ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಫೀಜ್- ಅಯ್ಯರ್ ವಾಗ್ವಾದ

Last Updated 3 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಇಸ್ಲಾಮಾಬಾದ್: ಪಾಕಿಸ್ತಾನದ ಟಿವಿ ಕಾರ್ಯಕ್ರಮವೊಂದರಲ್ಲಿ ಸಂಸದ ಮಣಿ ಶಂಕರ್ ಅಯ್ಯರ್ ಹಾಗೂ ಮುಂಬೈ ದಾಳಿಯಲ್ಲಿ ಆರೋಪಿಯಾಗಿರುವ ಜಮಾತ್- ಉದ್- ದವಾ ಮುಖ್ಯಸ್ಥ ಹಫೀಜ್ ಮಹಮ್ಮದ್ ಸಯೀದ್ ನಡುವೆ ವಾಗ್ವಾದ ನಡೆದಿರುವ ಘಟನೆ ವರದಿಯಾಗಿದೆ.

ವಾಣಿಜ್ಯ ವ್ಯವಹಾರಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನ ಭಾರತಕ್ಕೆ `ಪರಮಾಪ್ತ~ ದೇಶದ ಸ್ಥಾನಮಾನ ನೀಡಿರುವುದರ ಕುರಿತು ಟಿವಿಯಲ್ಲಿ ಚರ್ಚೆ ನಡೆಯುತ್ತಿತ್ತು.

ಮಣಿಶಂಕರ್ ಅಯ್ಯರ್ ಮತ್ತು ಇನ್ನೊಬ್ಬ ತಜ್ಞರು ಚರ್ಚೆಯಲ್ಲಿ ಇದ್ದಾಗ ಟಿವಿ ವಾಹಿನಿ ಏಕಾಏಕಿ ಹಫೀಜ್ ಸಯೀದ್ ಜತೆ ದೂರವಾಣಿ ಸಂಪರ್ಕ ಕಲ್ಪಿಸಿತು.

ಭಾರತಕ್ಕೆ `ಪರಮಾಪ್ತ~ ದೇಶದ ಸ್ಥಾನಮಾನ ನೀಡಿರುವುದು ಸರಿಯಲ್ಲ. ಕಾಶ್ಮೀರ ಸೇರಿದಂತೆ ಆ ದೇಶದ ಜತೆ ಹಲವು ವಿಚಾರಗಳು ಇತ್ಯರ್ಥವಾಗಬೇಕಿವೆ. ಭಾರತದಲ್ಲಿ ಈಗ ನಿರ್ಮಾಣವಾಗುತ್ತಿರುವ ಅಣೆಕಟ್ಟೆಗಳಿಂದ ಪಾಕಿಸ್ತಾನಕ್ಕೆ ಅಪಾಯವಾಗುವ ಸಂಭವವಿದೆ. ಭಾರತದ ಜತೆ ಮಾತುಕತೆಯನ್ನು ವಿರೋಧಿಸುವುದಿಲ್ಲ. ಆದರೆ, ದ್ವಿಪಕ್ಷೀಯ ಸಮಸ್ಯೆ ಪರಿಹರಿಸಲು ಆ ದೇಶ ಗಂಭೀರ ಯತ್ನ ಮಾಡಿದಂತಿಲ್ಲ ಎಂದು ಸಯೀದ್ ಆರೋಪಿಸಿದರು.

ಕೂಡಲೇ ಇದಕ್ಕೆ ಪ್ರತಿಕ್ರಿಯಿಸಿದ ಅಯ್ಯರ್, `ಭಾರತದೊಂದಿಗಿನ ಸಂಬಂಧ ಸುಧಾರಣೆಗೆ ವಿರೋಧಿಸುತ್ತಿರುವ ಸಣ್ಣ ಗುಂಪಿನಲ್ಲಿ ಸಯೀದ್ ಸೇರಿದ್ದಾರೆ. ಪಾಕ್‌ನ ಜನಸಾಮಾನ್ಯರು ಭಾರತದೊಂದಿಗೆ ಸಂಬಂಧ ಸುಧಾರಿಸಲಿ ಎಂದು ಆಶಿಸುತ್ತಾರೆ. ಸಯೀದ್ ಅಭಿಪ್ರಾಯ ಏನೇ ಇರಲಿ. ನಾವು ಸಂಬಂಧ ಸುಧಾರಿಸಿಕೊಳ್ಳಬಹುದು. ಆತನನ್ನು ಬಂಧಿಸಿ ನಮ್ಮ ಭಯೋತ್ಪಾದನಾ ನ್ಯಾಯಾಲಯದಲ್ಲಿ ವಿಚಾರಣೆಗೆ ಒಳಪಡಿಸಬೇಕಿದೆ~ ಎಂದು ಕಟುವಾಗಿ ನುಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT