ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲವು ಸಂಗತಿಗಳ ಪ್ರಭಾವ

Last Updated 11 ಸೆಪ್ಟೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಪಿಟಿಐ): ಮುಂಬೈ ಷೇರುಪೇಟೆಯಲ್ಲಿ ಈ ವಾರವೂ ಏರಿಳಿತ ಕಂಡು ಬರಲಿದ್ದು, ವಹಿವಾಟಿನ ಮುಂದಿನ ನಡೆಯನ್ನು ಹಲವಾರು ವಿದ್ಯಮಾನಗಳು ನಿರ್ಧರಿಸಲಿವೆ.

ಭಾರತೀಯ ರಿಸರ್ವ್ ಬ್ಯಾಂಕ್‌ನ ಮಧ್ಯಂತರ ತ್ರೈಮಾಸಿಕ ಪರಾಮರ್ಶೆ, ಕೈಗಾರಿಕಾ ಉತ್ಪಾದನಾ ಸೂಚ್ಯಂಕ, ಆಗಸ್ಟ್ ತಿಂಗಳ ಹಣದುಬ್ಬರ ಮುಂತಾದವು ವಹಿವಾಟಿನ ಮೇಲೆ ಪ್ರಭಾವ ಬೀರಲಿವೆ. `ಆರ್‌ಬಿಐ~ ಕೈಗೊಳ್ಳಲಿರುವ ಮತ್ತು ಕೈಗೊಳ್ಳದ ನಿರ್ಧಾರಗಳು ಸಂವೇದಿ ಸೂಚ್ಯಂಕದ ಗತಿ  ನಿರ್ಧರಿಸಲಿವೆ ಎಂದು ಷೇರುಪೇಟೆ ಪರಿಣತರು ಅಂದಾಜಿಸಿದ್ದಾರೆ.

ಜಾಗತಿಕವಾಗಿ ಎಲ್ಲರ ದೃಷ್ಟಿ ಈಗ ಅಮೆರಿಕದ ಮೇಲೆ ಇದೆ. ಅಧ್ಯಕ್ಷ ಬರಾಕ್ ಒಬಾಮ ಅವರ ಉದ್ದೇಶಿತ ಆರ್ಥಿಕ ಉತ್ತೇಜನಾ ಕೊಡುಗೆಗಳಿಗೆ ಅಮೆರಿಕದ ಕಾಂಗ್ರೆಸ್ ಅನುಮೋದನೆ ನೀಡುವ ಮತ್ತು ಗ್ರೀಕ್‌ನ ಸಾಲದ ಬಿಕ್ಕಟ್ಟಿಗೆ ಯೂರೋಪ್ ಪರಿಹಾರ ಕಂಡುಕೊಳ್ಳುವ ವಿಚಾರವೂ ಪ್ರಭಾವ ಬೀರಲಿದೆ. ಇದರ ಜತೆಗೆ ಈ ತಿಂಗಳ 16ರಂದು ಪ್ರಕಟಗೊಳ್ಳಲಿರುವ `ಆರ್‌ಬಿಐ~ನ ಧೋರಣೆ ಕೂಡ ಪ್ರಮುಖವಾಗಿ ಪರಿಗಣನೆಗೆ ಬರಲಿದೆ ಎಂದು ಬೋನಾಂಜಾ ಪೋರ್ಟ್‌ಫೋಲಿಯೊದ ಹಿರಿಯ ಸಂಶೋಧನಾ ವಿಶ್ಲೇಷಕ ಶಾನು ಗೋಯೆಲ್ ಅಭಿಪ್ರಾಯಪಟ್ಟಿದ್ದಾರೆ.

ಆರ್ಥಿಕ ಉತ್ತೇಜನಾ ಕೊಡುಗೆಗಳ ಬಗ್ಗೆ ಅಮೆರಿಕದ ಫೆಡರಲ್ ರಿಸರ್ವ್‌ನ  (ಕೇಂದ್ರೀಯ ಬ್ಯಾಂಕ್) ಅಧ್ಯಕ್ಷ ಬೆನ್ ಬೆರ್ನಂಕೆ ಅವರು ಕೂಡ ಯಾವುದೇ ಇಂಗಿತ ನೀಡದಿರುವುದು ಹೂಡಿಕೆದಾರರಲ್ಲಿ ಕಳವಳ ಮೂಡಿಸಿದೆ. ಶುಕ್ರವಾರ  ಜಾಗತಿಕ ಷೇರುಪೇಟೆಯ ವಹಿವಾಟು ಕುಸಿದಿರುವುದು, ಅರ್ಥ ವ್ಯವಸ್ಥೆಯಲ್ಲಿ ಎಲ್ಲವೂ ಸರಿ ಇಲ್ಲದಿರುವುದನ್ನು ಮತ್ತೊಮ್ಮೆ ನೆನಪಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT