ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತ ಶುಭಾರಂಭ

Last Updated 8 ನವೆಂಬರ್ 2011, 19:30 IST
ಅಕ್ಷರ ಗಾತ್ರ

ನವದೆಹಲಿ (ಐಎಎನ್‌ಎಸ್): ಆರಂಭದ ಪಂದ್ಯದಲ್ಲಿಯೇ ಭರ್ಜರಿ ಪ್ರದರ್ಶನ ನೀಡಿದ ಭಾರತ ಮಹಿಳಾ ಹಾಕಿ ತಂಡದವರು (21 ವರ್ಷದೊಳಗಿನ ವಿಭಾಗ) ಇಲ್ಲಿ ಆರಂಭವಾದ 22ನೇ ಲಾಲ್ ಬಹದ್ದೂರ್ ಶಾಸ್ತ್ರಿ  ಹಾಕಿ ಟೂರ್ನಿಯ ಪಂದ್ಯದಲ್ಲಿ ಶುಭಾರಂಭ ಮಾಡಿದರು. 

 ನಾಲ್ಕು ರಾಷ್ಟ್ರಗಳು ಪಾಲ್ಗೊಂಡಿರುವ ಈ ಟೂರ್ನಿಯ ಮಂಗಳವಾರದ ಪಂದ್ಯದಲ್ಲಿ ಭಾರತ ತಂಡದವರು ತವರು ನೆಲದ ಅಭಿಮಾನಿಗಳಿಗೆ ಗೆಲುವಿನ ಉಡುಗೊರೆ ನೀಡಿದರು. ಈ ತಂಡ 3-2ಗೋಲುಗಳಿಂದ ನ್ಯೂಜಿಲೆಂಡ್ ತಂಡವನ್ನು ಮಣಿಸಿತು.
.
ಭಾರತ ಪಂದ್ಯದ ಆರಂಭದ 11ನೇ ನಿಮಿಷದಲ್ಲಿ ಪೆನಾಲ್ಟಿ ಕಾರ್ನರ್ ಮೂಲಕ ಗೋಲು ಗಳಿಸಿತು. ಈ ಗೋಲನ್ನು ಅನೂಪಾ ಬಾರ್ಲಾ ತಂದಿತ್ತರು. ನ್ಯೂಜಿಲೆಂಡ್ 12 ನೇ ನಿಮಿಷದಲ್ಲಿ ಗೋಲು ಕಲೆ ಹಾಕಿತು. ನಂತರ ಅಂಜು ಧಿಮಾನ್ (13ನೇ ನಿಮಿಷ) ಗೋಲು ಗಳಿಸಿದರು.

ವಿರಾಮದ ವೇಳೆಗೆ ಭಾರತ ತಂಡ 2-1ರಲ್ಲಿ ಮುನ್ನಡೆ ಸಾಧಿಸಿತ್ತು. ನಂತರ 43ನೇ ನಿಮಿಷದಲ್ಲಿ ಕಿವೀಸ್ ಮತ್ತೊಂದು ಗೋಲು ತಂದಿತ್ತು 2-2ರಲ್ಲಿ ಸಮಬಲ ಸಾಧಿಸಿತು.

ಈ ಗೋಲು ಬಂದ ನಂತರ ಉಭಯ ತಂಡಗಳಿಗೂ ಗೋಲು ಗಳಿಸಲು ಸಾಕಷ್ಟು ಅವಕಾಶ ಲಭಿಸಿದ್ದವು. ಅದರ ಪ್ರಯೋಜನ ಯಾರೂ ಪಡೆಯಲಿಲ್ಲ. ಆದ್ದರಿಂದ ಪಂದ್ಯ ಡ್ರಾ ದತ್ತ ಸಾಗುವ ಲಕ್ಷಣಗಳಿದ್ದವು. ಇದಕ್ಕೆ ಭಾರತದ ನಾಯಕಿ ಪೂನಮ್ ರಾಣಿ ಅವಕಾಶ ನೀಡಲಿಲ್ಲ. ಸಿಕ್ಕ ಅವಕಾಶ ಬಳಸಿಕೊಂಡು ಪೆನಾಲ್ಟಿ ಕಾರ್ನರ್ ಮೂಲಕ 68ನೇ ನಿಮಿಷದಲ್ಲಿ ಗೋಲು ತಂದಿತ್ತರು. ಈ ಗೋಲು ಭಾರತದ ಗೆಲುವಿನಲ್ಲಿ ಬಹು ಮುಖ್ಯ ಪಾತ್ರ ವಹಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT