ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಜೂಡ್‌ ಫೆಲಿಕ್ಸ್‌ ಕ್ಲಬ್‌ಗೆ ಜಯ

Last Updated 20 ಸೆಪ್ಟೆಂಬರ್ 2013, 19:59 IST
ಅಕ್ಷರ ಗಾತ್ರ

ಬೆಂಗಳೂರು: ಜೂಡ್‌ ಫೆಲಿಕ್ಸ್‌ ಹಾಕಿ ಅಕಾಡೆಮಿ ತಂಡ ಕೆಎಸ್‌ಎಚ್‌ಎ ಆಶ್ರಯದ ರಾಜ್ಯ ‘ಸಿ’ ಡಿವಿಷನ್‌ ಹಾಕಿ ಲೀಗ್‌ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ 16-0 ಗೋಲುಗಳಿಂದ ಬಾಷ್‌ ತಂಡವನ್ನು ಮಣಿಸಿತು.

ಶುಕ್ರವಾರ ನಡೆದ ಪಂದ್ಯದಲ್ಲಿ ವಿಜಯಿ ತಂಡದ ಸುರೇಶ್‌ (3, 9, 22, 33 ಮತ್ತು 36) ಐದು ಗೋಲುಗಳನ್ನು ಗಳಿಸಿ ಗಮನ ಸೆಳೆದರು.

ಡಿ.ಎ. ಅಸೋಸಿಯೇಷನ್‌ ತಂಡ 5-0 ಗೋಲುಗಳಿಂದ ನ್ಯೂ ಅಶೋಕ ಕ್ಲಬ್‌ ವಿರುದ್ಧ ಜಯ ಪಡೆಯಿತು. ಬಾಬ್‌ ಜೊರ್‌ (13, 26, 36) ಮೂರು ಗೋಲುಗಳನ್ನು ಗಳಿಸಿದರು.

ಇನ್ನೊಂದು ಪಂದ್ಯದಲ್ಲಿ ಅಯ್ಯಪ್ಪ ಹಾಕಿ ಅಕಾಡೆಮಿ ‘ಬಿ’ ತಂಡ 3-0 ರಲ್ಲಿ ಚಿತ್ರದುರ್ಗ ಹಾಕಿ ಕ್ಲಬ್‌ ತಂಡವನ್ನು ಸೋಲಿಸಿತು. ಎಸ್‌. ಹರ್ಷ (30, 49) ಹಾಗೂ ಸ್ಟಾಲಿನ್‌ ಆಭಿಲಾಷ್‌ (44) ವಿಜಯಿ ತಂಡದ ಪರ ಚೆಂಡನ್ನು ಗುರಿ ಸೇರಿಸಿದರು.

ಶನಿವಾರ  ಐಟಿಸಿ- ಧ್ಯಾನ್‌ಚಂದ್‌ ಹಾಕಿ ಕ್ಲಬ್‌ ಹಾಗೂ ಸಿಎಸ್‌ಎಂಇ- ಧ್ಯಾನ್‌ಚಂದ್‌, ತುಮಕೂರು ತಂಡಗಳು ಪೈಪೋಟಿ ನಡೆಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT