ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಣಗಳ ದಾಳಿಗೆ ಕುಸಿದ ಭಾರತ

Last Updated 14 ಜನವರಿ 2011, 9:25 IST
ಅಕ್ಷರ ಗಾತ್ರ

ಡರ್ಬನ್: ಸರಣಿಯ ಮೊದಲ ಪಂದ್ಯದಲ್ಲಿ ವಿಜಯದೊಂದಿಗೆ ಗೆಲುವಿನ ಮುನ್ನುಡಿ ಬರೆಯುವ ಕನಸು ಕಂಡ ಭಾರತದ ಆಸೆ ನುಚ್ಚು ನೂರಾಯಿತು.
ಕಿಂಗ್ಸ್‌ಮೇಡ್ ಕ್ರೀಡಾಂಗಣದಲ್ಲಿ ಬುಧವಾರ ರಾತ್ರಿ ನಡೆದ ಐದು ಪಂದ್ಯಗಳ ಸರಣಿಯ ಮೊದಲ ಏಕದಿನ ಪಂದ್ಯದಲ್ಲಿ ಮಹೇಂದ್ರ ಸಿಂಗ್ ದೋನಿ ಬಳಗಕ್ಕೆ ‘ಟಾಸ್’ ಸೋಲಿನ ಆಘಾತ. ಎದುರಾಳಿಗಳನ್ನು ಬೇಗ ಕಟ್ಟಿಹಾಕಬೇಕು ಎನ್ನುವ ಉತ್ಸಾಹವಿದ್ದರೂ, ಅದಕ್ಕೆ ತಕ್ಕಂತೆ ಬೌಲಿಂಗ್ ಅಸ್ತ್ರಗಳು ಬತ್ತಳಿಕೆಯಿಂದ ಹೊರಬರಲಿಲ್ಲ.ಎದುರಾಳಿಗಳನ್ನು ಚಕಿತಗೊಳಿಸಲಿಲ್ಲ. ಬ್ಯಾಟಿಂಗ್ ವಿಭಾಗದಲ್ಲಿಯೂ ಕುಸಿತ ಕಂಡ ದೋನಿ ಬಳಗಕ್ಕೆ ಮೊದಲ ಪಂದ್ಯದಲ್ಲಿ ಸೋಲು ಉಂಟಾಯಿತು.

ಭಾರತಕ್ಕೆ 289 ರನ್‌ಗಳ ಸವಾಲು ನೀಡಿದ್ದ ದಕ್ಷಿಣ ಆಫ್ರಿಕಾದ ಮೊತ್ತಕ್ಕೆ ಉತ್ತರ ನೀಡುವಲ್ಲಿ ಎಡವಿದ ಭಾರತ 35.4 ಓವರ್‌ಗಳಲ್ಲಿ 154 ರನ್ ಗಳಿಸಿ ಆಲೌಟ್ ಆಯಿತು.ಇದರಿಂದ ಐದು ಪಂದ್ಯಗಳ ಸರಣಿಯಲ್ಲಿ ದಕ್ಷಿಣ ಆಫ್ರಿಕಾ 1-0 ಮುನ್ನಡೆ ಸಾಧಿಸಿತು. ಸವಾಲಿನ ಮೊತ್ತಕ್ಕೆ ಉತ್ತರ ನೀಡಲು ಬಂದ ಭಾರತದ ಆಟಗಾರರು ಒಬ್ಬರ ನಂತರ ಒಬ್ಬರಂತೆ ಪೆವಿಲಿಯನ್‌ನತ್ತ ಹೆಜ್ಜೆ ಹಾಕಿದರು. ತಂಡದ ಒಟ್ಟು ಮೊತ್ತ 100 ಆಗುವಷ್ಟರಲ್ಲಿ ಪ್ರಮುಖ ಐದು ಬ್ಯಾಟ್ಸ್‌ಮನ್‌ಗಳು ಔಟಾಗಿದ್ದರು. ತಂಡವನ್ನು ಗೆಲುವಿನ ದಡ ಸೇರಿಸಲು ವಿರಾಟ್ ಕೊಹ್ಲಿ (54; 122 ನಿ,, 70 ಎಸೆತ,, 2 ಬೌಂಡರಿ, 1 ಸಿಕ್ಸರ್) ನಡೆಸಿದ ಹೋರಾಟ ವ್ಯರ್ಥವಾಯಿತು.

ಇದಕ್ಕೂ ಮೊದಲ ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾದ ಅಬ್ರಹಾಮ್ ಡಿ ವೀಲಿಯರ್ಸ್ (76; 94 ನಿ., 69 ಎ., 7 ಬೌಂಡರಿ, 1 ಸಿಕ್ಸರ್) ಹಾಗೂ ಜೆನ್ ಪಾಲ್ ಡುಮಿನಿ (73; 110 ನಿ., 89 ಎ., 1 ಬೌಂಡರಿ, 1 ಸಿಕ್ಸರ್) ನಡುವಣ ಉತ್ತಮ ಜೊತೆಯಾಟ ಭಾರತಕ್ಕೆ ದುಬಾರಿಯಾಗಿ ಪರಿಣಮಿಸಿತು. ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್‌ಗಳು ಅಕ್ಷರಶಃ ಭಾರತದ ಬೌಲರ್‌ಗಳನ್ನು ಬ್ಯಾಟ್ ಮೂಲಕವೇ ‘ರೈಡ್’ ಮಾಡಿದರು.
 

ಸ್ಕೋರು ವಿವರ
ಭಾರತ  35.4 ಓವರ್‌ಗಳಲ್ಲಿ  154
ಮುರಳಿ ವಿಜಯ್ ಎಲ್‌ಬಿಡಬ್ಲ್ಯು ಬಿ ಡೆಲ್ ಸ್ಟೇನ್  01
ಸಚಿನ್ ತೆಂಡೂಲ್ಕರ್ ಸಿ ಡೆಲ್ ಸ್ಟೇನ್ ಬಿ ಲಾನ್‌ವಾಬೊ ತ್ಸೊತ್ಸೊಬೆ   07
ವಿರಾಟ್ ಕೊಹ್ಲಿ ಸಿ ಗ್ರೇಮ್ ಸ್ಮಿತ್ ಬಿ ಡೆಲ್ ಸ್ಟೇನ್  54
ರೋಹಿತ್ ಶರ್ಮ ಸಿ ಡಿ ವಿಲಿಯರ್ಸ್ ಬಿ ಮಾರ್ನ್ ಮಾರ್ಕೆಲ್  11
ಯುವರಾಜ್ ಸಿಂಗ್ ಸಿ ಗ್ರೇಮ್ ಸ್ಮಿತ್ ಬಿ ಮಾರ್ನ್ ಮಾರ್ಕೆಲ್   02
ಮಹೇಂದ್ರ ಸಿಂಗ್ ದೋನಿ ರನೌಟ್ (ವೇಯ್ನಿ ಪಾರ್ನೆಲ್)  25
ಸುರೇಶ್ ರೈನಾ ಸಿ ಕಾಲಿನ್ ಇನ್‌ಗ್ರಾಮ್ ಬಿ ಲಾನ್‌ವಾಬೊ ತ್ಸೊತ್ಸೊಬೆ 32
ಹರಭಜನ್ ಸಿಂಗ್ ಬಿ ವೈಯ್ನೆ ಪರ್ನೆಲ್  00
ಜಹೀರ್ ಖಾನ್ ಸಿ ಜೆನ್ ಪಾಲ್ ಡುಮಿನಿ ಬಿ ಲಾನ್‌ವಾಬೊ ತ್ಸೊತ್ಸೊಬೆ  06
ಆಶಿಶ್ ನೆಹ್ರಾ ಬಿ ಲಾನ್‌ವಾಬೊ ತ್ಸೊತ್ಸೊಬೆ   01
ಮುನಾಫ್ ಪಟೇಲ್ ಔಟಾಗದೇ  01
ಇತರೆ: (ಬೈ-4, , ವೈಡ್-10)  14

ವಿಕೆಟ್ ಪತನ: 1-3 (ಮುರಳಿ ವಿಜಯ್; 0.4), 2-13 (ಸಚಿನ್ ತೆಂಡೂಲ್ಕರ್: 3.3), 3-41 (ರೋಹಿತ್ ಶರ್ಮ: 10.1), 4-43 (ಯುವರಾಜ್ ಸಿಂಗ್ 10.05), 5-95 (ಮಹೇಂದ್ರ ಸಿಂಗ್ ದೋನಿ: 22.5), 6-128 (ವಿರಾಟ್ ಕೊಹ್ಲಿ: 29.3), 7-129 (ಹರಭಜನ್ ಸಿಂಗ್: 30.2), 8-148 (ಸುರೇಶ್ ರೈನಾ 33.2), 9-153 (ಆಶಿಶ್ ನೆಹ್ರಾ 35.2), 10-154 (ಜಹೀರ್ ಖಾನ್: 35.4).

ಬೌಲಿಂಗ್: ಡೆಲ್ ಸ್ಟೇನ್ 6-0-29-2 (ವೈಡ್-4), ಲಾನ್‌ವಾಬೊ ತ್ಸೊತ್ಸೊಬೆ 8.4-0-31-4 (ವೈಡ್-2), ಮಾರ್ನ್ ಮಾರ್ಕೆಲ್ 5-0-12-2, ವೈಯ್ನೆ ಪರ್ನೆಲ್ 7-0-25-1 (ವೈಡ್ 4), ಜಾನ್ ಬೊಥಾ 7-0-46-0, ಜೆನ್ ಪಾಲ್ ಡುಮಿನಿ 2-0-7-0

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT