ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಬಿಎಸ್‌ಎನ್‌ಎಲ್‌ಗೆ ಜಯ

Last Updated 12 ಜನವರಿ 2014, 19:30 IST
ಅಕ್ಷರ ಗಾತ್ರ

ಬೆಂಗಳೂರು: ಪಂದ್ಯದ ಅಂತಿಮ ಕ್ಷಣದಲ್ಲಿ ವಿನೋದ್ ಬೆನೆಡಿಕ್ಟ್‌ ತಂದಿತ್ತ ಗೋಲಿನ ನೆರವಿನಿಂದಾಗಿ ಬಿಎಸ್‌ಎನ್‌ ಎಲ್‌ ತಂಡ ಕೆಎಸ್‌ಎಚ್‌ಎ ರಾಜ್ಯ ‘ಎ’ ಡಿವಿಷನ್‌ ಹಾಕಿಲೀಗ್ ಚಾಂಪಿಯನ್‌ ಷಿಪ್‌ನಲ್ಲಿ  ಗೆಲುವು ದಾಖಲಿಸಿತು.

ಕೆಎಸ್‌ಎಚ್‌ಎ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಪಂದ್ಯದಲ್ಲಿ ಬಿಎಸ್‌ಎನ್‌ಎಲ್ 3–2 ಗೋಲು ಗಳಿಂದ ಸಿನರ್ಜಿ ಎಚ್‌ಸಿ ತಂಡವನ್ನು ಮಣಿಸಿತು.
ವಿಜಯೀ ತಂಡದ ಪರ ಕಾರ್ಯಪ್ಪ (19 ನೇ ನಿಮಿಷ), ಜಾರ್ಜ್‌ ಡೊಮಿನಿಕ್ (57) ಮತ್ತು ವಿನೋದ್ ಬೆನೆಡಿಕ್ಟ್‌ (59) ಗೋಲು ಗಳಿಸಿದರು. ಸಿನರ್ಜಿ ಪರ ಧನುಶ್ (17) ಮತ್ತು ಆಂಜನೇಯ (20) ತಲಾ ಒಂದು ಗೋಲು ಗಳಿಸಿದರೂ ತಂಡ ಸೋಲಿನಿಂದ ಪಾರಾಗಲಿಲ್ಲ.

ದಿನದ ಇನ್ನೊಂದು ಪಂದ್ಯದಲ್ಲಿ ಕೂರ್ಗ್‌ ಹಾಕಿ ಸಂಸ್ಥೆ ತಂಡ 6–1 ಗೋಲುಗಳಿಂದ ಫ್ಲೈಯಿಂಗ್‌ ಎಚ್‌ಸಿ ವಿರುದ್ಧ ಭರ್ಜರಿ ಜಯ ಸಂಪಾದಿಸಿತು.
ಕೂರ್ಗ್‌ ತಂಡದ ಪರ ಕಲ್ಲಪ್ಪ (20, 49ನೇ ನಿಮಿಷ), ಸುಬ್ಬಯ್ಯ (8), ಚಿರಾಗ್ (52), ಐಯ್ಯಣ್ಣ (56) ಹಾಗೂ ಸೂರಜ್ (57) ಗೋಲು ಗಳಿಸಿ ಮಿಂಚಿದರು. ಫ್ಲೈಯಿಂಗ್‌ ತಂಡದ ಏಕೈಕ ಗೋಲನ್ನು ಧರ್ಮ  ಅವರು ಪಂದ್ಯದ 15ನೇ ನಿಮಿಷದಲ್ಲಿ ತಂದಿತ್ತರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT