ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಣ್ಣಿನ ವಿದ್ಯುತ್ ಕೋಶ

ಮಾಡಿ ನಲಿ ಸರಣಿ 45
Last Updated 22 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ಸಾಮಗ್ರಿಗಳು: ನಿಂಬೆ/ಮೋಸಂಬಿ ಹಣ್ಣುಗಳು, ಸತು ಹಾಗೂ ತಾಮ್ರದ ತುಂಡುಗಳು, ವಿದ್ಯುತ್ ತಂತಿ, ಗ್ಯಾಲ್ವನಾಮೀಟರ್.

ವಿಧಾನ :
೧) ಚಿತ್ರದಲ್ಲಿ ತೋರಿಸಿದಂತೆ ನಿಂಬೆ/ಮೋಸಂಬಿ ಹಣ್ಣನ್ನು ತೆಗೆದುಕೊಳ್ಳಿ.
೨) ಸತು ಹಾಗೂ ತಾಮ್ರದ ಎರಡು ಚಿಕ್ಕ ತುಂಡುಗಳನ್ನು ತೆಗೆದುಕೊಂಡು, ಅವುಗಳ ಒಂದೊಂದು ತುದಿಗೆ ವಿದ್ಯುತ್ ತಂತಿಯನ್ನು ಜೋಡಿಸಿ.
೩) ಸತು ಮತ್ತು ತಾಮ್ರದ ತುಂಡುಗಳನ್ನು ನಿಂಬೆ/ಮೋಸಂಬಿ ಹಣ್ಣಿನಲ್ಲಿ ಸಿಕ್ಕಿಸಿ, ಚಿತ್ರದಲ್ಲಿ ತೋರಿಸಿದಂತೆ ಗ್ಯಾಲ್ವನಾಮೀಟರ್ ಗೆ ಜೋಡಿಸಿ.

ಪ್ರಶ್ನೆ : ಗ್ಯಾಲ್ವನಾಮೀಟರಿನ ಮುಳ್ಳಿನಲ್ಲಾದ ಬದಲಾವಣೆ ಏನು? ಯಾಕೆ?
ಉತ್ತರ:  ಗ್ಯಾಲ್ವನಾಮೀಟರ್‌ನ ಮುಳ್ಳು ಕಂಪನಗೊಂಡು ವಿದ್ಯುತ್ ಪ್ರವಾಹವನ್ನು ತೋರಿಸುತ್ತದೆ. ವಿದ್ಯುತ್ ಕೋಶದಲ್ಲಿ ಎರಡು ವಿದ್ಯುತ್ ವಾಹಕಗಳಿವೆ. ಅವು ಬೇರ-ಬೇರೆ ಲೋಹಗಳಿಂದಾಗಿವೆ. ಅವುಗಳಿಗೆ ವಿದ್ಯುದ್ವಾರ ಅನ್ನುತ್ತಾರೆ. ಅವುಗಳನ್ನು ವಿದ್ಯುದ್ವಿಭಾಜದಲ್ಲಿ ಮುಳುಗಿಸಿದಾಗ ಬೇರೆ-ಬೇರೆ ವಿದ್ಯುತ್ ಒತ್ತಡವು ಉಂಟಾಗಿ ಇಲೆಕ್ಟ್ರಾನುಗಳು ಸಂಚರಿಸುತ್ತವೆ. ಇದರಿಂದ ಗ್ಯಾಲ್ವನಾಮೀಟರಿನಲ್ಲಿಯ ಮುಳ್ಳು ಕಂಪನವಾಗುತ್ತದೆ. ಇಲ್ಲಿ ಸತು ಋಣ ಫಲಕ (ಕ್ಯಾಥೋಡ್) ದಂತೆ ಹಾಗೂ ತಾಮ್ರವು ಧನ ಫಲಕ (ಅನೋಡ್) ದಂತೆ ವರ್ತಿಸುತ್ತವೆ. ನಿಂಬೆ/ಮೊಸಂಬಿ ರಸವು ವಿದ್ಯುದ್ವಿಭಾಜ್ಯವಾಗಿ ಕೆಲಸ ಮಾಡುತ್ತದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT