ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಐಟಿಸಿ ಸ್ಪೋರ್ಟ್ಸ್ ಕ್ಲಬ್‌ ತಂಡಕ್ಕೆ ಗೆಲುವು

Last Updated 17 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಪ್ರಭಾಕರನ್‌ ತಂದಿತ್ತ ಎರಡು ಗೋಲುಗಳ ನೆರವಿನಿಂದ ಐಟಿಸಿ ಸ್ಪೋರ್ಟ್ಸ್‌ ಕ್ಲಬ್‌ ತಂಡದವರು ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನಲ್ಲಿ ಗೆಲುವು ಪಡೆದರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ಮಂಗಳವಾರ ನಡೆದ ಪಂದ್ಯದಲ್ಲಿ ಐಟಿಸಿ 4–2 ಗೋಲುಗಳಿಂದ ಚಿತ್ರದುರ್ಗ ಹಾಕಿ ಕ್ಲಬ್‌ ತಂಡವನ್ನು ಮಣಿಸಿತು.

11ನೇ ನಿಮಿಷದಲ್ಲಿ ತಮ್ಮ ತಂಡದ ಗೋಲಿನ ಖಾತೆ ತೆರೆದ ಪ್ರಭಾಕರನ್‌ 44ನೇ ನಿಮಿಷದಲ್ಲಿ ಮತ್ತೊಮ್ಮೆ ಚೆಂಡನ್ನು ಗುರಿ ಸೇರಿಸಿದರು. ಇತರ ಗೋಲುಗಳನ್ನು ಶ್ರೇಯಸ್‌ (27ನೇ ನಿಮಿಷ) ಹಾಗೂ ಸುನಿಲ್‌ (31) ತಂದಿತ್ತರು. ಚಿತ್ರದುರ್ಗ ತಂಡದ ಪರ ಮಹಾಂತೇಶ್‌ (9) ಹಾಗೂ ತಿಪ್ಪೇಸ್ವಾಮಿ (19) ಗೋಲು ಗಳಿಸಿದರು.

ದಿನದ ಮತ್ತೊಂದು ಪಂದ್ಯದಲ್ಲಿ ಡಿ.ಎ. ಅಸೋಸಿಯೇಷನ್‌ 7–0 ಗೋಲುಗಳಿಂದ ರೈಸಿಂಗ್‌ ಸ್ಟಾರ್‌ ಹಾಕಿ ಕ್ಲಬ್‌ ವಿರುದ್ಧ ಸುಲಭ ಗೆಲುವು ಸಾಧಿಸಿತು.
ವಿಜಯಿ ತಂಡದ ಪರ ಶೇಷವಲ್ಲಿ (3 ಮತ್ತು 13ನೇ ನಿಮಿಷ) ಹಾಗೂ ಪ್ರಸಾದ್‌ (20, 34) ತಲಾ ಎರಡು ಗೋಲುಗಳನ್ನು ಗಳಿಸಿದರು. ಇತರ ಗೋಲುಗಳನ್ನು ವೆಂಕಟರಾಮ್‌ ರೆಡ್ಡಿ (38), ರಬ್‌ಜಾನ್‌ (43) ಮತ್ತು ಪವನ್‌ (46) ತಂದಿತ್ತರು.

ಬುಧವಾರ ನಡೆಯುವ ಪಂದ್ಯಗಳಲ್ಲಿ ಐಟಿಸಿ– ಅಯ್ಯಪ್ಪ ಹಾಕಿ ಅಕಾಡೆಮಿ ‘ಬಿ’ ಮತ್ತು ಧ್ಯಾನ್‌ಚಂದ್‌ ಹಾಕಿ ಕ್ಲಬ್‌– ಚಿತ್ರದುರ್ಗ ಹಾಕಿ ಕ್ಲಬ್‌ ತಂಡಗಳು ಪರಸ್ಪರ ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT