹಣದುಬ್ಬರ ತಗ್ಗಿಸುವಲ್ಲಿ ಮಹತ್ವದ ಪಾತ್ರ ವಹಿಸಲಿದೆ ಎಂದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT