ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಕರ್ನಾಟಕ ತಂಡಕ್ಕೆ ಜಯ

Last Updated 5 ಅಕ್ಟೋಬರ್ 2012, 19:30 IST
ಅಕ್ಷರ ಗಾತ್ರ

ಸೋನೆಪತ್ (ಪಿಟಿಐ): ಕರ್ನಾಟಕ ತಂಡದವರು ಇಲ್ಲಿ ನಡೆಯುತ್ತಿರುವ ಹಾಕಿ ಇಂಡಿಯಾ ಆಶ್ರಯದ ಎರಡನೇ ರಾಷ್ಟ್ರೀಯ ಜೂನಿಯರ್ ಮಹಿಳೆಯರ ಹಾಕಿ ಚಾಂಪಿಯನ್‌ಷಿಪ್‌ನಲ್ಲಿ ಸತತ ಎರಡನೇ ಗೆಲುವು ಸಾಧಿಸಿದ್ದಾರೆ.

ಶುಕ್ರವಾರ ನಡೆದ `ಡಿ~ ಗುಂಪಿನ ಪಂದ್ಯದಲ್ಲಿ ಕರ್ನಾಟಕ 17-0 ಗೋಲುಗಳಿಂದ ಪುದುಚೇರಿ ತಂಡವನ್ನು ಮಣಿಸಿತು. ಎ.ಕೆ.ರಂಜಿತಾ, ಬಿ.ಎಂ.ಕೋಮಲಾ (ತಲಾ 3 ಗೋಲು), ಸುಮನ್, ಎಂ.ಜೆ.ನಿಶ್ಚಿತಾ, ಬಿ.ಪಿ.ನಂದಿನಿ (ತಲಾ 2 ಗೋಲು), ಎಚ್.ಪಿ.ಸಂಧ್ಯಾ, ಸಿ.ಎಂ.ಭಾಗ್ಯಶ್ರೀ ಹಾಗೂ ಎಸ್.ಪಿ.ಭವ್ಯಾ ತಲಾ ಒಂದು ಗೋಲು ಗಳಿಸಿದರು.

ಕರ್ನಾಟಕ ತಂಡದವರು ಕ್ವಾರ್ಟರ್ ಫೈನಲ್‌ನಲ್ಲಿ ಸ್ಥಾನ ಪಡೆಯಲು ಶನಿವಾರ ಒಡಿಶಾ ಎದುರು ಆಡಲಿದ್ದಾರೆ. ಒಡಿಶಾ ತಂಡದವರು ಮತ್ತೊಂದು ಪಂದ್ಯದಲ್ಲಿ 31-0 ಗೋಲುಗಳಿಂದ ಗುಜರಾತ್ ಎದುರು ಗೆದ್ದರು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT