ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಡ್ರಾ ಪಂದ್ಯದಲ್ಲಿ ಎಂಇಜಿ

Last Updated 14 ಜನವರಿ 2011, 9:40 IST
ಅಕ್ಷರ ಗಾತ್ರ

ಬೆಂಗಳೂರು: ಚುರುಕಿನ ಆಟದಿಂದ ಪ್ರಬಲ ಪೈಪೋಟಿ ನಡೆಸಿದ ಮದ್ರಾಸ್ ಎಂಜಿನಿಯರ್ಸ್ ಗ್ರೂಪ್ (ಎಂಇಜಿ) ಹಾಗೂ ಫೋರ್ಟಿಸ್ ತಂಡದವರು ಕರ್ನಾಟಕ ರಾಜ್ಯ ಹಾಕಿ ಸಂಸ್ಥೆ ಆಶ್ರಯದ ಓಜೋನ್ ಗ್ರೂಪ್ ರಾಜ್ಯ ಸೂಪರ್ ಡಿವಿಷನ್ ಲೀಗ್‌ನ ಗುರುವಾರದ ಪಂದ್ಯವನ್ನು 1-1 ಗೋಲಿನಿಂದ ಡ್ರಾ ಮಾಡಿಕೊಂಡರು.

ಅಕ್ಕಿತಿಮ್ಮನಹಳ್ಳಿ ರಾಜ್ಯ ಹಾಕಿ ಸಂಸ್ಥೆ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಫೋರ್ಟಿಸ್ ತಂಡವು ಐದನೇ ನಿಮಿಷದಲ್ಲಿಯೇ ಮುನ್ನಡೆ ಸಾಧಿಸುವಲ್ಲಿ ಯಶಸ್ವಿ ಆಯಿತು. ನವದೀಪ್ ಸಿಂಗ್ ಅವರು ಗಳಿಸಿದ ಈ ಗೋಲಿನಿಂದಾಗಿ ಉತ್ಸಾಹಿತರಾದರೂ, ಮತ್ತೆ ಎದುರಾಳಿ ರಕ್ಷಣಾ ಕೋಟೆಯನ್ನು ಕೆಡವಲು ಫೋರ್ಟಿಸ್‌ಗೆ ಅವಕಾಶ ಸಿಗಲಿಲ್ಲ.
ದಾಳಿಯನ್ನು ಚುರುಕುಗೊಳಿಸಿದರೂ ಎಂಇಜಿ ತಂಡದವರು ತಿರುಗೇಟು ನೀಡುವುದು ಸುಲಭವಾಗಲಿಲ್ಲ. ಚೆಂಡನ್ನು ಎದುರಾಳಿ ಆವರಣಕ್ಕೆ ಅನೇಕ ಬಾರಿ ಸಾಗಿಸಿದರೂ ಚೆಂಡನ್ನು ಗುರಿ ಮುಟ್ಟಿಸುವಲ್ಲಿ ಯಶಸ್ವಿಯಾಗಲಿಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT