ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣಮೂಲ ಸಂಸ್ಕೃತಿಯತ್ತ ಯುವ ಜನತೆ: ವಿಷಾದ

Last Updated 8 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಬೆಂಗಳೂರು: `ಇಂದಿನ ಸಮಾಜಕ್ಕೆ ಶಿವರಾಮ ಕಾರಂತರ ಕಾದಂಬರಿಗಳ ಮರು ಓದು ಔಚಿತ್ಯಪೂರ್ಣವಾಗಿದೆ~ ಎಂದು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ನಿಂಗಮಾರಯ್ಯ ಹೇಳಿದರು.

ಕನ್ನಡ ಯುವಜನ ಸಂಘವು ಇತ್ತೀಚೆಗೆ ನಗರದಲ್ಲಿ ಏರ್ಪಡಿಸಿದ್ದ `ಡಾ.ಶಿವರಾಮ ಕಾರಂತರ ಕಾದಂಬರಿಗಳು~ ಕುರಿತಾದ ಉಪನ್ಯಾಸ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

`ಕಾರಂತರ ಪ್ರಮುಖ ಕಾದಬರಿಗಳು ಮನುಷ್ಯ ಮತ್ತು ಮಣ್ಣಿನ ಸಂಬಂಧ ಹಾಗೂ ಹೆಣ್ಣು-ಗಂಡಿನ ಸಂಬಂಧ, ಅನಿಷ್ಟ ಪದ್ಧತಿಗಳ ಧಿಕ್ಕರಿಸುವಿಕೆ, ನಗರ ಸಂಸ್ಕೃತಿಯು ಗ್ರಾಮೀಣ ಸಂಸ್ಕೃತಿಯ ಮೇಲೆ ನಡೆಸುತ್ತಿರುವ ದಬ್ಬಾಳಿಕೆಯನ್ನು ಪ್ರಮುಖ ವಸ್ತುಗಳನ್ನಾಗಿ ಚರ್ಚಿಸಿದ್ದಾರೆ~ ಎಂದರು.

`ಇಂದಿನ ಯುವಜನತೆ ನೆಲಮೂಲ ಸಂಸ್ಕೃತಿಯನ್ನು ಕಳೆದುಕೊಂಡು ಹಣಮೂಲ ಸಂಸ್ಕೃತಿಯತ್ತ ಚಲಿಸುತ್ತಿದೆ. ಜಾಗತೀಕರಣದಿಂದ ಹಳ್ಳಿಯ ಯುವಜನರು ನಗರದತ್ತ ಮುಖ ಮಾಡಿದ್ದಾರೆ. ಯುವಜನತೆಯು ಪಾಶ್ಚಾತ್ಯ ಸಂಸ್ಕೃತಿ ಮತ್ತು ಶೈಲಿ ಮೈಗೂಡಿಸಿಕೊಳ್ಳುತ್ತಿದ್ದಾರೆ. ನಮ್ಮ ಭೂಮಿಯಲ್ಲಿ ಇನ್ಯಾರೋ ಬಯಸಿದಂತೆ ಬೆಳೆಗ ಬೆಳೆಯುವಂತಾಗಿದೆ~ ಎಂದು ವಿಷಾದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT