ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹತ್ತಿ ಇಳುವರಿ ಶೇ 2 ಇಳಿಮುಖ

Last Updated 23 ಆಗಸ್ಟ್ 2012, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಕಳೆದ `ಬೆಳೆ ವರ್ಷ~ದಲ್ಲಿ ದೇಶದ ಹತ್ತಿ ಇಳುವರಿಯಲ್ಲಿ ಶೇ 2ರಷ್ಟು ಇಳಿಕೆಯಾಗಿದ್ದು, ಹೆಕ್ಟೇರ್‌ಗೆ 491 ಕೆ.ಜಿ. ಉತ್ಪಾದನೆ ಆಗಿದೆ. ಹಾಗಿದ್ದೂ ದೇಶದ ಒಟ್ಟಾರೆ ಹತ್ತಿ ಉತ್ಪಾದನೆ 3.52 ಕೋಟಿ ಬೇಲ್‌ಗಳಿಗೆ ಹೆಚ್ಚಿದೆ.

2010ರ ಜುಲೈ-2011ರ ಜೂನ್‌ನಡುವಿನ ಅವಧಿಯ ಬೆಳೆ ವರ್ಷದಲ್ಲಿ ಪ್ರತಿ ಹೆಕ್ಟೇರ್‌ನಲ್ಲಿನ ಹತ್ತಿ ಇಳುವರಿ 499 ಕೆ.ಜಿ.ಯಷ್ಟು ಇದ್ದಿತು. ಆದರೆ, ಒಟ್ಟಾರೆ ಹತ್ತಿ ಉತ್ಪಾದನೆ ಕೇವಲ 3.30 ಕೋಟಿ ಬೇಲ್‌ನಷ್ಟಿದ್ದಿತು ಎಂಬ ಅಂಕಿ-ಅಂಶಗಳನ್ನು ಕೇಂದ್ರ ಕೃಷಿ ಸಚಿವ ಶರದ್ ಪವಾರ್ ಇತ್ತೀಚೆಗೆ ಸಂಸತ್ತಿನಲ್ಲಿ ಮಂಡಿಸಿದರು.

ಹತ್ತಿ ಬೆಳೆಗೆ ರೈತರು ಮಾಡುವ ವೆಚ್ಚದಲ್ಲಿಯೂ ಭಾರಿ ಪ್ರಮಾಣದಲ್ಲಿ (ಶೇ 31ರಷ್ಟು) ಏರಿಕೆಯಾಗಿದೆ. 2009-10ರಲ್ಲಿ ಪ್ರತಿ ಕ್ವಿಂಟಲ್ ಹತ್ತಿ ಇಳುವರಿಗೆ ರೂ. 2111 ವೆಚ್ಚವಾಗಿದ್ದರೆ, 2012-13ರಲ್ಲಿ ರೂ. 2772ಕ್ಕೆ ಮುಟ್ಟಿದೆ ಎಂದು ಸಚಿವರು ವಿವರ ನೀಡಿದ್ದಾರೆ.

ಹತ್ತಿ ಬೆಳೆ ಉತ್ತೇಜನಕ್ಕಾಗಿ ಕೃಷಿ ಸಚಿವಾಲಯ 13 ರಾಜ್ಯಗಳಲ್ಲಿ `ಮಿನಿ ಮಿಷನ್ 2 ಆನ್ ಕಾಟನ್~ ಯೋಜನೆ ಜಾರಿಗೊಳಿಸಿದ್ದು, ಬಿತ್ತನೆ ಬೀಜ, ಕೃಷಿ ಯಂತ್ರೋಪಕರಣಗಳು, ಕಡಿಮೆ ನೀರು ಬಳಸಲು ನೆರವಾಗುವ ಉಪಕರಣಗಳು, ಜೈವಿಕ ಕೀಟನಾಶಕ ಮೊದಲಾದ ಸವಲತ್ತು ವಿತರಿಸಲಾಗುತ್ತಿದೆ ಎಂದಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT