ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಸ್ತಲಾಘವ ಆಕಸ್ಮಿಕ

Last Updated 11 ಡಿಸೆಂಬರ್ 2013, 19:30 IST
ಅಕ್ಷರ ಗಾತ್ರ

ವಾಷಿಂಗ್ಟನ್‌(ಪಿಟಿಐ): ಜೋಹಾ­­­ನ್ಸ್‌ಬರ್ಗ್‌ನಲ್ಲಿ ಮಂಗಳವಾರ ಅಮೆರಿಕ ಅಧ್ಯಕ್ಷ ಬರಾಕ್‌ ಒಬಾಮ ಮತ್ತು ಕ್ಯೂಬಾ ನಾಯಕ ರೌಲ್‌ ಕ್ಯಾಸ್ಟ್ರೊ   ಹಸ್ತಲಾಘವ ಒಂದು ಆಕಸ್ಮಿಕ ಘಟನೆಯೇ ಹೊರತು ಪೂರ್ವ­ನಿಯೋಜಿತವಾದುದಲ್ಲ ಎಂದು ಶ್ವೇತಭವನ ಸ್ಪಷ್ಟಪಡಿಸಿದೆ.

ಉಭಯ ನಾಯಕರ ಹಸ್ತ­ಲಾಘವ ಮತ್ತು ಉಭಯ ಕುಶ­ಲೋಪರಿಗೆ ವಿಶೇಷ ಅರ್ಥ ಕಲ್ಪಿ­ಸುವ ಮತ್ತು ಹೆಚ್ಚಿನ ಮಹತ್ವ ನೀಡುವ ಅಗತ್ಯವಿಲ್ಲ ಎಂದು  ರಾಷ್ಟ್ರೀಯ ಭದ್ರತಾ ಉಪ ಸಲಹೆಗಾರ ಬೆನ್‌ ರೋಡ್ಸ್‌ ಹೇಳಿದ್ದಾರೆ.

ಕ್ಯೂಬಾದ ನಾಯಕ ಕ್ಯಾಸ್ಟ್ರೊ ಅವರೊಂದಿಗೆ ಶುಭಾಶಯ ವಿನಿಮಯ ಮಾಡಿಕೊಳ್ಳುತ್ತಿರುವ ವಿಷಯ ಒಬಾಮ  ಅರಿವಿಗಿತ್ತು. ಭಾಷಣ ಮಾಡಲು ವೇದಿಕೆಯತ್ತ ತೆರಳುವಾಗ ಸಹಜವಾಗಿ ಒಬಾಮ ಉಳಿದ ನಾಯಕರಿಗೆ ಹಸ್ತಲಾಘವ ಮಾಡಿದಂತೆಯೇ  ಕ್ಯಾಸ್ಟ್ರೊ ಅವರ ಜತೆಯೂ ಹಸ್ತಲಾಘವ ಮಾಡಿದರು. ಆದರೆ, ಕ್ಯೂಬಾದ ಬಗೆಗಿನ ಒಬಾಮ ಅವರ ನಿಲುವಿನಲ್ಲಿ ಯಾವುದೇ ಬದಲಾವಣೆಯಾ­ಗುವುದಿಲ್ಲ ಎಂದು ಅವರು ಇದೇ ವೇಳೆ ಸ್ಪಷ್ಟಪಡಿಸಿದರು. ನೆಲ್ಸನ್‌ ಮಂಡೇಲಾ ಅವರಿಗೆ ಗೌರವ ಸಲ್ಲಿಸುವ ವಿಷಯದ ಹೊರತಾಗಿ ಉಳಿದ ವಿಷಯಗಳು ಇಲ್ಲಿ ಗೌಣವಾಗುತ್ತವೆ ಎಂದು ರೋಡ್ಸ್‌ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT