ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ ಫೈನಲ್‌ಗೆ ಜಾರ್ಖಂಡ್

Last Updated 24 ಫೆಬ್ರುವರಿ 2011, 17:55 IST
ಅಕ್ಷರ ಗಾತ್ರ

ರಾಂಚಿ: ಆತಿಥೇಯ ಜಾಖರ್ಂಡ್‌ನ ಪುರುಷ ತಂಡದವರು ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಕ್ರೀಡಾಕೂಟದ ಹಾಕಿಯಲ್ಲಿ ಫೈನಲ್ ಪ್ರವೇಶಿಸಿದರು.ಬುಧವಾರ ವಿವಾದಕ್ಕೆ ಒಳಗಾಗಿದ್ದ ಪಂದ್ಯವನ್ನು ಗುರುವಾರಕ್ಕೆ ಮುಂದಾಡಲಾಗಿತ್ತು. ಈ ಪಂದ್ಯದಲ್ಲಿ ಜಾರ್ಖಂಡ್ 2-1ರಲ್ಲಿ ಮಹಾರಾಷ್ಟ್ರವನ್ನು ಮಣಿಸಿ ಫೈನಲ್‌ಗೆ ಪ್ರವೇಶ ಪಡೆಯಿತು.

ಟೆನಿಸ್‌ನಲ್ಲಿ ಕರ್ನಾಟಕಕ್ಕೆ ನಿರಾಸೆ: ಟೆನಿಸ್ ತಂಡ ವಿಭಾಗದಲ್ಲಿ ಕರ್ನಾಟಕ ಮಹಿಳಾ ತಂಡ ಸೆಮಿಫೈನಲ್ ಪಂದ್ಯದಲ್ಲಿ ಸೋಲು ಅನುಭವಿಸಿತು. ದೆಹಲಿಯ ಪ್ರೇರಣಾ ಬಾಂಬ್ರಿ 2-0ರಲ್ಲಿ ಕರ್ನಾಟಕದ ಯು.ಎಂ. ಶಲಾಕಾ ವಿರುದ್ಧವೂ, ರತ್ನಿಕಾ ಬಾತ್ರಾ 6-1, 6-0ರಲ್ಲಿ ಪ್ರೇರಣಾ ಪ್ರತಾಪ್ ಮೇಲೂ ಜಯ ಸಾಧಿಸಿ ಫೈನಲ್ ಪ್ರವೇಶಿಸಿದರು.

‘ಚಿನ್ನ’ದ ಪ್ರವೀಣ್ ಕುಮಾರ್: ಜಾರ್ಖಂಡ್‌ನ ಪ್ರವೀಣ್ ಕುಮಾರ್ ರಾಷ್ಟ್ರೀಯ ಕ್ರೀಡಾಕೂಟದ ಪುರುಷರ ಸೀನಿಯರ್ ಬಾಕ್ಸಿಂಗ್‌ನ 91 ಕೆಜಿ ವಿಭಾಗದಲ್ಲಿ ಚಿನ್ನದ ಪದಕ ಪಡೆದರು. ಅವರು ಫೈನಲ್‌ನಲ್ಲಿ ಮನ್‌ಪ್ರೀತ್ ಸಿಂಗ್ ಅವರನ್ನು ಮಣಿಸಿದರು. 81 ಕೆಜಿ ವಿಭಾಗದಲ್ಲಿ ದೆಹಲಿಯ ಸುಮಿತ್ ಸಾಂಗ್ವಾನ್, 75 ಕೆಜಿ ವಿಭಾಗದಲ್ಲಿ ಹರಿಯಾಣದ ದಿಲ್ಬಾಗ್ ಸಿಂಗ್ ಚಿನ್ನದ ಪದಕ ಗೆದ್ದರೆ, ಸರ್ವಿಸಸ್‌ನ ಜೈಸಿಂಗ್ ದಯಾನಂದ್ ಪಾಟೀಲ್ ಕಂಚಿಗೆ ತೃಪ್ತಿಪಟ್ಟರು.

 ಮಹಿಳೆಯರ 75 ಕೆಜಿ ವಿಭಾಗದಲ್ಲಿ ಹರಿಯಾಣದ ಪೂಜಾ, 60 ಕೆಜಿ ವಿಭಾಗದಲ್ಲಿ ಉತ್ತರ ಪ್ರದೇಶದ ಮೀನಾ ರಾಣಿ, 54 ಕೆಜಿ ವಿಭಾಗದಲ್ಲಿ ಜಾರ್ಖಂಡ್‌ನ ಸುಷ್ಮಾ ಯಾದವ್ ಕುಮಾರಿ ಹಾಗೂ 51 ಕೆಜಿ ವಿಭಾಗದಲ್ಲಿ ಹರಿಯಾಣದ ಪಿಂಕಿ ಜಾಗ್ರಾ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

24 ವರ್ಷಗಳ ಸುಧೀರ್ಘ ಕಾಲದ ಬಿಡುವಿನ ಬಳಿಕ ಇದೇ ಮೊದಲ ಬಾರಿಗೆ 35ನೇ ರಾಷ್ಟ್ರೀಯ ಕ್ರೀಡಾಕೂಟದ ಆತಿಥ್ಯ ವಹಿಸಿಕೊಳ್ಳುವ ಅವಕಾಶ ಕೇರಳ ರಾಜ್ಯಕ್ಕೆ ಒದಗಿ ಬಂದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT