ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಕಿ: ಭಾರತಕ್ಕೆ ಮತ್ತೆ ಸೋಲು

Last Updated 5 ಮೇ 2012, 19:30 IST
ಅಕ್ಷರ ಗಾತ್ರ

ಲಂಡನ್ (ಪಿಟಿಐ): ಸತತ ಸೋಲಿನ ಸಂಕಷ್ಟದಲ್ಲಿರುವ ಭಾರತ ಪುರುಷರ ಹಾಕಿ ತಂಡಕ್ಕೆ ಇಲ್ಲಿ ನಡೆಯುತ್ತಿರುವ ನಾಲ್ಕು ರಾಷ್ಟ್ರಗಳ `ಲಂಡನ್ ಒಲಿಂಪಿಕ್ಸ್ ಹಾಕಿ ಟೆಸ್ಟ್~ ಟೂರ್ನಿಯಲ್ಲಿ ಮತ್ತೊಂದು ನಿರಾಸೆ ಕಾಡಿತು.

ರಿವರ್ ಬ್ಯಾಂಕ್ ಅರೆನಾದಲ್ಲಿ ಶನಿವಾರ ನಡೆದ ಮೂರನೇ ಪಂದ್ಯದಲ್ಲಿ ಭಾರತ 1-2ಗೋಲುಗಳಿಂದ ಜರ್ಮನಿ ಎದುರು ಮುಗ್ಗರಿಸಿತು. ಭಾರತಕ್ಕೆ ಎದುರಾದ ಮೂರನೇ ಸೋಲು ಇದಾಗಿದೆ. ಹಿಂದಿನ ಎರಡೂ ಪಂದ್ಯಗಳಲ್ಲಿ ಆಸ್ಟ್ರೇಲಿಯಾ ಹಾಗೂ ಆತಿಥೇಯ ಲಂಡನ್ ಎದುರು ಸೋಲು ಅನುಭವಿಸಿತ್ತು.
 
15ನೇ ನಿಮಿಷದಲ್ಲಿಯೇ ಗೋಲು ಗಳಿಸಿದ ಸ್ಟ್ರೈಕರ್ ಶಿವೇಂದರ್ ಸಿಂಗ್ ಭಾರತಕ್ಕೆ ಆರಂಭಿಕ ಮುನ್ನಡೆ ತಂದುಕೊಟ್ಟರು. ಇದಕ್ಕೆ ತಿರುಗೇಟು ನೀಡಿದ ಜರ್ಮನಿಯ ಕ್ರಿಸ್ಟೋಫರ್ ವೆಸ್ಲೆ 27ನೇ ನಿಮಿಷದಲ್ಲಿ ಚೆಂಡನ್ನು ಗುರಿ ಸೇರಿಸಿ 1-1ರಲ್ಲಿ ಸಮಬಲ ಸಾಧಿಸಿದರು. ಪಂದ್ಯ ಡ್ರಾ ಹಾದಿಯಲ್ಲಿ ಸಾಗಿದ್ದಾಗ, ಫ್ಲೊರಿಯಿನಾ ಫಂಚ್ಸ್ 65ನೇ ನಿಮಿಷದಲ್ಲಿ ಗೋಲು ತಂದಿಟ್ಟರು. ಇದರಿಂದ ಜರ್ಮನಿ ಫೈನಲ್‌ಗೆ ಲಗ್ಗೆ ಇಟ್ಟಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT