ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹದಗೆಟ್ಟ ರಸ್ತೆ ದುರಸ್ತಿ ಎಂದು?

ದೇವಪುರ ಮನಗೂಳಿ ರಾಜ್ಯ ಹೆದ್ದಾರಿ
Last Updated 2 ಡಿಸೆಂಬರ್ 2013, 6:33 IST
ಅಕ್ಷರ ಗಾತ್ರ

ಹುಣಸಗಿ: ಸುರಪುರ ತಾಲ್ಲೂಕಿನ ದೇವಪುರ- ಬಾಗೇವಾಡಿ - ಮನಗೂಳಿ ರಾಜ್ಯ ಹೆದ್ದಾರಿ 61 ಹದಗೆಟ್ಟಿದ್ದು ಸಂಚಾರ ದುಸ್ತರವಾಗಿದೆ.  
ಹಾಳಾದ ರಸ್ತೆಯಲ್ಲಿ ತೆಗ್ಗು ತಪ್ಪಿಸಲು ಹೋಗಿ ಹಲವು ವಾಹನಗಳು ಅಪಘಾತಕ್ಕೀಡಾಗಿವೆ.

ಯಾದಗಿರಿ ಜಿಲ್ಲೆಯ ದೇವಪುರ­ದಿಂದ ಹುಣಸಗಿ ಮಾಳನೂರ ಮಾರ್ಗ­ವಾಗಿ ವಿಜಾಪುರ ಜಿಲ್ಲೆಯ ತಾಳಿ­ಕೋಟಿ, ಹೂವಿನ ಹಿಪ್ಪರಗಿ, ಬಸವನ ಬಾಗೇವಾಡಿ, ಮನಗೂಳಿ, ವರೆಗೆ ಇದ್ದು ಸುಮಾರು 106 ಕಿ. ಮೀ ಉದ್ದವಿದೆ.

ಈ ರಸ್ತೆ ನಿರ್ಮಾಣಕ್ಕಾಗಿ ಕಳೆದ ಎರಡು ವರ್ಷಗಳ ಹಿಂದೆ ವಿಶ್ವಬ್ಯಾಂಕ್ ಯೋಜನೆಯ ನೆರವಿನೊಂದಿಗೆ ₨248 ಕೋಟಿಯ ಟೆಂಡರ್ ಕರೆಯಲಾಗಿತ್ತು. ರಸ್ತೆ ನಿರ್ಮಾಣದ ನಂತರ ಏಳು ವರ್ಷಗಳವರೆಗಿನ ನಿರ್ವಹಣೆಯ ನಿಯ­ಮಾವಳಿಯಲ್ಲಿನ ಗೊಂದಲದಿಂದಾಗಿ ಗುತ್ತಿಗೆದಾರರು ಹಿಂದೆ ಸರಿದದ್ದು ಕಾಮಗಾರಿ ನನೆಗುದಿಗೆ ಬೀಳಲು ಕಾರಣ­ವೆಂದು ತಿಳಿದು ಬಂದಿದೆ.

ಈ ಭಾಗದಲ್ಲಿ ಒಳ್ಳೆಯ ರಸ್ತೆ ನಿರ್ಮಾ­ಣವಾಗಲಿದೆ ಎಂದು ಸಂತಸ­ದಲ್ಲಿದ್ದ ಸುಮಾರು ಐವತ್ತಕ್ಕೂ ಹೆಚ್ಚು ಗ್ರಾಮಗಳ  ರೈತರಲ್ಲಿ ನಿರಾಸೆ ಮೂಡಿಸಿದೆ. 

ಪ್ರತಿನಿತ್ ಈ ರಸ್ತೆಯಲ್ಲಿ ನೂರಾರು ಬಸ್‌ಗಳು ಸಂಚರಿಸುತ್ತಿದ್ದು ರಸ್ತೆ ಸಂಪೂರ್ಣವಾಗಿ ಹದೆಗೆಟ್ಟಿದ್ದರಿಂದ ವಾಸ್ಕೋ, ಪಣಜಿ, ಮೀರಜ, ಮಂತ್ರಾ­ಲಯ, ಶ್ರೀಶೈಲ, ಹೈದರಾಬಾದ್‌, ವಿಜಾಪುರ, ಪೂನಾ ಬಸ್‌ಗಳು ಮಾರ್ಗ ಬದಲಿಸಿ ಸಂಚರಿಸುತ್ತಿವೆ. 

‘ಈ ರಸ್ತೆ ಪೂರ್ತಿ ಕೆಟ್ಟಿರುವುದರಿಂದ  ನಮ್ಮ ಬೀಗರ ನಮ್ಮೂರಿಗ ಬರದಕ್ಕೂ ಹಿಂದಮುಂದ ನೊಡ್ತಾರೀ ಎಂದು’  ಕಲ್ಲದೇನವಹಳ್ಳಿಯ ಸಿದ್ದಲಿಂಗಯ್ಯ­ಸ್ವಾಮಿ ಹೇಳುತ್ತಾರೆ.

ಹುಣಸಗಿಯಿಂದ ಮಾಳನೂರಗೆ ತೆರಳುವ ರಸ್ತೆಯಲ್ಲಿ ಸುಮಾರು 8 ಕಿ.ಮೀ ವರೆಗೆ ಚಿಕ್ಕ ಡಾಂಬರ್ ರಸ್ತೆ ಕೂಡಾ ಕಾಣ ಸಿಗುವುದಿಲ್ಲ. ವಿಶ್ವ ಬ್ಯಾಂಕ್ ತಂಡ ಉತ್ತರ ಕರ್ನಾಟಕದ ಕಾಮಗಾರಿ ನಡೆಯಲಿರುವ ಜಿಲ್ಲೆಗಳಲ್ಲಿ ಡಿ. 4ರಿಂದ ಡಿ.12ರ ವರೆಗೆ ಭೇಟಿ ನೀಡಿ ಎಲ್ಲ ಮಾಹಿತಿ ಕಲೆಹಾಕಿ ಅಂತಿಮಗೊಳಿಸಲಿದೆ ಎಂದು ಕೆಶಿಪ್ ಮೂಲಗಳಿಂದ ತಿಳಿದುಬಂದಿದೆ.

‘ವಿಶ್ವ­ಬ್ಯಾಂಕ್ ಹಸಿರು ನಿಶಾನೆ ತೋರಿಸಿದರೂ ಕಾಮಗಾರಿ ಆರಂಭ­ವಾಗಲು ಒಂದು ವರ್ಷಬೇಕಾಗುತ್ತದೆ. ಒಂದು ವರ್ಷದವರೆಗೆಯಾದರೂ ಲೋಕೋ­­ಪಯೋಗಿ ಇಲಾಖೆ  ಈ ರಸ್ತೆಯನ್ನು ದುರಸ್ತಿ ಮಾಡಬೇಕು ಎಂದು ರೈತ ಮುಖಂಡ ರುದ್ರಗೌಡ ಆಗ್ರಹಿಸಿದ್ದಾರೆ.

ಸಂಬಂಧಪಟ್ಟವರು ಈ ಬಗ್ಗೆ ಗಮನ ಹರಿಸುವದಿಲ್ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT