ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳೆಯ ಬೆಳ್ಳಿ ನಾಣ್ಯ ಪತ್ತೆ

Last Updated 14 ಮೇ 2012, 18:50 IST
ಅಕ್ಷರ ಗಾತ್ರ

ದೊಡ್ಡಬಳ್ಳಾಪುರ: ತಾಲ್ಲೂಕಿನ ಸಾಸಲು ಹೋಬಳಿ ಗೌಡನಕುಂಟೆ ಗ್ರಾಮದಲ್ಲಿ ಪ್ರಾಚೀನ ಕಾಲದ ಬೆಳ್ಳಿ ನಾಣ್ಯಗಳು ಪತ್ತೆಯಾಗಿವೆ.

ಗೌಡನಕುಂಟೆ ಗ್ರಾಮದ ನರಸಿಂಹಮೂರ್ತಿ ಎಂಬುವರಿಗೆ ಸೇರಿದ ಹಳೆಯ ಮನೆಯೊಂದನ್ನು ನೆಲಸಮ ಮಾಡುತ್ತಿದ್ದಾಗ ಕೂಲಿ ಕಾರ್ಮಿಕರಾದ ರವಿ, ಚಂದ್ರಶೇಖರ, ಮತ್ತು ರಾಮಕೃಷ್ಣ ಎಂಬುವರಿಗೆ ಮಣ್ಣಿನ ಕುಡಿಕೆಯಲ್ಲಿ 108 ಬೆಳ್ಳಿ ನಾಣ್ಯಗಳು ದೊರೆತಿವೆ.

ಇದನ್ನು ಗಮನಿಸಿದ ಮನೆಯ ಮಾಲೀಕರು ತಹಸೀಲ್ದಾರ್ ಅವರಿಗೆ ವಿಷಯ ತಿಳಿಸಿದ್ದಾರೆ. ಕೂಡಲೇ ತಹಸೀಲ್ದಾರ್ ಚಂದ್ರ ಅವರು ಸರ್ಕಲ್ ಇನ್ಸ್‌ಪೆಕ್ಟರ್ ಸುಬ್ರಹ್ಮಣ್ಯ ಮತ್ತು ಹೊಸಹಳ್ಳಿ ಪೊಲೀಸ್ ಠಾಣೆ ಸಬ್‌ಇನ್‌ಸ್ಪೆಕ್ಟರ್ ಬಿ.ಸಿದ್ದರಾಜು ಸ್ಥಳಕ್ಕೆ ಆಗಮಿಸಿ ನಾಣ್ಯಗಳನ್ನು ವಶಕ್ಕೆ ಪಡೆದರು.

ಈ  ನಾಣ್ಯಗಳು ಈಸ್ಟ್ ಇಂಡಿಯಾ ಕಂಪೆನಿ ಕಾಲದ ಬೆಳ್ಳಿ ನಾಣ್ಯಗಳೆಂದು ಅಂದಾಜಿಸಲಾಗಿದೆ. ಇವುಗಳ ಮೇಲೆ ಮುದ್ರಿತ 1 ರೂಪಾಯಿ ಮುಖ ಬೆಲೆಯಿದ್ದು ವಿಕ್ಟೋರಿಯಾ ರಾಣಿ ಮತ್ತು ಎಡ್ವರ್ಡ್ 7ನೇ ಚಕ್ರವರ್ತಿಯ ಚಿತ್ರಗಳಿವೆ.

ಇವು ಸರಿಸುಮಾರು 1850-1900ನೇ ಇಸವಿಗೆ ಸೇರಿರಬಹುದು ಎಂದು ಅಂದಾಜಿಸಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT