ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರಿಯಾಣ: ದಲಿತ ಗರ್ಭಿಣಿ ಮೇಲೆ ಅತ್ಯಾಚಾರ

Last Updated 10 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಕೈಥಾಲ್ (ಹರಿಯಾಣ): ದಲಿತ ಗರ್ಭಿಣಿಯೊಬ್ಬರನ್ನು ಅಪಹರಿಸಿದ ಇಬ್ಬರು ಯುವಕರು ಅತ್ಯಾಚಾರ ಎಸಗಿರುವ ಅಮಾನುಷ ಘಟನೆಯೊಂದು ಕೈಥಾಲ್ ಜಿಲ್ಲೆಯ ಕಲ್ಯಾತ್‌ನಲ್ಲಿ ವರದಿಯಾಗಿದೆ.

ಇದು ಹರಿಯಾಣದಲ್ಲಿ ಒಂದು ತಿಂಗಳ ಅವಧಿಯಲ್ಲಿ ನಡೆದಿರುವ 15ನೇ ಅತ್ಯಾಚಾರ ಪ್ರಕರಣ.
ಆರೋಪಿಗಳಾದ ರಾಕೇಶ್ ಮತ್ತು ಪವನ್ ಅವರನ್ನು ಬಂಧಿಸಲಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಅತ್ಯಾಚಾರಕ್ಕೆ ಗುರಿಯಾದ 19 ವರ್ಷದ ಗರ್ಭಿಣಿಯು ಕೈಥಾಲ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿ ಕುಲ್‌ದೀಪ್ ಸಿಂಗ್ ಯಾದವ್ ಅವರ ಮುಂದೆ ಮಂಗಳವಾರ ಹೇಳಿಕೆ ನೀಡಿದ್ದಾರೆ. `ಯುವತಿಯು ಐದು ತಿಂಗಳ ಗರ್ಭಿಣಿಯಾಗಿದ್ದು, ಆಕೆಯನ್ನು ವೈದ್ಯಕೀಯ ತಪಾಸಣೆಗೆ ಒಳಪಡಿಸಲಾಗಿದೆ.

ವರದಿಗಾಗಿ ನಿರೀಕ್ಷಿಸಲಾಗುತ್ತಿದೆ~ ಎಂದು ಯಾದವ್ ತಿಳಿಸಿದ್ದಾರೆ. `ಆರೋಪಿಗಳಿಗೂ ಮತ್ತು ಯುವತಿಗೂ ಪರಸ್ಪರ ಪರಿಚಯವಿತ್ತು. ಯುವತಿಯು ಆರೋಪಿಗಳಲ್ಲಿ ಒಬ್ಬನಿಗೆ ದೂರವಾಣಿ ಕರೆ ಮಾಡಿ ಭೇಟಿಯಾಗುವಂತೆ ತಿಳಿಸಿದ್ದಳು. ಘಟನೆ ಬಗ್ಗೆ ವಿಸ್ತೃತ ತನಿಖೆ ನಡೆಸಲಾಗುವುದು~ ಎಂದು ಅವರು ಹೇಳಿದ್ದಾರೆ.

ಜಾತಿ ಪಂಚಾಯ್ತಿ ಚಿಂತನೆಗೆ ಚೌತಾಲ ಬೆಂಬಲ

ಚಂಡೀಗಡ (ಪಿಟಿಐ): ಹರಿಯಾಣದಲ್ಲಿ ಹೆಚ್ಚುತ್ತಿರುವ ಅತ್ಯಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಮಾಜಿ ಮುಖ್ಯಮಂತ್ರಿ ಓಂ ಪ್ರಕಾಶ್ ಚೌತಾಲ ಅವರು ಬಾಲ್ಯ ವಿವಾಹ ಸರಿ ಎನ್ನುವ ಜಾತಿ ಪಂಚಾಯಿತಿಗಳ ಚಿಂತನೆಯನ್ನು ಬೆಂಬಲಿಸಿದ್ದಾರೆ.

ವಯಸ್ಸಿಗೆ ಬಂದ ಹೆಣ್ಣುಮಕ್ಕಳ ಮೇಲೆ ಅತ್ಯಾಚಾರ ಆಗುವುದನ್ನು ತಪ್ಪಿಸಲು ವಿವಾಹದ ಕನಿಷ್ಠ ವಯೋಮಾನವನ್ನು ಗಂಡು- ಹೆಣ್ಣು ಇಬ್ಬರಿಗೂ 16 ವರ್ಷಕ್ಕೆ ತಗ್ಗಿಸಬೇಕು ಎಂದು ಅವರು ಹೇಳಿದ್ದಾರೆ.
ಅತ್ಯಾಚಾರ ಪ್ರಕರಣಗಳು ಕಡಿಮೆ ಆಗಬೇಕಿದ್ದರೆ ವಿವಾಹದ ವಯಸ್ಸನ್ನು ಕಡಿಮೆ ಮಾಡಬೇಕು ಎನ್ನುವ ಜಾತಿ ಪಂಚಾಯ್ತಿಗಳ ನಿಲುವು ಸರಿಯಾಗಿದೆ ಎಂದೂ ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT