ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ತಟ್ಟೆಸರ– ಹೊಸಗದ್ದೆ ರಸ್ತೆ

ಕಾನೂರು ಗ್ರಾಮ ಪಂಚಾಯಿತಿ: ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲ!
Last Updated 14 ಡಿಸೆಂಬರ್ 2013, 6:57 IST
ಅಕ್ಷರ ಗಾತ್ರ

ಕಾನೂರು (ಎನ್.ಆರ್.ಪುರ): ತಾಲ್ಲೂಕಿನ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಹಲವು ಗ್ರಾಮಗಳ ರಸ್ತೆಗಳು ದುರಸ್ತಿಗೊಂಡು ದಶಕಗಳೇ ಕಳೆದಿದ್ದು ಈ ರಸ್ತೆಗಳನ್ನು ಅಭಿವೃದ್ಧಿ ಪಡಿಸುವತ್ತ ಜನಪ್ರತಿ­ನಿಧಿಗಳು ನಿರ್ಲ್ಯಕ್ಷ ಮಾಡಿದ್ದಾರೆ ಎಂಬ ದೂರು ಗ್ರಾಮಸ್ಥರರಲ್ಲಿ ಕೇಳಿಬರುತ್ತಿದೆ.

ಪ್ರಮುಖವಾಗಿ ಕಾನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ತಟ್ಟೆಸರ–ಹೊಸಗದ್ದೆ, ತಟ್ಟೆಸರ–­ಮಡೋಡಿ ಹಾಗೂ ತಟ್ಟೆಸರ– ದಾವಣ ಗ್ರಾಮದ ರಸ್ತೆ ಸಂಪೂರ್ಣ ಹದ­ಗೆಟ್ಟಿದ್ದು ಗ್ರಾಮಸ್ಥರ ಸಂಚಾರ ಮಾಡುವುದು ದುಸ್ತರವಾಗಿದೆ. ತಟ್ಟೆಸರದಿಂದ ಮಡೋಡಿಗೆ ಸಂಪರ್ಕ ಕಲ್ಪಿಸುವ ರಸ್ತೆಯು 5 ಕಿ.ಲೋ ದೂರ­ವಿದ್ದು ಜಿಲ್ಲಾ ಪಂಚಾಯಿತಿ ವ್ಯಾಪ್ತಿಗೆ ಸೇರಿದೆ. ಇದರ ವ್ಯಾಪ್ತಿಯಲ್ಲಿ ಹರಿಜನ ಕಾಲೊನಿ, ಕೆಳಕಟ್ಟಿಮನೆ,  ಅವತಿಕೆರೆ, ಮಡೋಡಿ ಹರಿಜನ ಕಾಲೊ­ನಿಗೆ  ಸಂಪರ್ಕ ಕಲ್ಪಿಸುತ್ತದೆ.

ಈ ಮಾರ್ಗದ ಮೂಲಕವೇ ಕಟ್ಟಿಮನೆ ಶಾಲೆಗೆ, ಬಾಳೆ­ಹೊನ್ನೂರು ಶಾಲೆಗೆ ಹೋಗುವ ಮಕ್ಕಳು ಪ್ರಯಾಣಿಸಬೇಕಾಗಿದೆ. ಗ್ರಾಮಸ್ಥರು ಇದೇ ಮಾರ್ಗದ ಮೂಲಕ 5 ಕಿ.ಮೀ ನಡೆದುಕೊಂಡು ಬಂದು ಬಸ್ ಹಿಡಿಯಬೇಕಾದ ಪರಿಸ್ಥಿತಿ ಇದೆ. ಕಳೆದ 10 ವರ್ಷದ ಹಿಂದೆ  ಸಣ್ಣ ಸೇತುವೆ, ರಸ್ತೆಗೆ ಜಲ್ಲಿ, ಕೆಲವು ಮೋರಿಗಳನ್ನು ನಿರ್ಮಾಣ ಮಾಡಲಾಯಿತು. ಆದರೆ ರಸ್ತೆಗೆ ಹಾಕಿದ್ದ ಜಲ್ಲಿ ಸಂಪೂರ್ಣ ಕಿತ್ತುಕೊಂಡು ಹೋಗಿ ರಸ್ತೆ ತುಂಬ ಗುಂಡಿಗಳಾಗಿವೆ. ಮಳೆಗಾಲ ಬಂತೆಂದರೆ ಈ ಮಾರ್ಗದಲ್ಲಿ ನಡೆದುಕೊಂಡು ಹೋಗುವುದೇ ಕಷ್ಟ ರಸ್ತೆ ಯಾವುದು ಗುಂಡಿಯಾವುದು ಎಂಬುದೇ ಗೊತ್ತಾಗುವುದಿಲ್ಲ ಎನ್ನುತ್ತಾರೆ ಗ್ರಾಮಸ್ಥರು.

ಇದೇ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ತಟ್ಟೆಸರದಿಂದ ದಾವಣ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ 3 ಕಿ.ಲೋ ದೂರದ ಜಿಲ್ಲಾ ಪಂಚಾಯಿತಿ ರಸ್ತೆಯಿದೆ. ಈ ರಸ್ತೆಗೆ ಅಲ್ಲಲ್ಲಿ ಡಾಂಬರೀಕರಣ ಮಾಡಲಾಗಿದ್ದರೂ ಅದು ಸಹ ಸಂಪೂರ್ಣ ದುಸ್ಥಿತಿಗೆ ತಲುಪಿದೆ. ಹರಾವರಿ ಹಾಗೂ ದಾವಣ ಗ್ರಾಮಗಳ ಮೂಲಕ ಹಾದು ಹೋಗುವ ಈ ರಸ್ತೆಯು ಕಲ್ಲೂರು, ದಾವಣ, ಅರಕುಡಿಗೆ, ತಟ್ಟೆಸರ ಕೆಳಗಿನ ಕಾಲೊನಿಗಳು ಸಂಪರ್ಕ ಕಲ್ಪಿಸುತ್ತದೆ.

ಈ ಎಲ್ಲ ರಸ್ತೆಗಳನ್ನು ಅಭಿವೃದ್ಧಿ ಪಡಿಸುವಂತೆ ಕಳೆದ 10 ವರ್ಷಗಳಿಂದಲೂ ಕ್ಷೇತ್ರದ ಎಲ್ಲ ಹಂತದ ಜನಪ್ರತಿನಿಧಿಗಳಿಗೆ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ರಸ್ತೆ ದುರಸ್ತಿಯಾಗದೇ ಹಾಗೆಯೇ ಉಳಿಯಿತು. ಗ್ರಾಮಸ್ಥರ ಗೋಳು ಕೇಳುವವರೇ ಇಲ್ಲ ಎನ್ನು­ತ್ತಾರೆ ಕಾನೂರು ಗ್ರಾಮಸ್ಥರಾದ ಸುಬ್ರಾಯಗೌಡ.

ಈ ರಸ್ತೆಯ ಅಭಿವೃದ್ಧಿಗೆ ಜಿಲ್ಲಾಪಂಚಾಯಿತಿ ಅನುದಾನದಲ್ಲಿ ₨ 3 ಲಕ್ಷ ಮೀಸಲಿಡಲಾಗಿತ್ತು. ಆದರೆ ರಸ್ತೆ ಸಂಪೂರ್ಣ ಹದಗೆಟ್ಟಿರುವುದರಿಂದ ಈ ಅನುದಾನ ಸಾಕಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತವಾದ ಹಿನ್ನೆಲೆಯಲ್ಲಿ ಸಂಸ­ದರಿಗೆ ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಲಾಗಿದೆ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಮಹಮ್ಮದ್ ಇಫ್ತೀಕಾರ್ ಆದಿಲ್ ‘ಪ್ರಜಾವಾಣಿ’ಗೆ ತಿಳಿಸಿದರು.

ಈ ಬಗ್ಗೆ ಸಂಸದ ಕೆ.ಜಯಪ್ರಕಾಶ್ ಹೆಗ್ಡೆ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿ­ದಾಗ ಪ್ರಸಕ್ತ ಸಾಲಿನ ಸಂಸದರ ಅನುದಾನದಲ್ಲಿ ಈ ರಸ್ತೆ ಅಭಿವೃದ್ಧಿ ಪಡಿಸಲು ಕ್ರಿಯಾಯೋಜನೆ ರೂಪಿಸಲಾಗಿದ್ದು ಶೀಘ್ರದಲ್ಲೇ ಕಾಮಗಾರಿ ಪ್ರಾರಂಭಿಸಲಾಗುವುದು ಎಂದರು.
– ಕೆ.ವಿ.ನಾಗರಾಜ್

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT