ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಳ್ಳಿಯಲ್ಲೂ ಕಸಾಪ ಚಟುವಟಿಕೆ ಅಗತ್ಯ

Last Updated 16 ಜುಲೈ 2012, 5:25 IST
ಅಕ್ಷರ ಗಾತ್ರ

ಕುಶಾಲನಗರ: ಕನ್ನಡ ಸಾರಸತ್ವ ಸಂಸ್ಥೆ ಯಾದ ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳನ್ನು ಪ್ರತಿ ಹಳ್ಳಿ ಗಳಿಗೂ ವಿಸ್ತರಿಸಲು ಕಸಾಪ ಸದಸ್ಯರು ಶ್ರಮಿಸಬೇಕು ಎಂದು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಟಿ.ಪಿ. ರಮೇಶ್ ಶನಿವಾರ ಹೇಳಿದರು.

ಶನಿವಾರ ಜ್ಞಾನಭಾರತಿ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಹೋಬಳಿ ಘಟಕದ ನೂತನ ಪದಾಧಿಕಾರಿಗಳ ಅಧಿಕಾರ ಸ್ವೀಕಾರ ಸಮಾರಂಭದಲ್ಲಿ ಅವರು ಮಾತನಾಡಿದರು.

ಸಾಹಿತ್ಯ ಚಟುವಟಿಕೆಗಳನ್ನು ವಿಕೇಂದ್ರೀಕರಿಸುವ ದಿಸೆಯಲ್ಲಿ ಕಸಾಪ ಹೋಬಳಿ ಘಟಕಗಳನ್ನು ಆರಂಭಿಸ ಲಾಗಿದೆ. ಜಿಲ್ಲೆಯಲ್ಲಿ ಕುಶಾಲನಗರ ಘಟಕ ಸೇರಿದಂತೆ ನಾಲ್ಕು ಹೋಬಳಿ ಘಟಕಗಳು ಅಸ್ತಿತ್ವದಲ್ಲಿವೆ.
 
ಜಿಲ್ಲೆಯಲ್ಲಿ ಪ್ರಸ್ತುತ 1400 ಮಂದಿ ಕಸಾಪ ಸದಸ್ಯರಿದ್ದಾರೆ.  ಸದಸ್ಯರ ನೋಂದಣಿ ಮಾಡಿಸಲು ಕಸಾಪ ಸದಸ್ಯತ್ವ ಅಭಿಯಾನ ಹಮ್ಮಿಕೊಂಡಿದೆ. ಸಾಹಿತ್ಯಾ ಸಕ್ತರು ಪರಿಷತ್ತಿನ ಸದಸ್ಯರನ್ನು ಭೇಟಿ ಮಾಡಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದು ಮನವಿ ಮಾಡಿದರು.

ಜಿಲ್ಲೆಯಲ್ಲಿ ಯುವ ಬರಹಗಾರರು, ಮಹಿಳೆ ಮತ್ತು ಮಕ್ಕಳ ಬರಹಗಾರ ಕೂಟ ರಚಿಸಲಾಗುತ್ತಿದೆ. ಜಿಲ್ಲೆಯ ಶಿಕ್ಷಕರ ಸಹಭಾಗಿತ್ವದಲ್ಲಿ ಜಿಲ್ಲಾ ಮತ್ತು ತಾಲ್ಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಸಂಘಟಿಸಲಾ ಗುವುದು ಎಂದರು.

ತಾಲ್ಲೂಕು ಕಸಾಪ ಅಧ್ಯಕ್ಷ ಭಾರದ್ವಾಜ ಕೆ. ಆನಂದತೀರ್ಥ ಮಾತ ನಾಡಿ, ಆಂಗ್ಲಭಾಷೆ ವ್ಯಾಮೋಹದ ನಡುವೆ ಕನ್ನಡ ಭಾಷೆಗೆ ಅಪಚಾರ ಎಸಗುವುದು ಸರಿಯಲ್ಲ ಎಂದರು.

ಕಸಾಪ ಹೋಬಳಿ ಘಟಕದ ನಿಕಟ ಪೂರ್ವ ಅಧ್ಯಕ್ಷ ಎನ್.ಕೆ. ಮೋಹನ್‌ಕುಮಾರ್ ಅವರು ಘಟಕದ ನೂತನ ಅಧ್ಯಕ್ಷ ಎಂ.ಇ. ಮೊಹಿದ್ದೀನ್ ಅವರಿಗೆ ಅಧಿಕಾರ ಹಸ್ತಾಂತರಿಸಿದರು.

ಜಿಲ್ಲಾ ಕಸಾಪ ಗೌರವ ಕಾರ್ಯ ದರ್ಶಿ ವಾಸು ರೈ, ಕಸಾಪ ಗೌರವ ಕಾರ್ಯದರ್ಶಿಗಳಾದ ಎಂ.ಡಿ. ರಂಗ ಸ್ವಾಮಿ, ಎನ್.ಎ. ಸುಶೀಲಾ, ಖಜಾಂಚಿ ಕೆ.ಎಸ್. ಮಹೇಶ್ ಇತರರು ಇದ್ದರು. ಶಿಕ್ಷಕ ಉ.ರಾ. ನಾಗೇಶ್ ಸ್ವಾಗತಿಸಿ, ಶಿಕ್ಷಕಿ ಸವರಿನ್ ಡಿಸೋಜ ನಿರೂಪಿಸಿ, ರಂಗಸ್ವಾಮಿ ವಂದಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT