ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಇಳುವರಿ ಶೇ 15 ಕುಸಿತ ಸಂಭವ: ಕೇಂದ್ರದ ಅಂದಾಜು

Last Updated 4 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ಕೊಯಮತ್ತೂರು (ಪಿಟಿಐ): ಮುಂಗಾರು ಮಳೆ ಆರಂಭ ವೈಫಲ್ಯ ಹಿನ್ನೆಲೆಯಲ್ಲಿ ಕೃಷಿ ಕ್ಷೇತ್ರದ ಚಟುವಟಿಕೆಯಲ್ಲಿ ಭಾರಿ ಹಿನ್ನಡೆಯಾಗಿದೆ. ಪ್ರಸಕ್ತ ಹಂಗಾಮಿನಲ್ಲಿ ದೇಶದ ಹತ್ತಿ ಎಕರೆವಾರು ಇಳುವರಿಯಲ್ಲಿ ಶೇ 10ರಿಂದ 15ರಷ್ಟು ಕುಸಿತವಾಗುವ ಸಂಭವವಿದೆ ಎಂದು ಕೇಂದ್ರ ಜವಳಿ ಸಚಿವಾಲಯ ಆಯುಕ್ತ ಎ.ಬಿ.ಜೋಷಿ ಹೇಳಿದ್ದಾರೆ.

ಮಳೆ ವೈಫಲ್ಯದಿಂದಷ್ಟೇ ಹತ್ತಿ ಉತ್ಪಾದನೆ ಕಡಿಮೆ ಆಗುತ್ತಿಲ್ಲ. ಬೆಲೆ ಇಳಿಕೆ ಕಾರಣ ರೈತರೂ ಬೆಳೆ ಬದಲಿಸಿದ್ದಾರೆ. ಇದು ಸಹ ಉತ್ಪನ್ನ ಕುಸಿಯಲು ಕಾರಣವಾಗಿದೆ ಎಂದರು. ಹಾಗಿದ್ದೂ ಹತ್ತಿ ಆಧಾರಿತ ಜವಳಿ ಉದ್ಯಮವೇನೂ ಕಳವಳ ಪಡಬೇಕಾಗಿಲ್ಲ. ಗುಜರಾತ್ ಮತ್ತು ಮಹಾರಾಷ್ಟ್ರದಲ್ಲಿ ಹತ್ತಿಯ ಲಭ್ಯತೆ ತಕ್ಕಮಟ್ಟಿಗೆ ಇದೆ ಎಂದು ಹೇಳಿದರು.

`ಐಪಿಒ~ ಸುಧಾರಣೆಗೆ ಕ್ರಮ
ಜೈಪುರ (ಪಿಟಿಐ): ಆರಂಭಿಕ ಸಾರ್ವಜನಿಕ ಕೊಡುಗೆ(ಐಪಿಒ) ಕ್ಷೇತ್ರದ ಮಾರುಕಟ್ಟೆ ಸುಧಾರಣೆಗೆ ಸಂಬಂಧಿಸಿದಂತೆ  ಶೀಘ್ರದಲ್ಲೇ ಕೆಲವು ಕ್ರಮಗಳನ್ನು ಕೈಗೊಳ್ಳಲಿರುವುದಾಗಿ ಭಾರತೀಯ ಷೇರು ಪೇಟೆ ನಿಯಂತ್ರಣ ಮಂಡಳಿ (ಸೆಬಿ) ಹೇಳಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT