ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಲ್ಲೆ: ಬಂಧನ ಅವಧಿ ವಿಸ್ತರಣೆ

Last Updated 12 ಏಪ್ರಿಲ್ 2014, 19:30 IST
ಅಕ್ಷರ ಗಾತ್ರ

ಮಾಲ್ಡಾ/ಪಶ್ಚಿಮ ಬಂಗಾಳ (ಪಿಟಿಐ): ಚುನಾವಣಾ ಆಯೋಗದ ಸಿಬ್ಬಂದಿ ಮೇಲೆ ಹಲ್ಲೆ ನಡೆಸಿದ್ದಕ್ಕಾಗಿ ಬಂಧನಕ್ಕೊಳಗಾಗಿದ್ದ ಪಶ್ಚಿಮ ಬಂಗಾಳದ ಸಚಿವೆ ಸಾವಿತ್ರಿ ಮಿತ್ರಾ ಅವರ ಮೊಮ್ಮಗ ಸೇರಿದಂತೆ ನಾಲ್ಕು ಜನರ ಬಂಧನದ ಅವಧಿಯನ್ನು ಐದು ದಿನ ವಿಸ್ತರಿಸಲಾಗಿದೆ.

ಮಿತ್ರಾ ಅವರ ಮೊಮ್ಮಗ ಸಮದೀಪ್‌ ಸರ್ಕಾರ್ ಅಲಿಯಾಸ್‌ ಟಿಂಕು, ಮೊತಿ ಉರ್‌ ರೆಹಮಾನ್‌, ಮುಕ್ಲೆ ಸುರ್‌ ರೆಹಮಾನ್‌ ಮತ್ತು ಜಮಾಲ್‌ ಖಾನ್‌ ಅವರನ್ನು ಶನಿವಾರ ಇಲ್ಲಿನ ಚೀಫ್‌ ಜ್ಯುಡಿಷಿಯಲ್‌ ಮ್ಯಾಜಿಸ್ಟ್ರೇಟ್‌ ಸುಮಿತ್ರಾ ದೇವ್‌ ಎದುರು ಹಾಜರುಪಡಿಸಲಾಯಿತು.

ಬಳಿಕ ಮ್ಯಾಜಿಸ್ಟ್ರೇಟ್‌ ಅವರು, ಬಂಧಿತರ ಬಂಧನದ ಅವಧಿಯನ್ನು ಐದು ದಿನಗಳವರೆಗೆ ವಿಸ್ತರಿಸಿ ಆದೇಶ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT