ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳಿ ತಪ್ಪಿದ ರೈಲು ಎಂಜಿನ್‌ಗಳು

ನಗರ ರೈಲು ನಿಲ್ದಾಣದಲ್ಲಿ ಘಟನೆ
Last Updated 5 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ನಗರ ರೈಲು ನಿಲ್ದಾಣದ ಆರನೇ ಪ್ಲಾಟ್‌ಫಾರಂನಲ್ಲಿ ಭಾನುವಾರ ನಸುಕಿನ ವೇಳೆ ಎರಡು ರೈಲುಗಳ ಎಂಜಿನ್‌­ಗಳು ಹಳಿ ತಪ್ಪಿದ್ದರಿಂದ ಇತರೆ ರೈಲುಗಳ ಓಡಾಟದಲ್ಲಿ ಕೆಲ ಕಾಲ ವ್ಯತ್ಯಯ ಉಂಟಾಯಿತು.

ಬೆಳಿಗ್ಗೆ 4 ಗಂಟೆ ಸುಮಾರಿಗೆ ಲೋಕೊ ಪೈಲಟ್‌ಗಳು, ಬೋಗಿಗಳನ್ನು ಬದಲಾ­ಯಿ­ಸುವ ಕಾರ್ಯದಲ್ಲಿ ನಿರತರಾಗಿ­ದ್ದರು. ಈ ವೇಳೆ ಬೋಗಿಗಳಿಗೆ ಹೊಂದಿ­ಸಲು ಎಂಜಿನ್‌ಗಳನ್ನು ಹಿಂದಕ್ಕೆ ತರು­ವಾಗ ಸರಿಯಾದ ಸಿಗ್ನಲ್‌ ಸಿಗದೆ ಈ ಅನಾ­ಹುತ ಸಂಭವಿಸಿದೆ ಎಂದು ರೈಲ್ವೆ ಪೊಲೀಸರು ಹೇಳಿದ್ದಾರೆ.

ಘಟನೆಯ ಕಾರಣದಿಂದ ಈ ಫ್ಲಾಟ್‌­ಫಾರಂ ಮೂಲಕ ಬೆಳಿಗ್ಗೆ 6 ಗಂಟೆಗೆ ಹೊರ­ಡಬೇಕಿದ್ದ ಬೆಂಗಳೂರು–ಚೆನ್ನೈ ಮಾರ್ಗದ ಶತಾಬ್ದಿ ಎಕ್ಸ್‌ಪ್ರೆಸ್‌ ಹಾಗೂ 6.30ಕ್ಕೆ ಹೊರಡಬೇಕಿದ್ದ ಬೆಂಗಳೂರು– ಚೆನ್ನೈ ಲಾಲ್‌ಬಾಗ್‌ ಎಕ್ಸ್‌ಪ್ರೆಸ್‌ ರೈಲು­ಗಳು 15 ನಿಮಿಷ ತಡವಾಗಿ ಒಂದನೇ ಫ್ಲಾಟ್‌ಫಾರಂನಿಂದ ಹೊರಟವು.

ನಗರ ರೈಲು ನಿಲ್ದಾಣದಲ್ಲೇ ಕಳೆದ ಎರಡು ತಿಂಗಳಲ್ಲಿ ಮೂರು ರೈಲುಗಳು ಹಳಿ ತಪ್ಪಿವೆ. ಅದೃಷ್ಟವಷಾತ್‌ ಯಾ­ವುದೇ ಪ್ರಾಣಾಪಾಯ ಸಂಭವಿಸಿಲ್ಲ. ನ.24ರಂದು ರಾಜಧಾನಿ ಎಕ್ಸ್‌­ಪ್ರೆಸ್‌ ರೈಲಿನ ಬೋಗಿಗಳು ಹಳಿ ತಪ್ಪಿ, ಸಮೀಪದ ಮಹಾತ್ಮಗಾಂಧಿ ರೈಲ್ವೆ ಕಾಲೋ­ನಿಯ ಕಾಂಪೌಂಡ್‌ಗೆ ಗುದ್ದಿ­ದ್ದವು. ಡಿಸೆಂಬರ್‌ ತಿಂಗಳಲ್ಲಿ ಆರನೇ ಪ್ಲಾಟ್‌ಫಾರಂಗೆ ಬರು­ತ್ತಿದ್ದ ಶತಾಬ್ದಿ ಎಕ್ಸ್‌ಪ್ರೆಸ್‌ ಹಳಿ ತಪ್ಪಿತ್ತು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT