ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ: ಆರೋಪ ನಿರಾಧಾರ

Last Updated 9 ಜನವರಿ 2012, 18:55 IST
ಅಕ್ಷರ ಗಾತ್ರ

ಬೆಂಗಳೂರು: `ಬಹುಜನ ಸಮಾಜ ಪಕ್ಷದ (ಬಿಎಸ್‌ಪಿ) ರಾಜ್ಯ ಘಟಕದ ಅಧ್ಯಕ್ಷ ಮಾರಸಂದ್ರ ಮುನಿಯಪ್ಪ ಮತ್ತು ಅವರ ಸಹಚರರು ವೀರಣ್ಣ ಎಂಬುವವರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ನಿರಾಧಾರವಾದದ್ದು~ ಎಂದು ಪಕ್ಷದ ರಾಜ್ಯ ಘಟಕದ ಉಪಾಧ್ಯಕ್ಷ ಗೋಪಿನಾಥ್ ಹೇಳಿದರು.

ನಗರದಲ್ಲಿ ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಅವರು ಮಾತನಾಡಿ, `ಈ ಹಲ್ಲೆ ಪ್ರಕರಣಕ್ಕೂ ಮಾರಸಂದ್ರ ಮುನಿಯಪ್ಪ ಅವರಿಗೂ ಯಾವುದೇ ಸಂಬಂಧವಿಲ್ಲ.  ಆ ಘಟನೆ ನಡೆದಾಗ ಮುನಿಯಪ್ಪ ಅವರು ಕನಕಪುರದ ಕಾರ್ಯಕ್ರಮದಲ್ಲಿದ್ದರು~ ಎಂದು ಸ್ಪಷ್ಟಪಡಿಸಿದರು.

`ಈ ಪ್ರಕರಣದ ಹಿಂದೆ ಕೇಂದ್ರ ಸಚಿವರೊಬ್ಬರ ಕೈವಾಡವಿದೆ. ಆ ಸಚಿವರು ಬೆಂಗಳೂರು ಸಮೀಪದ ಮಂಚೇನಹಳ್ಳಿಯಲ್ಲಿನ ದಲಿತರ 150 ಕೋಟಿ ಮೌಲ್ಯದ ಜಮೀನನ್ನು ಕಬಳಿಸಲು ಪ್ರಯತ್ನ ನಡೆಸಿದ್ದರು. ಆಗ ದಲಿತರ ಪರವಾಗಿ ಮುನಿಯಪ್ಪ ಹೋರಾಟ ಮಾಡಿದ್ದರು. ಇದಕ್ಕೆ ಪ್ರತೀಕಾರವಾಗಿ ಆ ಸಚಿವರು ಮುನಿಯಪ್ಪನವರ ವಿರುದ್ಧ ಪಿತೂರಿ ನಡೆಸಿದ್ದಾರೆ~ ಎಂದು ಖಜಾಂಚಿ ಕೋರಮಂಗಲ ಮುನಿಯಪ್ಪ ಆರೋಪಿಸಿದರು. ರಾಜ್ಯ ಪ್ರಧಾನ ಕಾರ್ಯದರ್ಶಿ ಬಿ.ಕಮಲನಾಭನ್, ಕಾರ್ಯದರ್ಶಿ ವಿ.ಮುನಿಸ್ವಾಮಿ, ಸಮಿತಿ ಸದಸ್ಯೆ ನಹೀದಾ ಸಲ್ಮ   ಮತ್ತಿತರರು ಪತ್ರಿಕಾಗೋಷ್ಠಿಯಲ್ಲಿ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT