ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಂಕ್ ಕಾಂಗ್: ಹಡಗು ಡಿಕ್ಕಿ 36 ಸಾವು

Last Updated 2 ಅಕ್ಟೋಬರ್ 2012, 6:05 IST
ಅಕ್ಷರ ಗಾತ್ರ

ಹಾಂಕ್ ಕಾಂಗ್ (ಎಎಫ್ ಪಿ): ಇಲ್ಲಿನ ಲಾಮಾ ದ್ವೀಪದ ಬಳಿ  ಪ್ರವಾಸಿ ದೋಣಿ ಹಾಗೂ ಹಡುಗಿನ ನಡುವೆ ಸೋಮವಾರ ತಡರಾತ್ರಿ  ಡಿಕ್ಕಿ ಸಂಭವಿಸಿದ ಪರಿಣಾಮ 36 ಪ್ರಯಾಣಿಕರು ಮೃತಪಟ್ಟಿರುವುದು ವರದಿಯಾಗಿದೆ. ರಕ್ಷಣಾ ಪಡೆಗಳು ಬದುಕುಳಿದ ಪ್ರಯಾಣಿಕರಿಗಾಗಿ ಹುಡುಕಾಟ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ಕೈಗೊಂಡಿವೆ ಎಂದು ಅಧಿಕಾರಿಗಳು ಮಂಗಳವಾರ ತಿಳಿಸಿದ್ದಾರೆ.

ಹಾಂಗ್ ಕಾಂಗ್ ಎಲೆಕ್ಟ್ರಿಕ್ ಕಂಪೆನಿಗೆ ಸೇರಿದ ಹಡಗಿನ ಸಿಬ್ಬಂದಿ ಸೇರಿದಂತೆ ಸುಮಾರು 120 ಕ್ಕೂ ಅಧಿಕ ಪ್ರಯಾಣಿಕರು ಸೋಮವಾರ ಸಂಜೆ ವಿಕ್ಟೋರಿಯಾ ಬಂದರು ಪ್ರದೇಶದಲ್ಲಿ ನಡೆಯಲಿದ್ದ ರಾಷ್ಟ್ರೀಯ ಬಿರುಸು ಬಾಣಗಳ ಪ್ರದರ್ಶನವನ್ನು ವೀಕ್ಷಿಸಲು ತೆರಳಿದ ಸಂದರ್ಭದಲ್ಲಿ ಇಲ್ಲಿನ ಲಾಮಾ ದ್ವೀಪದ ಬಳಿ ಪ್ರವಾಸಿ ದೋಣಿ ಹಾಗೂ ಹಡಗಿನ ನಡುವೆ ಡಿಕ್ಕಿ ಸಂಭವಿಸಿತು. ಈ ಘಟನೆಯಿಂದ 36 ಪ್ರಯಾಣಿಕರು ಮೃತಪಟ್ಟಿದ್ದಾರೆ. ಉಳಿದ ಪ್ರಯಾಣಿಕರಿಗಾಗಿ ರಕ್ಷಣಾ ತಂಡಗಳು ಹುಡುಕಾಟ ನಡೆಸುತ್ತಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಈ ದುರ್ಘಟನೆಯಲ್ಲಿ ಸುಮಾರು 100ಕ್ಕೂ ಅಧಿಕ ಪ್ರಯಾಣಿಕರಿಗೆ ತೀವ್ರ ಗಾಯಗಳಾಗಿದ್ದು ಅವರನ್ನು ಸ್ಥಳೀಯ ಐದು ಆಸ್ಪತ್ರೆಗಳಿಗೆ ಸಾಗಿಸಲಾಯಿತು. ಘಟನೆ ನಡೆದ ಸ್ಥಳದಲ್ಲಿಯೇ 28 ಪ್ರಯಾಣಿಕರು ಮೃತಪಟ್ಟರೆ, ತೀವ್ರವಾಗಿ ಗಾಯಗೊಂಡವರನ್ನು ಆಸ್ಪತ್ರೆಗೆ ಸಾಗಿಸುವ ಮಾರ್ಗದಲ್ಲಿ 8 ಜನರು ಮೃತಪಟ್ಟರು ಎಂದು ಸರ್ಕಾರದ ಮೂಲಗಳು ತಿಳಿಸಿವೆ.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT