ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹನುಮಜಯಂತಿ ಪ್ರಯುಕ್ತ ಪಂಚಾಭಿಷೇಕ

Last Updated 13 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ರಾಜರಾಜೇಶ್ವರಿ ನಗರ: ಸೊಣ್ಣೇ ನಹಳ್ಳಿ ವೀರಾಂಜನೇಯಸ್ವಾಮಿ ದೇವಸ್ಥಾನದಲ್ಲಿ  ಡಿ.14ರಂದು ‘ಹನುಮಜಯಂತಿ’  ನಡೆಯಲಿದೆ.
ಆಂಜನೇಯಸ್ವಾಮಿಗೆ ಪಂಚಾ ಭಿಷೇಕ, ಗಣಪತಿಪೂಜೆ, ನವ ಗ್ರಹಪೂಜೆ, ಗಣಪತಿಹೋಮ ಜತೆಗೆ ದೇವರ ಮೆರವಣಿಗೆ ನಡೆಯಲಿದ್ದು, ಒಂದು ಲಕ್ಷ ಜನರಿಗೆ ಅನ್ನಸಂತರ್ಪಣೆ ಮಾಡಲಾಗುತ್ತದೆ.

ಸಿದ್ದಗಂಗಾಮಠದ  ಶಿವಕುಮಾರ ಸ್ವಾಮೀಜಿ, ಆದಿಚುಂಚನಗಿರಿಮಠದ ನಿರ್ಮಲಾನಂದಸ್ವಾಮೀಜಿ, ವಿಶ್ವ ಒಕ್ಕಲಿಗರ ಮಠದ ಚಂದ್ರಶೇಖರ ನಾಥಸ್ವಾಮೀಜಿ, ನಂಜಾವದೂತ ಸ್ವಾಮೀಜಿ ಹಾಗೂ , ಸಂತೋಷ್‌ ಗುರೂಜಿ ಅವರಿಗೆ ಗುರುವಂದನಾ ಕಾರ್ಯಕ್ರಮ ನಡೆಯಲಿದೆ.

ಹನುಮಜಯಂತಿಗೆ ಪೂಜಾ, ಕುಣಿತ, ಕಂಸಾಳೆಪದ, ವೀರಭದ್ರನ ಕುಣಿತ, ಕರಡಿಕುಣಿತ, ಯಕ್ಷಗಾನ, ಮಲೈಮಹದೇಶ್ವರ ಕುರಿತ ಭಕ್ತಿಗೀತೆ, ಜಾನಪದ ಹಾಡುಗಾರಿಕೆ, ನಾಡಿನ ವಿವಿಧ ಜಾನಪದ ಕಲಾ ತಂಡಗಳು  ಕಲಾ ಪ್ರದರ್ಶನ ನೀಡಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT