ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಬ್ಬಿದ ಗಲಭೆ

ಮುಜಾಫರ್‌ನಗರ: ಮೃತರ ಸಂಖ್ಯೆ 41ಕ್ಕೆ
Last Updated 10 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಲಖನೌ: ಉತ್ತರಪ್ರದೇಶದ ಮುಜಾ­ಫರ್‌ ­ನಗರ  ಜಿಲ್ಲಾ ಮತ್ತು ಅಕ್ಕ­ಪಕ್ಕದ ಪಟ್ಟಣ­­ಗಳಲ್ಲಿ ಹಿಂಸಾಚಾರಕ್ಕೆ ಬಲಿ­ಯಾ­ದವರ ಸಂಖ್ಯೆ 41ಕ್ಕೆ ಏರಿದೆ. 100ಕ್ಕೂ ಅಧಿಕ ಮಂದಿ ಗಾಯ­ಗೊಂಡಿದ್ದಾರೆ.

ಮುಜಾಫರ್‌ನಗರವೊಂದರಲ್ಲೇ 32 ಜನ,  ಮೀರತ್‌­ನಲ್ಲಿ ಇಬ್ಬರು, ಹಾಪುರ, ಬಾಗ್‌ಪತ್‌, ಸಹರಾಪುರ ಹಾಗೂ ಶಾಮಿ್ಲ­­ಯಲಿ್ಲ ತಲಾ ಒಬ್ಬೊ­ಬ್ಬರು ಸೇರಿ ಪಶ್ಚಿಮ  ಉತ್ತರ­ಪ್ರದೇಶದ ವಿವಿಧ ಜಿಲ್ಲೆಗಳಲ್ಲಿ  ಹಲವರು ಮೃತ­ಪಟ್ಟಿ­­ದ್ದಾರೆ. ಗಾಯಾಳು­­­­­ಗಳನ್ನು ಆಸ್ಪತೆ್ರ­ಗಳಿಗೆ ದಾಖ­ಲಿಸಿ ಚಿಕಿತೆ್ಸ ಕೊಡಿಸಲಾ­ಗುತಿ್ತದೆ. ಪರಿ­ಸಿ್ಥತಿ ಈಗ ನಿಯಂತ್ರಣಕೆ್ಕ ಬಂದಿದೆ ಎಂದು ರಾಜ್ಯ ಗೃಹ ಕಾರ್ಯ­­­ದರ್ಶಿ ಕಮಲ್‌ ಸಕ್ಸೇನ ತಿಳಿಸಿದ್ದಾರೆ.

ಈ ನಡುವೆ, ಗಲಭೆಯಲಿ್ಲ ದುಷ್ಕರ್ಮಿ­ಗಳು ದಾಳಿ ನಡೆಸಲು ಹರಿತ ಆಯುಧ­ಗಳು, ದೊಣ್ಣೆ, ಸ್ಥಳೀಯ­ವಾಗಿ ತಯಾರಿ­ಸಿದ ಪಿಸ್ತೂಲ್‌ಗಳು ಮತ್ತಿತರ ಮಾರಕಾಸ್ತ್ರ­ಗಳನ್ನು ಬಳಸಿ­ರುವ ಸಾಧ್ಯತೆ ಇದೆ ಎಂದು  ಜಿಲ್ಲಾಸ್ಪತೆ್ರ ಮುಖ್ಯ ವೈದ್ಯಾಧಿಕಾರಿ ಡಾ. ವಿ.ಕೆ. ಜೋಹರಿ ಬಣ್ಣಿಸಿದ್ದಾರೆ.

ಸರ್ಕಾರದ ಕಠಿಣ ಕ್ರಮ:  ಕೋಮು­ಗಲಭೆ ಸಂಬಂಧ ಸುಮಾರು 400 ಜನರನ್ನು ಬಂಧಿಸಲಾಗಿದೆ. 1500­­ಕ್ಕೂ  ಹೆಚ್ಚಿನ ಬಂದೂಕು ಪರ­ವಾ­ನ­ಗಿ­­ಗಳನ್ನು ರದ್ದುಗೊಳಿಸಲಾಗಿದೆ. ಪೊಲೀ­ಸರು, ಇತರ ಭದ್ರತಾ ಸಿಬ್ಬಂದಿ ಮತ್ತು ಸೇನೆಯ ಸಹಕಾರದಿಂದ ತೀವ್ರ ಕಾರಣೆ ಕೈಗೊಂಡು, ಅಪಾರ ಪ್ರಮಾ­ಣದ  ಶಸ್ತ್ರಾಸ್ತ್ರ ಮತ್ತು ಮದ್ದು ಗುಂಡು­ಗಳನ್ನು ವಶಕ್ಕೆ ಪಡೆದಿದ್ದಾರೆ.

ಗಲಭೆಗ್ರಸ್ತ ಪ್ರದೇಶ­ಗಳಲ್ಲಿ ಮಂಗಳ­ವಾ­ರವೂ ಸೇನೆ ಪಥ­ಸಂಚಲನ ನಡೆಸುವು­ದ­ರೊಂ­ದಿಗೆ ಕರ್ಫ್ಯೂ ಮುಂದುವರಿ­ದಿದೆ.
 

ನಾಗರಿಕರಿಗೆ ಅಗತ್ಯ ವಸ್ತುಗಳನ್ನು ಖರೀ­ದಿ­ಸಲು ಅನುವಾಗುವಂತೆ ಕೆಲ­ಕಾಲ ಕರ್ಫ್ಯೂವನು್ನ ಸಡಿಲಿಸ­ಲಾಗಿತ್ತು.


ಮುಜಾ­ಫರ್‌­-­ನಗರದಲ್ಲಿ ಪರಿ­ಸ್ಥಿತಿ ಸುಧಾರಿಸಿದರೂ, ಸುತ್ತ­ಮುತ್ತಲ ಜಿಲ್ಲೆ­ಗಳಿಗೂ ಕೋಮು ಗಲಭೆ ಹಬ್ಬಿರು­ವುದು ಆತಂಕ­ಕ್ಕೀಡು ಮಾಡಿದೆ. ಈ ಹಿನ್ನೆ­ಲೆ­ಯಲ್ಲಿ ಗಲಭೆ ಪ್ರದೇಶ­ಗಳಿಗೆ ಹೆಚ್ಚು­ವರಿ ಪಡೆಗಳನ್ನು ನಿಯೋಜಿಸ­­ಲಾಗಿದೆ.

ರಾಜ್ಯ ಸರ್ಕಾರ ಯಾವುದೇ ಬಗೆಯ ಸಭೆಗಳನು್ನ ಅಥವಾ ಪಂಚಾಯತ್‌­ಗಳನು್ನ ನಡೆಸದಂತೆ ನಿಷೇಧ ಹೇರಿದೆ. ಹಿಂಸೆಯನು್ನ ಪ್ರಚೋದಿಸುವ ಆರೋಪಿ­ಗಳ ವಿರುದ್ಧ ಎನ್‌ಎಸ್‌ಎ (ರಾಷ್ಟ್ರೀಯ ಭದ್ರತಾ ಸಂಸೆ್ಥ) ಬಳಸುವುದರ ಬಗೆ್ಗ ಚಿಂತನೆ ನಡೆಸಿದೆ.

ನಿಷೇಧಾಜ್ಞೆ ಉಲ್ಲಂಘಿಸಲು ಯತ್ನಿ­ಸಿದ ಬಿಜೆಪಿ ಶಾಸಕಾಂಗ ಪಕ್ಷದ ನಾಯಕ ಹುಕುಂ ಸಿಂಗ್‌, ಶಾಸಕರಾದ ಸುರೇಶ್‌ ರಾಣಾ, ಸಂಗೀತ್‌ಸಾಮ್‌, ಭರ್ತೇಂದು, ಕಾಂಗ್ರೆಸ್ ಮುಖಂಡ ಹರೇಂದ್ರ ಮಲಿಕ್‌ ಮತ್ತಿತರರ ವಿರುದ್ಧ ಮೊಕದ್ದಮೆ ದಾಖಲಿ­ಸ­ಲಾಗಿದೆ. ಕೇಂದ್ರ ಸಚಿವ ಅಜಿತ್‌ ಸಿಂಗ್‌, ಬಿಜೆಪಿಯ ರವಿಶಂಕರ್‌ ಪ್ರಸಾದ್‌ ಸೇರಿ ಕೆಲವು ಹಿರಿಯ ನಾಯಕರು ಸೋಮ­ವಾರ ಮುಜಾಫರ್‌­ನಗರಕ್ಕೆ ಹೋಗಲು ಯತ್ನಿಸಿದ್ದು, ಆದರೆ ಮಾರ್ಗಮಧ್ಯೆ ಅವ­ರನ್ನು ತಡೆಯಲಾಯಿತು.

  ಹಿಂಸೆ ತಡೆಯಲು ವಿಫಲ­ರಾದ ಅನೇಕ ಹಿರಿಯ ಪೊಲೀಸ್‌ ಮತು್ತ ನಾಗರಿಕ ಸೇವಾ ಅಧಿಕಾರಿಗಳನು್ನ ಜಿಲೆ್ಲ­ಯಿಂದ ಎತ್ತಂಗಡಿ ಮಾಡಲಾಗಿದೆ. ಸಹ­ರಾಪುರ ವಲಯ ಪೊಲೀಸ್‌ ಕಮಿಷ­ನರ್‌, ಡಿಐಜಿ ಹಾಗೂ ಮುಜಾ­ಫರ್‌­ನಗರ ಮತು್ತ ಶಾಮಿ್ಲ ಜಿಲೆ್ಲಗಳ ಪೊಲೀಸ್‌ ವರಿಷಾ್ಠಧಿ­ಕಾರಿಗಳನು್ನ ವಗಾರ್ಯಿಸಲಾಗಿದೆ.

ನ್ಯಾಯಾಂಗ ತನಿಖೆ:
ಈ ಮಧೆ್ಯ, ಗಲಭೆಯ ಕುರಿತು ತನಿಖೆ ನಡೆಸಲು ನಿವೃತ್ತ ನ್ಯಾಯಮೂರ್ತಿ ವಿಷು್ಣ ಸಹಾಯ್‌ ಅವರ ನೇತೃತ್ವದಲಿ್ಲ ಏಕ ಸದಸ್ಯ ನ್ಯಾಯಾಂಗ ಆಯೋಗ ರಚಿಸ­ಲಾಗಿದೆ. ಸರ್ಕಾರಕೆ್ಕ ಇನೆ್ನರಡು ತಿಂಗಳಲಿ್ಲ ಆಯೋಗ ವರದಿ  ಸಲಿ್ಲಸಲಿದೆ.

ರಾಜ್ಯದ ಮುಖ್ಯಮಂತಿ್ರ ಅಖಿಲೇಶ್‌ ಯಾದವ್‌ ಅವರು ತಮ್ಮ ಸರ್ಕಾರದ ಹೆಸರಿಗೆ ಮಸಿ ಬಳಿಯುವ ಸಂಚಿನಿಂದ ಗಲಭೆ ನಡೆಸಲಾಗಿದೆ ಎಂದು ಆರೋಪಿಸಿ­ದ್ದಾರೆ. ಗಲಭೆ ನಿಯಂತಿ್ರಸಲು ಎಲ್ಲ ಅಗತ್ಯ ಕಾನೂನು ಕ್ರಮ ಕೈಗೊಂಡಿ­ರು­ವು­ದಾಗಿ ಅವರು ತಿಳಿಸಿದ್ದಾರೆ.

ರಾಜ್ಯದ ರಾಜ್ಯಪಾಲ ಬಿ.ಎಲ್‌. ಜೋಷಿ ಅವರು ಕೇಂದ್ರಕೆ್ಕ ಕಳು­ಹಿಸಿರುವ ತಮ್ಮ ವರದಿಯಲಿ್ಲ ಹಿಂಸೆ ತಡೆಯಲು ರಾಜ್ಯ ಸರ್ಕಾರ ವಿಫಲ­ವಾಗಿರುವುದಾಗಿ ಆಪಾದಿಸಿರು­ವು­ದಾಗಿ ವರದಿಯಾಗಿದೆ.

ಗಲಭೆಯ ಹಿನ್ನೆಲೆ:
ಕೆಲವು ದಿನಗಳ ಹಿಂದೆ, ಮುಜಾ­ಫರ್‌­­ನಗರ ಜಿಲೆ್ಲಯ ಕಾವಲ್‌ ಗ್ರಾಮ­ದಲಿ್ಲ ಕೀಟಲೆ ಪ್ರಕರಣಕೆ್ಕ ಸಂಬಂಧಿಸಿ ಸಮು­ದಾಯವೊಂದರ ಯುವಕನನು್ನ ಇಬ್ಬರು ಯುವಕರು ಹತೆ್ಯ ಮಾಡಿದ್ದರು.  ನಂತರ ಇವರಿಬ್ಬರನು್ನ ಸಮುದಾಯ­ವೊಂದರ ಸದಸ್ಯರು (ಆ.27ರಂದು) ಹತೆ್ಯ ಮಾಡಿ­ದರು. ಆಮೇಲೆ ಇದನು್ನ ಪ್ರತಿ­ಭ­ಟಿ­ಸಲು ಭಾರತೀಯ ಕಿಸಾನ್‌ ಸಂಘ (ಬಿಕೆಯು)  ’ಮಹಾ­ಪಂಚಾ­ಯತ್‌’ (ಸಭೆ) ನಡೆಸಿದ ಸಂದರ್ಭ­ದಲಿ್ಲ ಸಮು­ದಾಯ­ವೊಂದರ ಸದಸ್ಯ­ನನು್ನ ಉದಿ್ರಕರ ಗುಂಪು ಹೊಡೆದು ಸಾಯಿಸಿತು. ಈ ಘಟನೆಗಳು ಕೋಮು­ಗಲಭೆ ಹರ­ಡಲು ಕಾರಣವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT