ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣದುಬ್ಬರ ಹೆಚ್ಚಳ

Last Updated 14 ಅಕ್ಟೋಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಸೆಪ್ಟೆಂಬರ್ ತಿಂಗಳಲ್ಲಿ ವಾರ್ಷಿಕ ಹಣದುಬ್ಬರ ದರವು ಶೇ 9.72ರಷ್ಟು ಏರಿಕೆಯಾಗಿರುವುದರಿಂದ ಈ ತಿಂಗಳಾಂತ್ಯಕ್ಕೆ ಭಾರತೀಯ ರಿಸರ್ವ್ ಬ್ಯಾಂಕ್ ಮತ್ತೆ ಅಲ್ಪಾವಧಿ ಬಡ್ಡಿ ದರಗಳನ್ನು ಏರಿಸುವ ಸಾಧ್ಯತೆಗಳು ಹೆಚ್ಚಿವೆ.

ಆಹಾರ, ಸಿದ್ಧ ಸರಕು ಸೇರಿದಂತೆ ಒಟ್ಟಾರೆ ಎಲ್ಲ ಬಗೆಯ ಸರಕುಗಳ ಬೆಲೆಗಳು ಗಮನಾರ್ಹ ಏರಿಕೆ ದಾಖಲಿಸಿವೆ. ಸಗಟು ಬೆಲೆ ಸೂಚ್ಯಂಕ ಆಧರಿಸಿ ಅಳೆಯಲಾಗುವ ಹಣದುಬ್ಬರವು ಆಗಸ್ಟ್ ತಿಂಗಳಲ್ಲಿ ಶೇ 9.78ರಷ್ಟಿತ್ತು. ಸತತ 10ನೇ ತಿಂಗಳೂ ಹಣದುಬ್ಬರವು ಶೇ 9ಕ್ಕಿಂತ ಹೆಚ್ಚಿನ ಮಟ್ಟದಲ್ಲಿಯೇ ಇದೆ.

`ವಿಶ್ವದ ಯಾವುದೇ ಭಾಗದಲ್ಲಿ ಹಣದುಬ್ಬರ ಏರಿಕೆಯಾಗುತ್ತಿದ್ದರೆ ಸಾಲಗಳ ಮೇಲಿನ ಬಡ್ಡಿ ದರಗಳೂ ಏರುತ್ತಲೇ ಇರುತ್ತವೆ. ಹಣದುಬ್ಬರಕ್ಕೆ   ಕಡಿವಾಣ ವಿಧಿಸಲು ಕಠಿಣ ಹಣಕಾಸಿನ ನೀತಿ ಹೊರತುಪಡಿಸಿದರೆ ನಮ್ಮ ಹತ್ತಿರ ಬೇರೆ ಯಾವುದೇ ಕ್ರಮಗಳು ಇಲ್ಲ~ ಎಂದು `ಆರ್‌ಬಿಐ~ ಡೆಪ್ಯುಟಿ ಗವರ್ನರ್ ಕೆ. ಸಿ. ಚಕ್ರವರ್ತಿ ಅಭಿಪ್ರಾಯಪಟ್ಟಿದ್ದಾರೆ.

ಕಳೆದ ವರ್ಷದ ಇದೇ ಅವಧಿಗೆ ಹೋಲಿಸಿದರೆ ಸೆಪ್ಟೆಂಬರ್ ತಿಂಗಳಲ್ಲಿ ಆಹಾರ ಪದಾರ್ಥಗಳು ಶೇ 9, ಈರುಳ್ಳಿ ಶೇ 23, ಹಣ್ಣು ಶೇ 16 ಮತ್ತು ಆಲೂಗಡ್ಡೆ ಶೇ 15ರಷ್ಟು ತುಟ್ಟಿಯಾಗಿವೆ. ಸಗಟು ಬೆಲೆ ಸೂಚ್ಯಂಕದಲ್ಲಿ ಶೇ 65ರಷ್ಟು ಪಾಲು ಹೊಂದಿರುವ ತಯಾರಿಕಾ ಸರಕುಗಳ ಬೆಲೆಗಳು ಶೇ 8ರಷ್ಟು ಏರಿಕೆಯಾಗಿವೆ.`ವಾರ್ಷಿಕ ಹಣದುಬ್ಬರವು ಶೇ 9.72ರಷ್ಟು ದಾಖಲಾಗಿರುವುದು ಹಿತಕರ ಮಟವಂತೂ ಅಲ್ಲವೇ ಅಲ್ಲ. ಸದ್ಯಕ್ಕೆ ಇದು ಕಡಿಮೆಯಾಗುವ ಲಕ್ಷಣಗಳೂ ಕಂಡು ಬರುತ್ತಿಲ್ಲ~ ಎಂದು ಪ್ರಧಾನಿ ಆರ್ಥಿಕ ಸಲಹಾ ಸಮಿತಿ ಅಧ್ಯಕ್ಷ ಸಿ. ರಂಗರಾಜನ್ ಅಭಿಪ್ರಾಯಪಟ್ಟಿದ್ದಾರೆ.

2010ರ ಮಾರ್ಚ್ ತಿಂಗಳಿನಿಂದೀಚೆಗೆ `ಆರ್‌ಬಿಐ~ ಶೇ 3.50ರಷ್ಟು ಬಡ್ಡಿ ದರ ಹೆಚ್ಚಿಸಿದೆ. ಈ ತಿಂಗಳ 25ರಂದು ಹಣಕಾಸು ನೀತಿಯ ಪರಾಮರ್ಶೆ ಮಾಡುವಾಗ ಇನ್ನಷ್ಟು ಬಡ್ಡಿ ದರ ಹೆಚ್ಚಿಸುವ ಸಾಧ್ಯತೆಗಳು ಇವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT