ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹರೀಶ್, ಇಬ್ರಾಹಿಂ ಮೂರು ದಾಖಲೆ

ರಾಜ್ಯಮಟ್ಟದ ಕಿರಿಯರ ವೇಟ್‌ಲಿಫ್ಟಿಂಗ್
Last Updated 3 ಆಗಸ್ಟ್ 2013, 19:59 IST
ಅಕ್ಷರ ಗಾತ್ರ

ದಾವಣಗೆರೆ: ಉಜಿರೆಯ ಎಸ್‌ಡಿಎಂ ಕಾಲೇಜಿನ ಹರೀಶ್, ನಗರದ ಕೆ.ಇ.ಬಿ. ಸಮುದಾಯ ಭವನದಲ್ಲಿ  ಜಿಲ್ಲಾ ವೇಟ್‌ಲಿಫ್ಟಿಂಗ್ ಸಂಸ್ಥೆ, ಗ್ರೂಪ್ ಆಫ್ ಐರನ್ ಗೇಮ್ಸ ಆಶ್ರಯದಲ್ಲಿ ಶನಿವಾರ ನಡೆದ ರಾಜ್ಯ ಮಟ್ಟದ ಕಿರಿಯರ ವೇಟ್‌ಲಿಫ್ಟಿಂಗ್ ಸ್ಪರ್ಧೆಯ 77 ಕೆ.ಜಿ. ವಿಭಾಗದಲ್ಲಿ ಒಟ್ಟು ಮೂರು ಕೂಟ ದಾಖಲೆಗಳನ್ನು ಬರೆದು ಗಮನ ಸೆಳೆದರು.

ಸ್ನ್ಯಾಚ್‌ನಲ್ಲಿ ಅವರು ಎತ್ತಿದ 107 ಕೆ.ಜಿ, ಕ್ಲೀನ್ ಮತ್ತು ಜರ್ಕ್‌ನಲ್ಲಿ 142 ಮತ್ತು ಒಟ್ಟಾರೆ 249 ಕೆ.ಜಿ. ಸಾಧನೆ ದಾಖಲೆ ಎನಿಸಿತು. ಮೂಡುಬಿದಿರೆಯ ಆಳ್ವಾಸ್ ಕಾಲೇಜಿನ ನವೀದ್ (ಒಟ್ಟು 230 ಕೆ.ಜಿ) ಮತ್ತು ಅದೇ ಊರಿನ ಧವಳಾ ಕಾಲೇಜಿನ ಸಂಪತ್ (ಒಟ್ಟು 169 ಕೆ.ಜಿ) ಕ್ರಮವಾಗಿ ಎರಡು ಮತ್ತು ಮೂರನೇ ಸ್ಥಾನ ಪಡೆದರು.

85 ಕೆ.ಜಿ ವಿಭಾಗದಲ್ಲಿ ಸ್ಥಳೀಯ ಕಾರ್ಪೊರೇಷನ್ ಜಿಮ್‌ನ ಇಬ್ರಾಹಿಂ ಸಿ. ಸ್ನ್ಯಾಚ್‌ನಲ್ಲಿ 104, ಕ್ಲೀನ್ ಅಂಡ್ ಜರ್ಕ್‌ನಲ್ಲಿ 130 ಕೆ.ಜಿ. ಮತ್ತು ಒಟ್ಟು 234 ಕೆ.ಜಿ ಎತ್ತಿ ಮೂರೂ ವಿಭಾಗಗಳಲ್ಲಿ ಹಳೆಯ ದಾಖಲೆ ಮುರಿದರು. ಆಳ್ವಾಸ್‌ನ ಮಂಜುನಾಥ್ (ಒಟ್ಟು 208 ಕೆ.ಜಿ) ಎರಡನೇ ಮತ್ತು ಧವಳಾ ಕಾಲೇಜಿನ ಮನೋಹರ್ (ಒಟ್ಟು 153) ಮೂರನೇ ಸ್ಥಾನ ಪಡೆದರು.

69 ಕೆ.ಜಿ. ವಿಭಾಗದಲ್ಲಿ ಉಜಿರೆಯ ಎಸ್‌ಡಿಎಂ ಕಾಲೇಜಿನ ಸಂತೋಷ್ ಕುಮಾರ್ ಒಟ್ಟು 213 ಕೆ.ಜಿ ಭಾರ ಎತ್ತಿ ಮೊದಲ ಸ್ಥಾನ ಗಳಿಸುವ ಹಾದಿಯಲ್ಲಿ ಎರಡು ದಾಖಲೆ ಸ್ಥಾಪಿಸಿದರು. ಸ್ನ್ಯಾಚ್‌ನಲ್ಲಿ 88 ಕೆ.ಜಿ ಎತ್ತಿದ ಅವರು, ಕ್ಲೀನ್ ಅಂಡ್ ಜರ್ಕ್ (125 ಕೆ.ಜಿ.) ಮತ್ತು ಒಟ್ಟು ವಿಭಾಗದಲ್ಲಿ (213 ಕೆ.ಜಿ) ಎರಡು ದಾಖಲೆಗಳನ್ನು ಸ್ಥಾಪಿಸಿದರು. ಇದೇ ವಿಭಾಗದಲ್ಲಿ ಎರಡನೇ ಸ್ಥಾನ ಪಡೆದ ಆಳ್ವಾಸ್ ಕಾಲೇಜಿನ ಮೋಹನ್, ಸ್ನ್ಯಾಚ್‌ನಲ್ಲಿ 94 ಕೆ.ಜಿ ಎತ್ತಿ ಕೂಟ ದಾಖಲೆ ಸ್ಥಾಪಿಸಿದರು. ಅವರು ಒಟ್ಟು 212 ಕೆ.ಜಿ ಎತ್ತಿದರು. ಭದ್ರಾವತಿಯ ಸುಧೀರ್ ಫಿಟ್ನೆಸ್‌ನ ಕೃಷ್ಣಮೂರ್ತಿ (ಒಟ್ಟು 195 ಕೆ.ಜಿ) ಮೂರನೇ ಸ್ಥಾನ ಗಳಿಸಿದರು.

62 ಕೆ.ಜಿ ವಿಭಾಗ: ಎಸ್‌ಡಿಎಂ ಕಾಲೇಜಿನ ಮಹಮ್ಮದ್ ದಿಶಾನ್ ಪ್ರಥಮ (ಸ್ನ್ಯಾಚ್ 85 ಕೆ.ಜಿ, ಕ್ಲೀನ್‌ಜರ್ಕ್ 105 ಕೆ.ಜಿ, ಒಟ್ಟು 190 ಕೆ.ಜಿ), ಮೈಸೂರಿನ ಪ್ರವೀಣ್ ಎರಡನೇ (ಸ್ನ್ಯಾಚ್ 81 ಕೆ.ಜಿ, ಕ್ಲೀನ್ ಜರ್ಕ್ 106 ಕೆ.ಜಿ, ಒಟ್ಟು 187 ಕೆ.ಜಿ), ಮೂಡಬಿದಿರೆಯ ಧವಳಾ ಕಾಲೇಜಿನ ರಂಜಿತ್ ಮೂರನೇ ಸ್ಥಾನ (ಸ್ನ್ಯಾಚ್ 84 ಕೆ.ಜಿ, ಕ್ಲೀನ್‌ಜರ್ಕ್ 103 ಕೆ.ಜಿ, ಒಟ್ಟು 187 ಕೆ.ಜಿ) ಪಡೆದರು.

56 ಕೆ.ಜಿ ವಿಭಾಗ: ಆಳ್ವಾಸ್ ಕಾಲೇಜಿನ ಎಂ.ಎಸ್.ಹರೀಶ್ ಪ್ರಥಮ (ಸ್ನ್ಯಾಚ್ 83 ಕೆ.ಜಿ, ಕ್ಲೀನ್‌ಜರ್ಕ್ 107 ಕೆ.ಜಿ, ಒಟ್ಟು 190 ಕೆ.ಜಿ), ಎಚ್.ಬಸಪ್ಪ ಎರಡನೇ (ಸ್ನ್ಯಾಚ್ 65 ಕೆ.ಜಿ, ಕ್ಲೀನ್‌ಜರ್ಕ್ 107 ಕೆ.ಜಿ, ಒಟ್ಟು 155 ಕೆ.ಜಿ), ಕಾರ್ಪೊರೇಷನ್ ಜಿಮ್‌ನ ರಾಘವೇಂದ್ರ ಮೂರನೇ (ಸ್ನ್ಯಾಚ್ 63 ಕೆ.ಜಿ, ಕ್ಲೀನ್‌ಜರ್ಕ್75 ಕೆ.ಜಿ, ಒಟ್ಟು 138 ಕೆ.ಜಿ) ಸ್ಥಾನ ಗಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT