ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಶೇ 8ಕ್ಕೆ:ವಿಶ್ವಾಸ

Last Updated 13 ಫೆಬ್ರುವರಿ 2011, 18:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಆಹಾರ ಪದಾರ್ಥಗಳು ಮತ್ತು ಪೆಟ್ರೋಲ್ ದರ ತುಟ್ಟಿಯಾಗಿ ಮುಂದುವರೆದಿರುವ ಹಿನ್ನೆಲೆಯಲ್ಲಿ,  ಒಟ್ಟಾರೆ ಹಣದುಬ್ಬರ ದರ ಜನವರಿ ತಿಂಗಳಲ್ಲಿ ಶೇ 8.5ರಷ್ಟಾಗಿದೆ ಎಂದು ಆರ್ಥಿಕ ತಜ್ಞರು ಹೇಳಿದ್ದಾರೆ.

ಸಗಟು ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ ಈ ಅವಧಿಯಲ್ಲಿ ಶೇ 7.48ರಿಂದ 8.43ಕ್ಕೆ ಏರಿಕೆ ಕಂಡಿದೆ. ಫೆಬ್ರುವರಿ ಅಂತ್ಯದ ವೇಳೆಗೆ ಹೊಸ ಫಸಲು ಮಾರುಕಟ್ಟೆ ಪ್ರವೇಶಿಸುವುದರಿಂದ ಆಹಾರ ಧಾನ್ಯ, ತರಕಾರಿ ಮತ್ತು ಹಣ್ಣು ಬೆಲೆ ಇಳಿಯಲಿದೆ ಎಂದು ಕ್ರಿಸಿಲ್‌ನ ಹಿರಿಯ ಅರ್ಥಶಾಸ್ತ್ರಜ್ಞ ಡಿ.ಕೆ ಜೋಶಿ ಅಭಿಪ್ರಾಯಪಟ್ಟಿದ್ದಾರೆ. ಸಗಟು ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರದ ಅಂಕಿ ಅಂಶವನ್ನು ಸರ್ಕಾರ ಸೋಮವಾರ ಪ್ರಕಟಿಸುವ ಸಾಧ್ಯತೆ ಇದೆ. ಆಹಾರ ಹಣದುಬ್ಬರ ದರ ಕಳೆದ ಏಳು ತಿಂಗಳಲ್ಲೇ ಕನಿಷ್ಠ ಎನ್ನಬಹುದಾದ ಶೇ 13.07ರಷ್ಟನ್ನು ತಲುಪಿ, ಮತ್ತೆ ಜನವರಿಯಲ್ಲಿ ಏರಿಕೆ ಕಂಡಿದೆ.

ತೈಲ  ಕಂಪೆನಿಗಳು ಕಳೆದ ಜನವರಿ 15ರಿಂದ ಪೆಟ್ರೋಲ್ ದರವನ್ನು ಪ್ರತಿ ಲೀಟರಿಗೆ ್ಙ2.50 ಹೆಚ್ಚಿಸಿರುವುದು ಗ್ರಾಹಕರಿಗೆ ಮತ್ತಷ್ಟು ಹೊರೆಯಾಗಿದೆ. ಮಾರ್ಚ್ ಅಂತ್ಯಕ್ಕೆ ಸಗಟು ಸೂಚ್ಯಂಕ ಆಧರಿಸಿದ ವಾರ್ಷಿಕ ಹಣದುಬ್ಬರ ದರ ಜಾಗತಿಕವಾಗಿ ಶೇ8ರಷ್ಟಾಗಲಿದೆ ‘ಫಿಕ್ಕಿ’ ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT