ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿದಾಸ ಸಂಭ್ರಮ

Last Updated 2 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ನಾದಜ್ಯೋತಿ ಶ್ರೀತ್ಯಾಗರಾಜ ಸ್ವಾಮಿ ಭಜನ ಸಭಾ: ಆರ್.ಪಿ.ರವಿಶಂಕರ್ ಸಭಾಂಗಣ, ಕನ್ಯಕಾಪರಮೇಶ್ವರಿ ದೇವಸ್ಥಾನದ ಆವರಣ, 8ನೇ ಅಡ್ಡರಸ್ತೆ, ಮಲ್ಲೇಶ್ವರ. 9ನೇ ಹರಿದಾಸ ಸಂಭ್ರಮ.

ಶನಿವಾರ ಉದ್ಘಾಟನೆ- ಡಾ. ವಿದ್ಯಾಭೂಷಣ. ಅತಿಥಿ- ಪಿ.ಆರ್. ಆನಂದ ತೀರ್ಥಾಚಾರ್ ಪಗದಲ್, ಮೃದಂಗ ಕಲಾವಿದ ಬಿ.ಕೆ. ಚಂದ್ರಮೌಳಿ. ಸಂಜೆ 6. ಡಾ. ವಿದ್ಯಾಭೂಷಣ ಅವರಿಂದ ಹರಿದಾಸ ಕೃತಿಗಳ ಗಾಯನ. ವಯಲಿನ್- ಸಿ.ಆರ್. ಪ್ರದೇಶಾಚಾರ್. ಮೃದಂಗ- ಬಿ.ಕೆ. ಚಂದ್ರಮೌಳಿ. ಸಂಜೆ 7. ಭಾನುವಾರ ಬೆಳಿಗ್ಗೆ 10ಕ್ಕೆ ಪ್ರೊ.ಎಸ್. ಮುರಳಿ ಶರ್ಮ ಅವರಿಂದ `ಶ್ರೀಪಾದರಾಜರ ಕೃತಿಗಳ ಭಕ್ತಿ' ಕುರಿತು ಪ್ರವಚನ. ಜೋಯಿಷರ್ ಶ್ರೀಕಾಂತ್ ಅವರಿಂದ ಗಾಯನ. ಜಿ. ವೆಂಕಟೇಶ್ ಜೋಯಿಷರ್ ಅವರಿಂದ ಪಿಟೀಲು.

ಎಚ್.ಎಸ್. ಕೃಷ್ಣಮೂರ್ತಿ ಅವರಿಂದ ಮೃದಂಗ. ಬೆಳಿಗ್ಗೆ 11.30ಕ್ಕೆ ಬಿ. ಚಂದ್ರಶೇಖರ್ ಅವರಿಂದ `ವ್ಯಾಸರಾಜರ ಕೃತಿಗಳಲ್ಲಿ ಶ್ರೀಕೃಷ್ಣನ ವರ್ಣನೆ ಮತ್ತು ಶ್ರೀಕೃಷ್ಣನ ನಾಟ್ಯದ ವರ್ಣನೆ' ಕುರಿತು ಪ್ರವಚನ. ಅಮೃತ ವೆಂಕಟೇಶ್ (ಗಾಯನ). ಆನಂದ್ ವಿಶ್ವನಾಥ್ (ಪಿಟೀಲು).
ಬಿ.ಸಿ. ಮಂಜುನಾಥ್ (ಮೃದಂಗ). ಮಧ್ಯಾಹ್ನ 3ಕ್ಕೆ ಎಂ.ಆರ್. ಸತ್ಯನಾರಾಯಣ ಅವರಿಂದ `ಶ್ರೀಮದ್ ಭಗವದ್ಗೀತೆ' ಕುರಿತು ಗಮಕ ವಾಚನ ಹಾಗೂ ವ್ಯಾಖ್ಯಾನ. ಸಂಜೆ 4ಕ್ಕೆ ಶ್ರೀಪಾದಾಚಾರ್ ಅವರಿಂದ `ಮಹೀಪತಿದಾಸರ ಕೃತಿಗಳಲ್ಲಿ ಯೋಗಸಾಧನೆ' ಕುರಿತು ಪ್ರವಚನ. ತಿರುಮಲೆ ಶ್ರೀನಿವಾಸ (ಗಾಯನ). ಬಿ.ಆರ್. ರಮ್ಯ (ಪಿಟೀಲು). ಡಿ.ಆರ್. ಚೇನತ್ ಮೂರ್ತಿ (ಮೃದಂಗ). ಸಂಜೆ 5.30ಕ್ಕೆ

`ಹರಿದಾಸರ ಕೃತಿಗಳಲ್ಲಿ ಮನೋವಿಜ್ಞಾನ' ವಿಷಯ ಕುರಿತು ಹೊಳವನಹಳ್ಳಿ ಶ್ರೀನಿವಾಸಾಚಾರ್ ಅವರಿಂದ ಪ್ರವಚನ. ವಾಣಿ ಸತೀಶ್ ಗಾಯನ. ಮೈಸೂರು ಸತೀಶ್ ಪಿಟೀಲು ಹಾಗೂ ಎ. ರೇಣುಕ ಪ್ರಸಾದ್ ಮೃದಂಗ ಸಹಕಾರ ನೀಡಲಿದ್ದಾರೆ. ರಾತ್ರಿ 7ಕ್ಕೆ ಎಂ.ಎಸ್. ಶೀಲ ಮತ್ತು ವೃಂದದವರಿಂದ ಪುರಂದರ ದಾಸರ ನವರತ್ನ ಮಾಲಿಕಾ ಗೋಷ್ಠಿ ಗಾಯನ. ಸಿಂಧು ಸುಚೇತನಾ- ಪಿಟೀಲು. ಬಿ.ಆರ್. ಶ್ರೀನಿವಾಸ್- ಮೃದಂಗ. ರಾತ್ರಿ 8ಕ್ಕೆ ಸಮಾರೋಪ ಸಮಾರಂಭ. ಅತಿಥಿ ಪುರಂದರ ದಾಸರ ಸೇವಾ ಸಮಿತಿ ಕಾರ್ಯದರ್ಶಿ ನ. ರಾಜಾರಾವ್.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT