ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ದಾಸರಹಳ್ಳಿ ರಸ್ತೆ

Last Updated 12 ಡಿಸೆಂಬರ್ 2013, 19:35 IST
ಅಕ್ಷರ ಗಾತ್ರ

ಪೀಣ್ಯ ದಾಸರಹಳ್ಳಿ: ರಸ್ತೆಯುದ್ದಕ್ಕೂ ಎದ್ದು ಕಾಣುವ ಗುಂಡಿ­ಗಳು. ಡಾಂಬರು ಕಾಣದೇ ವರ್ಷಗಳೇ ಕಳೆದಿವೆ. ಇದು ಮಾಗಡಿ ಮುಖ್ಯ ರಸ್ತೆಗೆ ಸಂಪರ್ಕ ಕಲ್ಪಿಸುವ ದಾಸರಹಳ್ಳಿ ರಸ್ತೆಯ ಕತೆ.

ಈ ರಸ್ತೆಯಲ್ಲಿ ಸಂಚರಿಸುವ ವಾಹನಗಳ ಸವಾರರು ನಿತ್ಯ ನರಕಯಾತನೆ ಅನುಭವಿಸುತ್ತಿದ್ದಾರೆ. ಮಳೆ ಬಂದರೆ ಈ ರಸ್ತೆಯ ಪರಿಸ್ಥಿತಿ ಹೇಳಲು ಅಸಾಧ್ಯ.

ರಸ್ತೆಯ ದುರಾವಸ್ಥೆಯ ಬಗ್ಗೆ ಜನಪ್ರತಿನಿಧಿಗಳ ಗಮನಕ್ಕೆ ತಂದಿದ್ದರೂ ಪ್ರಯೋಜನವಾಗಿಲ್ಲ ಎಂದು ನಿವಾಸಿ­ಯೊಬ್ಬರು ದೂರಿದರು. ರಸ್ತೆ, ಕುಡಿಯುವ ನೀರು ಸೇರಿದಂತೆ ಮೂಲ­ಸೌಕರ್ಯ ಒದಗಿಸಲು ಜನಪ್ರತಿನಿಧಿಗಳಿಗೆ ಬದ್ಧತೆ­ಯಿಲ್ಲ. ಮತ ಕೇಳಲು ಮಾತ್ರ ಬರುತ್ತಾರೆ ಎಂದು ಆಕ್ಷೇಪಿಸಿದರು.

ರುಕ್ಮಿಣಿ ನಗರ, ನೆಲಗದರನಹಳ್ಳಿ, ಎಚ್‌ಎಂಟಿ ಲೇ ಔಟ್‌, ಇಂದಿರಾ ನಗರ, ತಿಗಳರ ಪಾಳ್ಯ, ಪೀಣ್ಯ ಎರಡನೇ ಹಂತ, ಬ್ಯಾಡರ­ಹಳ್ಳಿ, ಹೇರೋಹಳ್ಳಿ, ಕಾಚೋಹಳ್ಳಿ ಮತ್ತಿತರರ ಗ್ರಾಮಸ್ಥರು ಈ ಮುಖ್ಯ ಸಂಪರ್ಕ ರಸ್ತೆಯಲ್ಲಿ ಚಲಿಸುತ್ತಾರೆ. ಆದ್ದರಿಂದ ಈ ರಸ್ತೆಯನ್ನು ದುರಸ್ಥಿಗೊಳಿಸಲು ಸರ್ಕಾರ ಮುಂದಾಗಬೇಕಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT