ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಕಟ್ಟಿ ಶ್ರೀ ಪ್ರಶಸ್ತಿಗೆ ಅರ್ಜಿ ಆಹ್ವಾನ

Last Updated 12 ಫೆಬ್ರುವರಿ 2012, 19:30 IST
ಅಕ್ಷರ ಗಾತ್ರ

ಮಹಾಲಿಂಗಪುರ: ಸ್ಥಳೀಯ ವಚನ ಪಿತಾಮಹ ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರತಿಷ್ಠಾನದ ಆಶ್ರಯದಲ್ಲಿ `ಹಳಕಟ್ಟಿ ವಚನೋತ್ಸವ -2012~- ರಾಜ್ಯ ಮಟ್ಟದ ಆರನೆಯ ವಚನ ಸಮಾವೇಶವು ಮಹಾರಾಷ್ಟ್ರದ ಸೊಲ್ಲಾಪುರದಲ್ಲಿ ನಡೆಯಲಿದೆ.

ಅದಕ್ಕಾಗಿ ಪ್ರಸಕ್ತ ಸಾಲಿನ ಹಳಕಟ್ಟಿ ಪ್ರಶಸ್ತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಯ್ಕೆಗೊಂಡವರಿಗೆ 3 ನಗದು ಬಹುಮಾನ ತಲಾ ರೂ.5000 ಹಾಗೂ ಪ್ರಶಸ್ತಿಪತ್ರ ನೀಡಿ ಸನ್ಮಾನಿಸಲಾಗುವುದು. ವಿವಿಧ ಕ್ಷೇತ್ರಗಳಲ್ಲಿ ವಿಶೇಷ ಸಾಧನೆ ಮಾಡಿದ ಗಣ್ಯರಿಗೆ 10 ವರ್ಷಗಳಿಂದ ಹಳಕಟ್ಟಿ ಶ್ರೀ ಪ್ರಶಸ್ತಿ ನೀಡಲಾಗುತ್ತಿದೆ.

ಗ್ರಂಥ ಪ್ರಶಸ್ತಿಗೆ ಶರಣ ಸಾಹಿತ್ಯ, ಶರಣರ ಬದುಕು, ವಚನ ವಿಮರ್ಶೆ, ಸಂಪಾದನೆ, ಸಂಶೋಧನೆ, ಆಧುನಿಕ ವಚನ ಸಾಹಿತ್ಯ ಗ್ರಂಥಗಳ 3 ಪ್ರತಿಗಳನ್ನು ಕಳಿಸಬೇಕು.

ವ್ಯಕ್ತಿಗತವಾಗಿರುವ ಸಾಧನೆಗೆ ಅರ್ಹ ವ್ಯಕ್ತಿಗಳಿಂದ, ಶರಣ ಸಾಹಿತ್ಯ, ಶರಣರ ಬದುಕು, ಶರಣ ಸಾಹಿತ್ಯದಲ್ಲಿ ತೊಡಗಿಕೊಂಡವರು ತಮ್ಮ ಸಂಕ್ಷಿಪ್ತ ವಿವರಗಳನ್ನು ಕಳುಹಿಸಿಕೊಡಬೇಕು.

ಸಂಘಟನಾ ಕ್ಷೇತ್ರದಲ್ಲಿ ಪುರುಷ ಅಥವಾ ಮಹಿಳಾ ಸಂಘಟನೆಗಳು ಶರಣ ಸಾಹಿತ್ಯ, ಸಂಸ್ಕೃತಿ ಪ್ರಚಾರಕ್ಕೆ ಶ್ರಮಿಸುತ್ತಿರುವ ಸಂಘಟನೆಗಳಿಗೆ ಮೀಸಲಿದ್ದು, ತಮ್ಮ ಸಂಘ ಸ್ಥಾಪನೆಗೊಂಡ ವರ್ಷ, ಸದಸ್ಯರ ಸಂಖ್ಯೆ, ಮಾಡಿದ ಸೇವಾ ವಿವರಗಳನ್ನು ಕಳಿಸಬಹುದು.

ಮೇಲ್ಕಾಣಿಸಿದ ಶರಣ ಸಾಹಿತ್ಯ ಗ್ರಂಥ, ವ್ಯಕ್ತಿಗತ ಮತ್ತು ಸಂಘಟನೆ ಹೀಗೆ ಮೂರು ಪ್ರಶಸ್ತಿಗಳಿಗಾಗಿ ಪ್ರತ್ತೇಕವಾದ ವಿವರಗಳನ್ನು ಇದೇ ತಾ.15ರೊಳಗಾಗಿ ಡಾ.ಬಿ.ಎಂ.ಪಾಟೀಲ, ಅಧ್ಯಕ್ಷರು, ಡಾ.ಫ.ಗು.ಹಳಕಟ್ಟಿ ರಾಷ್ಟ್ರೀಯ ಪ್ರತಿಷ್ಠಾನ, ವಿದ್ಯಾನಗರ, ಮಹಾಲಿಂಗಪುರ-587312 ತಾ.ಮುಧೋಳ,ಬಾಗಲಕೋಟೆ ಜಿಲ್ಲೆ -ಈ ವಿಳಾಸಕ್ಕೆ ಕಳುಹಿಸಲು ಕೋರಲಾಗಿದೆ. ಹೆಚ್ಚಿನಮಾಹಿತಿಗಾಗಿ ಮೊ:9448897455 ಸಂಪರ್ಕಿಸಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT