ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹವಾಮಾನ ವರದಿ

Last Updated 9 ಜೂನ್ 2011, 19:30 IST
ಅಕ್ಷರ ಗಾತ್ರ

ಹಲವೆಡೆ ಮಳೆ
ಬೆಂಗಳೂರು: ಗುರುವಾರ ಬೆಳಿಗ್ಗೆ 8.30 ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳಲ್ಲಿ ರಾಜ್ಯದ ಕರಾವಳಿ ಸೇರಿದಂತೆ ಉತ್ತರ ಒಳನಾಡು ಮತ್ತು ದಕ್ಷಿಣ ಒಳನಾಡಿನ ಹಲವೆಡೆ ಮಳೆಯಾಗಿದೆ.

ಸಿದ್ದಾಪುರ 9, ಕೋಟ, ಅಮ್ಮತ್ತಿಯಲ್ಲಿ 7 ಸೆಂ.ಮೀ ಮಳೆಯಾಗಿದೆ. ಬಂಟ್ವಾಳ, ಗೋಕರ್ಣ, ಹೊಸನಗರ 5, ಬೆಳ್ತಂಗಡಿ, ಉಡುಪಿ, ಕೊಲ್ಲೂರು, ಕುಂದಾಪುರ, ಕುಮಟಾ, ಅಂಕೋಲ, ಆಗುಂಬೆ 4, ಮೂಡಬಿದ್ರೆ, ಮುಲ್ಕಿ, ಸುಬ್ರಹ್ಮಣ್ಯ, ಸೂಳ್ಯ, ಭಟ್ಕಳ, ಹೊನ್ನಾವರ, ಶಿರಾಲಿ, ಭಾಗಮಂಡಲ, ಕೊಟ್ಟಿಗೆಹಾರ 3,
 
ಮಂಗಳೂರು, ಧರ್ಮಸ್ಥಳ, ಉಪ್ಪಿನಂಗಡಿ, ಪಣಂಬೂರು, ಮಂಗಳೂರು ವಿಮಾನ ನಿಲ್ದಾಣ, ಕಾರ್ಕಳ, ಶಿರಸಿ, ಕಾರವಾರ, ಖಾನಾಪುರ, ಹುಮನಾಬಾದ್, ವಿರಾಜಪೇಟೆ, ಕಳಸ, ಲಕ್ಕವಳ್ಳಿ 2,
 
ಪುತ್ತೂರು, ಬನವಾಸಿ, ನಾಪೋಕ್ಲು, ಮಾದಾಪುರ, ತಾಳಗುಪ್ಪ, ಲಿಂಗನಮಕ್ಕಿ 1 ಸೆಂ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ವರದಿ ಮಾಡಿದೆ.

ಮುನ್ಸೂಚನೆ: ಮುಂದಿನ 48 ಗಂಟೆಗಳ ವರೆಗೆ ರಾಜ್ಯದ ಕರಾವಳಿಯಲ್ಲಿ ಅಧಿಕ ಮಳೆಯಾಗಲಿದ್ದು, ಉತ್ತರ ಮತ್ತು ದಕ್ಷಿಣ ಒಳನಾಡಿನಲ್ಲಿ ಸಾಧಾರಣ ಮಳೆಯಾಗುವ ಸಾಧ್ಯತೆಗಳಿವೆ ಮುನ್ಸೂಚನೆ ನೀಡಿದೆ. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT